ಅವಿವಾಹಿತೆಗೆ ಹುಟ್ಟಿದ ಈ ಸ್ಟಾರ್‌ ನಟಿ, ಸೂಪರ್ ಸ್ಟಾರ್ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೇ ಇಲ್ಲ!

Published : Dec 18, 2023, 03:40 PM ISTUpdated : Dec 23, 2023, 02:43 PM IST

ಆಕೆ ಭಾರತದ ಸೂಪರ್‌ ಸ್ಟಾರ್‌ ನಟಿ. ಆಕೆಯ ತಂದೆ ಕೂಡ ದಕ್ಷಿಣದ ಸೂಪರ್‌ ಸ್ಟಾರ್ ನಟ. ಅಮ್ಮ ಕೂಡ ನಟಿ. ಆದರೆ ಅವಿವಾಹಿತ ಅಮ್ಮನಿಗೆ ಆಕೆ ಜನಿಸಿದಳು. ಆದರೆ ತಂದೆ ಯಾರೆಂಬುದು ತಾಯಿಯಿಂದ ತಿಳಿದಿತ್ತು. ಆದರೆ ಕೊನೆಗಾಲದಲ್ಲಿ ತಂದೆಯ ಅಂತ್ಯ ಸಂಸ್ಕಾರಕ್ಕೆ ಪ್ರಸಿದ್ಧ ನಟಿ, ಮಗಳು ಬರಲೇ ಇಲ್ಲ.

PREV
110
ಅವಿವಾಹಿತೆಗೆ ಹುಟ್ಟಿದ ಈ ಸ್ಟಾರ್‌ ನಟಿ, ಸೂಪರ್ ಸ್ಟಾರ್ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲೇ ಇಲ್ಲ!

ಅಂದಿನ ಕಾಲಕ್ಕೆ ತಮಿಳು ಸಿನಿಮಾ ಇತಿಹಾಸದಲ್ಲಿ  ಸ್ಟಾರ್‌ ನಟನೆಂದರೆ ಅದು ಜೆಮಿನಿ ಗಣೇಶನ್ ದಶಕಗಳ ಕಾಲ, ಶಿವಾಜಿ ಗಣೇಶನ್ ಮತ್ತು ಎಂಜಿ ರಾಮಚಂದ್ರನ್ ಜೊತೆಗೆ, ರಜನೀಕಾಂತ್, ಕಮಲ್ ಹಾಸನ್ ಮತ್ತು ವಿಜಯ್ ಅವರಂತಹವ ಸ್ಥಾನಕ್ಕೆ ಏರುವ ಮೊದಲೇ ಆ ಹಕ್ಕು ಇದ್ದಿದ್ದು ಜೆಮಿನಿ ಗಣೇಶ್ ಗೆ. ಅವರನ್ನು ಅಂದಿನ ಕಾಲದ ಅತಿದೊಡ್ಡ ಕಾಲಿವುಡ್ ಸೂಪರ್‌ಸ್ಟಾರ್ ಎಂದು ಪರಿಗಣಿಸಲಾಗಿತ್ತು.
 

210

ಆದರೆ ಜೆಮಿನಿ ಗಣೇಶನ್ ಅವರ  ವೈಯಕ್ತಿಕ ಜೀವನವು ಕ್ಯಾಮೆರಾ ಕಣ್ಣಿಂದ ಹೊರಗಿದೆ. ಅದರಲ್ಲಿ ಒಂದು ಜೀವನ ಭಾಗವು ಬಾಲಿವುಡ್‌ಗೆ  ಸಂಪರ್ಕ ಇದ್ದು,  ದುರಂತವಾಗಿ ಉಳಿದಿದೆ. ಈ ಸೂಪರ್‌ಸ್ಟಾರ್ ಹಲವಾರು ಬಾರಿ ವಿವಾಹವಾಗಿದ್ದರು, ಮೊದಲು 1940 ರಲ್ಲಿ ಅಲಮೇಲು ಮತ್ತು ನಂತರ 1952 ರಲ್ಲಿ ಸಾವಿತ್ರಿ ಅವರನ್ನು ಮದುವೆಯಾದರು. ಸಾವಿತ್ರಿಯೊಂದಿಗಿನ ವಿವಾಹದ ಮೊದಲು ಜೆಮಿನಿ ಈಗಾಗಲೇ ತಮಿಳು ನಟಿ ಪುಷ್ಪವಲ್ಲಿ ಅವರೊಂದಿಗೆ  ಸಂಬಂಧವನ್ನು ಹೊಂದಿದ್ದರು.  1997ರಲ್ಲಿ ಜೂಲಿಯಾನ ಗಣೇಶನ್ ಅವರನ್ನು ವಿವಾಹವಾದರು.

