ವೃಂದಾವನ ಆಶ್ರಮದಲ್ಲಿ ವಮಿಕಾ ಜೊತೆ ಅನುಷ್ಕಾ-ವಿರಾಟ್; ವಿಶೇಷ ಪೂಜೆ ಸಲ್ಲಿಸಿದ ಸ್ಟಾರ್ ದಂಪತಿ ಫೋಟೋ ವೈರಲ್

Published : Jan 06, 2023, 11:51 AM IST

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ವೃಂದಾವನದ ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ವಮಿಕಾ ಜೊತೆ ಇರುವ ವಿರಾಟ್ ಮತ್ತು ಅನುಷ್ಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV
17
ವೃಂದಾವನ ಆಶ್ರಮದಲ್ಲಿ ವಮಿಕಾ ಜೊತೆ ಅನುಷ್ಕಾ-ವಿರಾಟ್; ವಿಶೇಷ ಪೂಜೆ ಸಲ್ಲಿಸಿದ ಸ್ಟಾರ್ ದಂಪತಿ ಫೋಟೋ ವೈರಲ್

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ವೃಂದಾವನದ ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಕುಟುಂಬ ಸಮೇತರಾಗಿ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಗಳು ವಮಿಕಾ ಕೂಡ ಜೊತೆಯಲ್ಲಿದ್ದರು. ಮೂವರು ಆಶ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿಡಿಯೋ ಸಮಾಜಿಕ ಜಲತಾಣದಲ್ಲಿ ವೈರಲ್.

27

ಸದ್ಯ ವೈರಲ್ ಆಗಿರುವ ವೀಡಿಯೋದಲ್ಲಿ ವಮಿಕಾ ಮುಖ ಕಾಣಿಸಿಲ್ಲ. ವಮಿಕಾ ಮುಖಕ್ಕೆ ಹಾರ್ಟ್ ಇಮೋಜಿ ಇರಿಸಲಾಗಿದೆ. ವಮಿಕಾಳನ್ನು ನೋಡಲು ಸಾಧ್ಯವಾಗದೆ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. 

37

ಅನುಷ್ಕಾ ಮಗಳನ್ನು ಕೂರಿಸಿಕೊಂಡು ಕೂತಿದ್ದಾರೆ. ಪಕ್ಕದಲ್ಲಿ ವಿರಾಟ್ ಕೊಹ್ಲಿ ಕುಳಿತುಕೊಂಡಿದ್ದಾರೆ. ಇಬ್ಬರೂ ದೇವರಲ್ಲಿ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ತೀವ್ರ ಚಳಿ ಇರುವ ಕಾರಮ ಅನುಷ್ಕಾ ಮತ್ತು ವಿರಾಟ್ ದಂಪತಿ ಫುಲ್ ಕವರ್ ಮಾಡಿಕೊಂಡಿದ್ದಾರೆ. 

47

ಪೂಜೆ ಬಳಿಕ ವಿರಾಟ್ ಕೊಹ್ಲಿ ಮಗಳನ್ನು ಎತ್ತಿಕೊಂಡು ಹೋದರು. ಅನುಷ್ಕಾ-ವಿರಾಟ್ ಪೂಜೆಯ ವಿಡಿಯೋ ಇಬ್ಬರ ಫ್ಯಾನ್ ಪೇಜ್‌ಗಳಲ್ಲಿ ಹರಿದಾಡುತ್ತಿದ್ದಾರೆ. ವೈರಲ್ ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಈ ಕುಟುಂಬಕ್ಕೆ ದೇವರು ಆಶೀರ್ವಾದಿಸಲಿ' ಎಂದು ಹೇಳಿದ್ದಾರೆ. 'ತುಂಬಾ ಮುದ್ದಾಗಿದ್ದಾಳೆ ವಮಿಕಾ' ಎಂದು ಹಾಡಿ ಹೊಗಳುತ್ತಿದ್ದಾರೆ. 

57

ಅಂದಹಾಗೆ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಬುಧವಾರ ಬೆಳಿಗ್ಗೆ ವೃಂದಾವನಕ್ಕೆ ಭೇಟಿ ನೀಡಿದರು. ಅಲ್ಲಿರೋರಿಗೆ ಬ್ಲಾಂಕೆಟ್ ವಿತರಿಸಿದರು. ಬಳಿಕ ಆಶ್ರಮದಲ್ಲಿ ಒಂದು ಗಂಟೆ ಧ್ಯಾನ ಮಾಡಿದರು. ಕೆಲವು ಸಮಯ ಆಶ್ರಮದಲ್ಲಿ ಕಳೆದು ಅಲ್ಲಿಂದ ಹೊರಟು. 
 

67

ಕಳೆದ ವರ್ಷ ನವೆಂಬರ್‌ನಲ್ಲಿ ಅನುಷ್ಕಾ, ವಿರಾಟ್ ಮತ್ತು ವಮಿಕಾ ಉತ್ತರಾಖಂಡದ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಗಲೂ ಸ್ಟಾರ್ ಜೋಡಿ ಬ್ಲಾಂಕೆಟ್‌ಗಳನ್ನು ವಿತರಿಸುತ್ತಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಆಗಾಗ ದೇವಸ್ಥಾನ ಮತ್ತು ಆಶ್ರಮಗಳಿಗೆ ಭೇಟಿ ನೀಡುತ್ತಿರುತ್ತಾರೆ. 

77

ಅನುಷ್ಕಾ ಮತ್ತು ವಿರಾಟ್ ಹೊಸ ವರ್ಷ ಆಚರಣೆ ಮಾಡಲು ದುಬೈ ಹಾರಿದ್ದರು. ಅದ್ದೂರಿಯಾಗಿ ಹೊಸ ವರ್ಷ ಆಚರಿಸಿ ದುಬೈನಿಂದ ಹಿಂತಿರುಗಿದ್ದಾರೆ. ಅನುಷ್ಕಾ ಮತ್ತೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಮದುವೆ, ಮಗು ಬಳಿಕ ಮತ್ತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದು ಚಕ್ಡಾ ಎಕ್ಸ್‌ಪ್ರೆಸ್ ಮೂಲಕ ಮತ್ತೆ ಬರ್ತಿದ್ದಾರೆ.  
 

Read more Photos on
click me!

Recommended Stories