ಬಾಲಿವುಡ್ ನಟ ಧರ್ಮೇಂದ್ರ ಅವರು ಸದ್ಯ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಲವ್ ಸ್ಟೋರಿ ಇಲ್ಲಿದೆ. ಈಗಾಗಲೇ ಮದುವೆಯಾಗಿದ್ದ ಧರ್ಮೇಂದ್ರ ಡ್ರೀಮ್ ಗರ್ಲ್ ಮೇಲೆ ಲವ್ ಆಗಿದ್ದು ಹೇಗೆ ಇಲ್ಲಿದೆ ಮಾಹಿತಿ.
ಆಕೆ ಬಾಲಿವುಡ್‌ನ "ಡ್ರೀಮ್ ಗರ್ಲ್", ಆಕೆಯ ಸೌಂದರ್ಯಕ್ಕೆ ಮನಸೋಲದವರೇ ಇರಲಿಲ್ಲ. ಆತ "He-Man. ಆತನ ಚಾರ್ಮಿಂಗ್, ಡೈನಾಮಿಕ್ ಪರ್ಸನಾಲಿಟಿಗೆ ಮನಸೋಲದವರು ಯಾರು? ಇದು ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರ ಪ್ರೇಮ ಕಥೆ. ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ನಡುವೆ ತೆರೆದುಕೊಂಡದ್ದು ಕೇವಲ ಪ್ರಣಯವಲ್ಲ; ಅದು ಸಂಪ್ರದಾಯ, ಧರ್ಮ ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಧಿಕ್ಕರಿಸುವ ಧೈರ್ಯಶಾಲಿ ಪ್ರೀತಿಯ ಮಹಾಕಾವ್ಯವಾಗಿತ್ತು.
28
ಈಗಾಗಲೇ ಮದುವೆಯಾಗಿದ್ದ ಧರ್ಮೇಂದ್ರ
ಇದೆಲ್ಲವೂ 1970 ರಲ್ಲಿ ತುಮ್ ಹಸೀನ್ ಮೈ ಜವಾನ್ ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು, ಅಲ್ಲಿ ರೀಲ್-ಲೈಫ್ ರೊಮ್ಯಾನ್ಸ್ ಅಲ್ಲ ಈ ಜೋಡಿಗೆ ನಿಜವಾದ ಪ್ರೀತಿ ಹುಟ್ಟಿತು.. ಆ ಸಮಯದಲ್ಲಿ, ಧರ್ಮೇಂದ್ರ ಈಗಾಗಲೇ ಪ್ರಕಾಶ್ ಕೌರ್ ಅವರನ್ನು ಮದುವೆಯಾಗಿದ್ದರು, ಅವರಿಗೆ ಇಬ್ಬರು ಗಂಡು ಮಕ್ಕಳಾದ ಸನ್ನಿ ಮತ್ತು ಬಾಬಿ ಡಿಯೋಲ್ ಕೂಡ ಇದ್ದರು. ಆದರೂ, ಅವರು ಹೇಮಾ ಅವರನ್ನು ಭೇಟಿಯಾದಾಗ, ಮತ್ತೆ ಪ್ರೀತಿ ಉಂಟಾಗಿತ್ತು.
38
ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಪ್ರೇಮಕಥೆ:
ಇಬ್ಬರೂ 1970 ರ ದಶಕದ ಹೊತ್ತಿಗೆ ಸೂಪರ್‌ಸ್ಟಾರ್‌ಗಳಾಗಿದ್ದರು. ದೊಡ್ಡ ಎಕ್ಸ್ ಪ್ರೆಸ್ಸಿವ್ ಕಣ್ಣುಗಳನ್ನು ಹೊಂದಿರುವ ದಕ್ಷಿಣ ಭಾರತದ ಸುಂದರಿ ಹೇಮಾ, ಭಾರತದಾದ್ಯಂತ ಪ್ರೇಕ್ಷಕರ ಹೃದಯಗಳನ್ನು ಗೆದ್ದರು. ಧರ್ಮೇಂದ್ರ ಈಗಾಗಲೇ ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ರೊಮ್ಯಾಂಟಿಕ್ ನಾಯಕರಲ್ಲಿ ಒಬ್ಬರಾಗಿದ್ದರು.
