ಬಚ್ಚನ್ ಕುಟುಂಬದ ಮತ್ತೊಂದು ಕುಡಿ ಬಾಲಿವುಡ್‌ಗೆ: ತಾತ, ಮಾವಂಗೆ ಸಡ್ಡು ಹೊಡೀತಾನಾ ಅಗಸ್ತ್ಯ?

First Published | Nov 23, 2023, 1:13 PM IST


ಆರ್ಕೀಸ್ ಸಿರೀಸ್ ಮೂಲಕ ನಟನಾ ರಂಗಕ್ಕೆ ಬರಲು ಸಜ್ಜಾಗಿರುವ ಬಾಲಿವುಡ್ ಬಿಗ್‌ ಬಿ ಅಮಿತಾಬ್ ಬಚ್ಚನ್‌ ಅವರ ಮೊಮ್ಮಗ ಅಗಸ್ತ್ಯಾ ನಂದಾ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ, ಸಹೋದರಿ ನವ್ಯಾ ನವೇಲಿ, ಅಮ್ಮ ಶ್ವೇತಾ ಬಚ್ಚನ್, ಮಾವ ಅಭಿಷೇಕ್ ಬಚ್ಚನ್, ತಾತ ಅಮಿತಾಭ್ ಬಚ್ಚನ್ ಎಲ್ಲರೂ ಈ ಹ್ಯಾಂಡ್‌ಸಮ್ ಹಂಕ್‌ಗೆ ಮುದ್ದಾಗಿ ವಿಶ್ ಮಾಡಿದ್ದಾರೆ. 

ತಮ್ಮ 23ನೇ ಹುಟ್ಟುಹಬ್ಬ ಆಚರಿಸುತ್ತಿರುವ ಆಗಸ್ತ್ಯಾ ನಂದಾ ಈಗ ಮತ್ತಷ್ಟು ಹ್ಯಾಂಡ್‌ಸಮ್ ಆಗಿದ್ದು, ಕುಟುಂಬದೊಂದಿಗಿನ ಅವರ ಕೆಲ ಫೋಟೊಗಳು ಇಲ್ಲಿವೆ ನೋಡಿ. 

ಬರೀ ಕುಟುಂಬದವರಲ್ಲದೇ ಅಗಸ್ತ್ಯಾ ನಂದಾಗೆ ಬಾಲಿವುಡ್ ಸಿನಿಮಾ ರಂಗದ ಅನೇಕ ಗಣ್ಯರು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬದ ಶುಭ ಕೋರಿದ್ದಾರೆ. 

Tap to resize

ಜೋಯಾ ಅಖ್ತರ್ ನಿರ್ದೇಶನದ ಆರ್ಕಿಸ್ ಸಿನಿಮಾದ ಮೂಲಕ ಶೀಘ್ರದಲ್ಲೇ ಇವರು ಬಾಲಿವುಡ್‌ ಸ್ಟಾರ್ ಆಗುವ ಸಿದ್ಧತೆಯಲ್ಲಿದ್ದಾರೆ ಅಗಸ್ತ್ಯಾ.  ಈ ಆಗಸ್ತ್ಯಾಗೆ ಸೋದರಿ ನವ್ಯಾ ನವೇಲಿ ಹ್ಯಾಪಿ ಬರ್ತ್‌ಡೇ ಲಿಟ್ಲ್ ಒನ್ ಅಂತ ವಿಶ್ ಮಾಡಿದ್ದಾರೆ 

 ಜೊತೆಗೆ ಆಗಸ್ತ್ಯಾ ಹಾಗೂ ತಾನು ಜೊತೆಗಿರುವ ಬಾಲ್ಯದ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಆಗಸ್ತ್ಯಾ ಸೋದರಿ ನವ್ಯಾ ಮಡಿಲಲ್ಲಿ ಕುಳಿತಿದ್ದರೆ, ನವ್ಯಾ ಸೋದರನನ್ನು ತಬ್ಬಿಕೊಂಡಿದ್ದಾರೆ.

ನನ್ನ ಮುಂಜಾನೆಯ ಅಲಾರ್ಮ್,  ಪಾರ್ಟ್‌ಟೈಮ್ ಥೆರಫಿಸ್ಟ್‌,  ಫುಲ್ ಟೈಮ್  ಕಿರಿಕಿರಿ ಹಾಗೂ ನಗರದ ಹೊಸ ಹೀರೋ, ಬಹುಶಃ ಪ್ರತಿವರ್ಷವೂ ಅದರಲ್ಲೂ ಈ ವರ್ಷ ನಿನ್ನದಾಗಿರಲಿ ಜೂನಿಯರ್ ಎಂದು ಬರೆದುಕೊಂಡಿದ್ದಾರೆ ನವ್ಯಾ. 

