OTTಗೆ ಬರ್ತಿದೆ 3,000 ಕೋಟಿ ಕಲೆಕ್ಷನ್ ಮಾಡಿದ ಹಾರರ್ ಸಿನಿಮಾ

Published : Jun 23, 2025, 01:08 PM IST

300 ಕೋಟಿಗೂ ಹೆಚ್ಚು ಗಳಿಕೆ ಕಂಡ ಹಾರರ್ ಸಿನಿಮಾ ಒಟಿಟಿಗೆ ಬರುತ್ತಿದೆ. ಏಪ್ರಿಲ್‌ನಲ್ಲಿ ಬಿಡುಗಡೆಯಾದ ಈ ಚಿತ್ರ  ಇಬ್ಬರು ಅವಳಿ ಸೋದರರ 1930ರ ಘಟನೆಯನ್ನಾಧರಿಸಿದ ಕಥೆಯನ್ನು ಹೊಂದಿದೆ.

PREV
15

ಈ ವರ್ಷ ಬಿಡುಗಡೆಯಾದ ಹಾರರ್ ಸಿನಿಮಾವೊಂದು OTT ಅಂಗಳಕ್ಕೆ ಪ್ರವೇಶಿಸುತ್ತಿದೆ. ಈ ಚಿತ್ರ ಬಾಕ್ಸ್‌ ಆಫಿಸ್‌ನಲ್ಲಿ 3000 ಕೋಟಿ ರೂ.ಗೂ ಅಧಿಕ ಗಳಿಕೆಯನ್ನು ಮಾಡಿದೆ. ಯಾವುದು ಈ ಸಿನಿಮಾ? ಯಾವ OTT ಪ್ಲಾಟ್‌ಫಾರಂ ಮತ್ತು ಎಂದು ಬಿಡುಗಡೆಯಾಗಲಿದೆ ಎಂದು ನೋಡೋಣ ಬನ್ನಿ.

25

ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಹಾರರ್ ಕಥಾನಕವುಳ್ಳ ಸಿನಿಮಾ ನೋಡಲು ಒಟಿಟಿ ವೀಕ್ಷಕರು ಕಾಯುತ್ತಿದ್ದಾರೆ. ಸುಮಾರು ಎರಡೂವರೆ ತಿಂಗಳ ಬಳಿಕ ಸಿನ್ನೆರ್ಸ್ (Sinners) ಒಟಿಟಿಗೆ ಬರುತ್ತಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಮಿಸ್ ಮಾಡಿಕೊಂಡವರಿಗೆ ನೋಡುವ ಅವಕಾಶ ಸಿಗಲಿದೆ.

35

ಏಪ್ರಿಲ್ 18ರಂದು ಸಿನ್ನೆರ್ಸ್ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನದಿಂದಲೇ ಸಿನಿಮಾ ಕುರಿತು ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು. ಅದೇ ದಿನ ಭಾರತದಲ್ಲಿಯೂ ಸಿನ್ನೆರ್ಸ್ ರಿಲೀಸ್ ಆಗಿದ್ದು, ಒಟ್ಟು 10 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ. ಮೈಕೆಲ್ ಬಿ ಜೋರ್ಡಾನ್, ಹೈಲೀ ಸ್ಟೀಫೆಲ್ಡ್ ಮತ್ತು ಮೈಲ್ಸ್ ಕೀಟನ್ ಪ್ರಮುಖನ ಪಾತ್ರದಲ್ಲಿ ನಟಿಸಿದ್ದಾರೆ.

45

ಏಪ್ರಿಲ್‌ನಲ್ಲಿ ಬಿಡುಗಡೆಯಾದ ಸಿನ್ನೆರ್ಸ್ 3 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜೇಬಿಗೆ ತುಂಬಿಸಿಕೊಂಡಿದೆ. ವರದಿಗಳ ಪ್ರಕಾರ, ಕೊರೊನಾ ಸಾಂಕ್ರಾಮಿಕ ಕಾಲಘಟ್ಟದ ಬಳಿಕ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಮೊದಲ ಹಾರರ್ ಸಿನಿಮಾ ಆಗಿದೆ.

55

ರಿಲೀಸ್ ಯಾವಾಗ ಮತ್ತು ಎಲ್ಲಿ?

ಸಿನ್ನೆರ್ಸ್ ಜುಲೈ 4 ರಿಂದ OTT ಪ್ಲಾಟ್‌ಫಾರ್ಮ್ ಮ್ಯಾಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಈ ಚಿತ್ರವು 1930ರ ಘಟನೆಯನ್ನಾಧರಿಸಿದ್ದು, ಇಬ್ಬರು ಅವಳಿ ಸಹೋದರರ ಕಥೆಯಾಗಿದೆ. ಒಂದು ಜೂಕ್ ಬಾಕ್ಸ್ ತೆರೆದ ನಂತರ ಇಬ್ಬರ ಜೀವನದಲ್ಲಿ ಹಲವು ವಿಚಿತ್ರ ಘಟನೆಗಳು ನಡೆಯುತ್ತವೆ.

Read more Photos on
click me!

Recommended Stories