ಆರಂಭದಲ್ಲಿ ಹೇಮಾ ಅಂತರ ಕಾಯ್ದುಕೊಂಡಿದ್ದಳು. ಅವರಿಗೆ ಎರಡನೇ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಈ ಜೋಡಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಿದಂತೆ, ಇಬ್ಬರ ನಡುವೆ ಪ್ರೀತಿ ಉಂಟಾಯಿತು. ಆದರೆ ವಿವಾಹಿತ ಪುರುಷನನ್ನು ಮದುವೆಯಾಗುವ ಕಲ್ಪನೆಯನ್ನು ಹೇಮಾ ತಂದೆ ತೀವ್ರವಾಗಿ ವಿರೋಧಿಸಿದರು, ಧರ್ಮೇಂದ್ರ ಅವರ ಹೆಂಡತಿ ಅವರಿಗೆ ವಿಚ್ಛೇದನ ನೀಡಲು ಕೂಡ ನಿರಾಕರಿಸಿದಳು. ಆದರೂ, ಈ ಯಾವುದೇ ಅಡೆತಡೆಗಳು ಅವರ ಪ್ರೀತಿಗೆ ತಡೆಯಾಗಲಿಲ್ಲ
58
ಇಸ್ಲಾಂ ಧರ್ಮಕ್ಕೆ ಮತಾಂತರ
ಧರ್ಮೇಂದ್ರ ಅವರ ಮೊದಲ ಪತ್ನಿ ಬೇರೆಯಾಗಲು ನಿರಾಕರಿಸಿದ್ದರಿಂದ ಕಾನೂನುಬದ್ಧವಾಗಿ ಮದುವೆಯಾಗಲು ಈ ಜೋಡಿ 1979 ರಲ್ಲಿ, ಇಸ್ಲಾಂಗೆ ಮತಾಂತರಗೊಳ್ಳಲು ನಿರ್ಧರಿಸಿದರು. ಈ ಜೋಡಿ ಧರ್ಮೇಂದ್ರ ದಿಲಾವರ್ ಖಾನ್ ಆದರು ಮತ್ತು ಹೇಮಾ ಆಯಿಷಾ ಬಿ ಆರ್. ಚಕ್ರವರ್ತಿ ಎನ್ನುವ ಹೆಸರನ್ನು ಪಡೆದು, ಇಸ್ಲಾಂ ಧರ್ಮದ ಸಂಪ್ರದಾಯದಂತೆ ಮದುವೆಯಾದರು. ನಂತರ ಈ ಜೋಡಿ ಹೇಮಾ ಅವರ ದಕ್ಷಿಣದ ಅಯ್ಯಂಗಾರ್ ಸಂಪ್ರದಾಯದಲ್ಲಿ ಮತ್ತೆ ಸರಳವಾಗಿ ವಿವಾಹವಾದರು.
68
ಪ್ರೀತಿ ಶುರುವಾಗಿದ್ದು ಹೀಗೆ
2013 ರ ಸಂದರ್ಶನವೊಂದರಲ್ಲಿ, ಯಮ್ಲಾ ಪಗ್ಲಾ ದೀವಾನಾ ಚಿತ್ರೀಕರಣದ ಸಮಯದಲ್ಲಿ ತಾನು ಈ ಜೋಡಿ ಪ್ರೀತಿಸುತ್ತಿದ್ದರು. ಧರ್ಮೇಂದ್ರ ಅವರ ಮೋಜಿನ ನೃತ್ಯ, ತುಂಟತನ ಹೇಮಾ ಹೃದಯವನ್ನು ಗೆದ್ದಿತ್ತು, ಇನ್ನು ಶೋಲೆ ಚಿತ್ರೀಕರಣದ ವೇಳೆ ಹೇಮಾ ಅವರನ್ನು ಗಟ್ಟಿಯಾಗಿ ಅಪ್ಪಿಕೊಳ್ಳುವ ಸೀನ್ ಶೂಟ್ ಮಾಡುವಾಗ, ತುಂಬಾ ಹೊತ್ತು ಹೇಮಾರನ್ನು ಗಟ್ಟಿಯಾಗಿ ಹಿಡಿಯಲು, ಲೈಟ್ ಬಾಯ್ಸ್ ಗೆ ಲಂಚ ನೀಡಿದ್ದರಂತೆ ಧರ್ಮೇಂದ್ರ.
78
ಐದು ವರ್ಷ ಕಾಲ ಡೇಟಿಂಗ್
ಅವರ ಪ್ರೇಮಕಥೆಯು ಕ್ಷಣಿಕವಾಗಿರಲಿಲ್ಲ. ಮದುವೆಯಾಗುವ ಮೊದಲು, ಅವರು ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಇವರು ಗಾಸಿಪ್ ನಿಂದ ದೂರ ಉಳಿದಿದ್ದರು. ಮದುವೆಯಾದ ನಂತರ ಇಲ್ಲಿವರೆಗೂ ಈ ಜೋಡಿ ಪ್ರೀತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಈ ಜೋಡಿ ಇಬ್ಬರು ಹೆಣ್ಣುಮಕ್ಕಳು, ಇಶಾ ಮತ್ತು ಅಹಾನಾ ಡಿಯೋಲ್ .
88
ಬರೋಬ್ಬರಿ 42 ಸಿನಿಮಾಗಳಲ್ಲಿ ಜೊತೆಯಾಗಿ ನಟನೆ
ಒಟ್ಟಿಗೆ, ಈ ಜೋಡಿ ಶೋಲೆ, ಡ್ರೀಮ್ ಗರ್ಲ್, ಸೀತಾ ಔರ್ ಗೀತಾ ಮತ್ತು ರಾಜಾ ಜಾನಿ ಸಿನಿಮಾಗಳು ಸೇರಿ 42 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಈ ಜೋಡಿಯ ಕೆಮೆಸ್ಟ್ರೀ, ನಟನೆ, ಜೊತೆಯಾದಾಗ ಉಂಟಾಗುವ ಸ್ಪಾರ್ಕನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇಂದಿಗೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡರೆ ಅಭಿಮಾನಿಗಳು ಥ್ರಿಲ್ ಆಗುತ್ತಾರೆ.