Cannes 2022 - ಫ್ರಾನ್ಸ್‌ನ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಲಿರುವ Hina khan ಫಸ್ಟ್‌ ಲುಕ್‌

First Published | May 16, 2022, 6:18 PM IST

ಹಿನಾ ಖಾನ್ (Hina khan) ಟಿವಿ ಜಗತ್ತಿನಲ್ಲಿ  ಪ್ರಸಿದ್ಧರಾದ ನಂತರ ಚಲನಚಿತ್ರ ಜಗತ್ತಿನಲ್ಲಿ ಯಶಸ್ಸನ್ನು ಸಾಧಿಸುವತ್ತ ಕೆಲಸ ಮಾಡುತ್ತಿದ್ದಾರೆ. ಈ ದಿನಗಳಲ್ಲಿ ಅವರು ಕೇನ್ಸ್ ಚಲನಚಿತ್ರೋತ್ಸವದ (cannes 2022)  ಕಾರಣದಿಂದ ನ್ಯೂಸ್‌ನಲ್ಲಿದ್ದಾರೆ. ನಟಿ ಎರಡನೇ ಬಾರಿಗೆ ಈ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಫ್ರಾನ್ಸ್ ನೆಲಕ್ಕೂ ಕಾಲಿಟ್ಟಿದ್ದಾರೆ.

2019 ರಲ್ಲಿ ನಡೆದ ಕೇನ್ಸ್ ಚಲನಚಿತ್ರೋತ್ಸವದಲ್ಲಿ  ಭಾಗವಹಿಸಿಸಿದ್ದ ಹಿನಾ ಖಾನ್  ಏಪ್ರಿಲ್ 14 ರಂದು ಫ್ರಾನ್ಸ್‌ಗೆ ತೆರಳಿದರು. ಅವರು  ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಈ ಸಮಯದಲ್ಲಿ ಅವರು ಲ್ಯಾವೆಂಡರ್ ಬಣ್ಣದ ಉಡುಪನ್ನು ಧರಿಸಿದ್ದರು. ಸ್ಟೈಲಿಶ್ ಸನ್ ಗ್ಲಾಸ್ ನೊಂದಿಗೆ ಗ್ಲಾಮರಸ್ ಲುಕ್ ನೀಡುತ್ತಿದ್ದರು.

ಯೇ ರಿಶ್ತಾ ಕ್ಯಾ ಕೆಹ್ಲಾತಾ' ಖ್ಯಾತಿಯ ಹಿನಾ ಖಾನ್ ಫ್ರಾನ್ಸ್ ನೆಲಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ  ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಹಿನಾ ಕಾರಿನೊಳಗೆ ಕುಳಿತಿದ್ದಾರೆ. ಸಾಂಪ್ರದಾಯಿಕ ಬಿಳಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವಳು ಆಫ್ ಸೋಲ್ಡರ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

Tap to resize

ಕಿರುತೆರೆ ನಟಿ ಹಿನಾ ಖಾನ್ ಈ ಉಡುಪಿನೊಂದಿಗೆ ಶೈನಿಂಗ್‌ ಮೇಕಪ್ ಮಾಡಿದ್ದಾರೆ. ಕಣ್ಣುಗಳನ್ನು ಹೈಲೈಟ್  ಮಾಡಲಾಗಿದೆ. ಇಡೀ ಲುಕ್‌ನಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.

ಹಿನಾ 2019 ರಲ್ಲಿ ಎರಡು ಬಾರಿ ಕೇನ್ಸ್‌ನಲ್ಲಿ ರೆಡ್ ಕಾರ್ಪೆಟ್‌ನಲ್ಲಿ ನಡೆದರು. ಈ ಬಾರಿ ಅವರು ತಮ್ಮ ಮುಂಬರುವ ಚಿತ್ರ 'ಕಂಟ್ರಿ ಆಫ್ ದಿ ಬ್ಲೈಂಡ್' ಅನ್ನು ಪ್ರಚಾರ ಮಾಡುತ್ತಾರೆ. ಈ ಬಾರಿ ಯಾವ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. 

ಈ ಬಾರಿ ದೀಪಿಕಾ ಪಡುಕೋಣೆ ಜ್ಯೂರಿ ಟೀಮ್‌ನಲ್ಲಿ ಸೇರಿಕೊಳ್ಳುತ್ತಾರೆ ಎಂಬುದು ಹೆಮ್ಮೆಯ  ಸಂಗತಿಯಾಗಿದೆ. ಅಕ್ಷಯ್ ಕುಮಾರ್ ಕೇನ್ಸ್‌ಗೆ ಹಾಜರಾಗುವುದಿಲ್ಲ. ಅಕ್ಷಯ್ ಕುಮಾರ್ ಕೂಡ ಕೇನ್ಸ್‌ಗೆ ಹಾಜರಾಗಲಿದ್ದರು. ಆದರೆ ಅವರಿಗೆ ಕೊರೊನಾ ಸೋಂಕು ತಗುಲಿದ್ದು ಈ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. 

ಪೂಜಾ ಹೆಗ್ಡೆ, ನವಾಜುದ್ದೀನ್ ಸಿದ್ದಿಕಿ, ಎಆರ್ ರೆಹಮಾನ್ ಸೇರಿದಂತೆ ಹಲವು ಖ್ಯಾತನಾಮರು ಕೇನ್ಸ್ 2022ರಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇನ್ಸ್ ಮೇ 17 ರಿಂದ ಮೇ 28 ರವರೆಗೆ ನಡೆಯಲಿದೆ.
 

Latest Videos

click me!