310

1954 ರಲ್ಲಿ, ಪುಷ್ಪವಲ್ಲಿ ಅವರು ಗಣೇಶನ್ ಅವರಿಂದ ಪಡೆದ ಭಾನುರೇಖಾ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಗಣೇಶ್ ಮತ್ತು ಪುಷ್ಪವಲ್ಲಿ ವಿವಾಹವಾಗಿರಲಿಲ್ಲ. ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟವರು ರೇಖಾ. ಅವರೇ  ಜೆಮಿನಿ  ಮಗಳು ಭಾನುರೇಖಾ ಗಣೇಶನ್. ಆದರೂ ಅವರು ತನ್ನ ತಂದೆಯ ಉಪನಾಮವನ್ನು ಎಂದಿಗೂ ಬಳಸಲಿಲ್ಲ.   

410

ರೇಖಾ ಅವರ ಜೀವನದಲ್ಲಿ ತಂದೆ ಯಾವಾಗಲೂ ಜೊತೆಯಲ್ಲಿರಲಿಲ್ಲ.  ಎಂಬುದನ್ನು ಹಲವು ಬಾರಿ ಹೇಳಿದ್ದಾರೆ. ಗಣೇಶ್ ತಮ್ಮ ಜೀವನದಲ್ಲಿ ಇತರ ಎರಡು ಕುಟುಂಬಗಳನ್ನು ಹೊಂದಿದ್ದರು. ಹೀಗಾಗಿ ರೇಖಾ  ಮಗುವಾಗಿದ್ದಾಗಲೇ ಹೊರಬಂದರು. ಅವರು ನಮ್ಮ ಜೀವನದಿಂದ ಹೊರನಡೆದಾಗ ನಾನು ಮಗುವಾಗಿದ್ದೆ. ಅವರು ಮನೆಯಲ್ಲಿದ್ದ ಸಮಯವೂ ನನಗೆ ನೆನಪಿಲ್ಲ ಎಂದು ರೇಖಾ ಒಮ್ಮೆ ಸಂದರ್ಶನದಲ್ಲಿ ಹೇಳಿದ್ದರು. 
 

510

ನನ್ನ ತಂದೆಯ ಪ್ರೀತಿಯ ನೆನಪಿನಲ್ಲಿ ಚಂಚಲ ಮನಸ್ಥಿತಿಯಿಂದ  ಕುಡಿತಕ್ಕೆ ಒಳಗಾದರು. ಅವರ ಎಲ್ಲಾ ಮಕ್ಕಳು, ನಾವು ಸೇರಿ ಒಂದೇ ಶಾಲೆಯಲ್ಲಿ ಓದುತ್ತಿದ್ದೆವು. ಒಂದೆರಡು ಬಾರಿ ಅವನು ಇತರ ಮಕ್ಕಳನ್ನು ಬಿಡಲು ಬಂದನು, ಅಗ ಅವನ ಬಗ್ಗೆ ನನ್ನ ಮೊದಲ ಅನಿಸಿಕೆಯಾಗಿತ್ತು. 'ಅಯ್ಯೋ ಅಪ್ಪಾ..' ಎಂದು ನಾನು ಭಾವಿಸಿದೆ, ಆದರೆ ನನಗೆ ಅವರನ್ನು ಭೇಟಿ ಮಾಡಲು ಅವಕಾಶವೇ ಇರಲಿಲ್ಲ. ಅವರು ನನ್ನನ್ನು ಅಲ್ಲಿ ಗಮನಿಸಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಅವನು ನನ್ನನ್ನು ನೋಡಲೇ ಇಲ್ಲ. ಎಂದು ರೇಖಾ ಹೇಳಿದ್ದರು.

610

ರೇಖಾ ಹದಿಹರೆಯದವರಾಗಿದ್ದಾಗ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಅವರ ಕುಟುಂಬಕ್ಕೆ ದುಡಿಯಲೇ ಬೇಕಿತ್ತು. ತಂದೆಯವರು ಸೂಪರ್ ಸ್ಟಾರ್ ಆಗಿದ್ದರು ಎಂಬ ವಾಸ್ತವದ ಹೊರತಾಗಿಯೂ ಅನಿವಾರ್ಯವಾಗಿತ್ತು. ಇದು ನಟಿಯ ತಂದೆಗೆ ಕೋಪ ತರಿಸಿತು . 1994 ರಲ್ಲಿ, ಗಣೇಶನ್‌ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಗೆದ್ದಾಗ, ರೇಖಾ ಅವರಿಗೆ ಅದನ್ನು ತೋರಿಸಿದರು. ಇಬ್ಬರು ಈ ಮೂಲಕ ಪುನರ್ಮಿಲನ ಹೊಂದಿದರು. ಆದರೂ ತಂದೆಯ ಬಗೆಗಿನ ನೋವು ನಿಲ್ಲಲಿಲ್ಲ.

710

2005 ರಲ್ಲಿ, ಗಣೇಶನ್ 84 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರ ಏಳು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದರು. ಅವರ ಇತರ ಮಕ್ಕಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರೆ, ರೇಖಾ ಅವರು ಭಾಗವಹಿಸಲಿಲ್ಲ. ನಟಿ ಹಿಮಾಚಲ ಪ್ರದೇಶದ ಶೂಟಿಂಗ್‌ನಲ್ಲಿದ್ದರು. ಶೂಟಿಂಗ್‌ನಿಂದ ಬಿಡುವು ತೆಗೆದುಕೊಳ್ಳಲಿಲ್ಲ.

810

ತಂದೆಯ ಮರಣದ ಒಂದು ವರ್ಷದ ನಂತರ, ರೇಖಾ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ತನ್ನ ತಂದೆಯ ಮರಣದ ಬಗ್ಗೆ ಮಾತನಾಡಿದರು.  ಅವನು ನನ್ನಲ್ಲಿ ತುಂಬಾ ಭಾಗವಾಗಿರುವಾಗ ನಾನು ಅವನಿಗಾಗಿ ಏಕೆ ದುಃಖಿಸಬೇಕು? ಅವನ ಜೀನ್‌ಗಳು, ಅವನ ಬೋಧನೆಗಳು, ಶ್ರೀಮಂತ ಜೀವನ ಮತ್ತು ಅವನ ಸಂಪೂರ್ಣ ಅಸ್ತಿತ್ವಕ್ಕಾಗಿ ನಾನು ತುಂಬಾ ಕೃತಜ್ಞರಾಗಿರುವಾಗ ನಾನು ಏಕೆ ದುಃಖಿಸಬೇಕು? ಯಾವುದಕ್ಕೆ ದುಃಖ? ಎಂದು ಪ್ರಶ್ನಿಸಿದ್ದರು.

910

ನಾನು ಅವರೊಂದಿಗೆ ಅಹಿತಕರ ಕ್ಷಣಗಳನ್ನು ಹಂಚಿಕೊಳ್ಳಬೇಕಾಗಿಲ್ಲ ಎಂದು ನನಗೆ ಸಂತೋಷವಾಗಿದೆ. ಅವನು ನನ್ನ ಕಲ್ಪನೆಯಲ್ಲಿ ನನಗಾಗಿ ಇದ್ದನು. ಮತ್ತು ಇದು ವಾಸ್ತವಕ್ಕಿಂತ ಹೆಚ್ಚು ಸುಂದರವಾಗಿರುತ್ತದೆ. ನಾನು ಪ್ರೀತಿಸುವ ಎಲ್ಲವೂ ಲೌಕಿಕ ಸಮಯದ ನಿರ್ಬಂಧಗಳಿಂದ ಅನರ್ಹವಾಗಿದೆ ಎಂದು ಹೇಳಿದ್ದರು. 

1010

ಇವರ ಒಡ ಹುಟ್ಟಿದ ಸಹೋದರಿ ರಾಧಾ ಕೂಡ ತಮಿಳಿನ ನಟಿಯಾಗಿದ್ದರು. ಬಳಿಕ ಮದುವೆಯಾಗಿ ಚಿತ್ರರಂಗದಿಂದ ದೂರವಾಗಿದ್ದಾರೆ. ನಟಿ ರೇಖಾ ಇಂದಿಗೂ ಮದುವೆಯಾಗದೆ ಒಂಟಿಯಾಗಿದ್ದಾರೆ. ಇವರ ತಾಯಿ ಪುಪ್ಪವಲ್ಲಿ 1991ರಲ್ಲಿ ಚೆನ್ನೈನಲ್ಲಿ ನಿಧನರಾದರು.

click me!

Recommended Stories