ನವ್ಯಾ ಪೋಸ್ಟ್‌ಗೆ ಅಮ್ಮ ಶ್ವೇತಾ ಬಚ್ಚನ್ ಕೂಡ ಪ್ರತಿಕ್ರಿಯಿಸಿದ್ದು, ನನಗೆ ಅಳು ಬರುತ್ತಿದೆ. ಲವ್ ಯೂ ಅಗ್ಗಿ ಎಂದು ಕಾಮೆಂಟ್ ಮಾಡಿದ್ದಾರೆ ಶ್ವೇತಾ ಬಚ್ಚನ್, ಆಗಸ್ತ್ಯಾ ಸೋದರ ಮಾವ ಅಭಿಷೇಕ್ ಬಚ್ಚನ್ ಕೂಡ ಅಳಿಯನ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದು ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

ಸೋನಾಲಿ ಬೇಂದ್ರೆ, ಶಾನ್ಯಾ ಕಪೂರ್,  ಫ್ಯಾಷನ್ ಡಿಸೈನರ್ ಸಂದೀಪ್ ಖೊಸ್ಲಾ, ನೇಹಾ ಧೂಪಿಯಾ, ಸಿಕಂದರ್ ಖೇರ್ ಕೂಡ ಅಗಸ್ತ್ಯಾಗೆ ವಿಶ್ ಮಾಡಿದ್ದಾರೆ. 

ತಾಯಿ ಶ್ವೇತಾ ಬಚ್ಚನ್ ಕೂಡ ಮಗನಿಗೆ ಭಾವುಕವಾಗಿ ವಿಶ್ ಮಾಡಿದ್ದು, ಹ್ಯಾಪಿ 23 23 23 ಮಗನೇ ನಿನ್ನ ಧೈರ್ಯಶಾಲಿ ಹೃದಯ ನಿನ್ನನ್ನು ಅತ್ಯುತ್ತಮ ಸಾಹಸಗಳಿಗೆ ಕರೆದೊಯ್ಯಲಿ, ನಿನ್ನ ಸಾಹಸಗಳು ನಿನಗೆ ಒಳ್ಳೆದು ಮಾಡಲಿ


ನಿನ್ನನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು  ಗೌರವಿಸುತ್ತಾರೆ ಎಂಬುದನ್ನು ನೀನು ಮರೆಯಬಾರದು ಎಂದು ಬರೆದುಕೊಂಡಿದ್ದಾರೆ ಶ್ವೇತಾ. ಶ್ವೇತಾ ಪೋಸ್ಟ್‌ಗೆ ಅನೇಕ ಸೆಲೆಬ್ರಿಟಿಗಳು ಹಾರ್ಟ್ ಇಮೋಜಿ ಮೂಲಕ ಪ್ರತಿಕ್ರಿಯಿಸಿ ಆಗಸ್ತ್ಯಾಗೆ ಬರ್ತ್‌ಡೇ ವಿಶ್ ಮಾಡಿದ್ದಾರೆ. 

ಹಾಗೆಯೇ ಸೋದರ ಮಾವ ಅಭಿಷೇಕ್‌ ಕೂಡ ವಿಶ್ ಮಾಡಿದ್ದು, ಹ್ಯಾಪಿ ಬರ್ತ್ಡೇ ಆರ್ಚೀ ಆಂಡ್ರ್ಯೂಸ್,  ಸದಾ ತಂಪಾಗಿರು ಎಂದು ಬರೆದುಕೊಂಡಿದ್ದಾರೆ ಅಭಿಷೇಕ್. 

ಅಗಸ್ತ್ಯಾ ಜೊತೆ ಈ ಆರ್ಕಿಸ್ ಸಿರೀಸ್‌ನಲ್ಲಿ ಶಾರೂಕ್ ಖಾನ್ ಪುತ್ರಿ ಸುಹಾನಾ ಖಾನ್, ಜಾನ್ವಿ, ಖುಷಿ ಕಪೂರ್, ಮಿಹಿರಾ ಅಹುಜಾ, ಗಾಐಕಿ ಅಧಿತಿ ಸೈಗಲ್, ವೇದಾಂಗ್ ರೈನಾ, ಯುವರಾಜ್ ಮೆಂಡಾ ನಟಿಸುತ್ತಿದ್ದಾರೆ. 

ಅರ್ಕೀಸ್ ಕಾಮಿಕ್‌ನ ಹಿಂದಿ ರಿಮೇಕ್ ಇದಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 7 ರಿಂದ ಈ ಸಿರೀಸ್ ಪ್ರಸಾರವಾಗಲಿದ್ದು, ಸ್ಟಾರ್‌ ಕಿಡ್‌ಗಳೇ ತುಂಬಿರುವ ಕಾರಣ ಈ ಸಿರೀಸ್ ಭಾರಿ ಕುತೂಹಲ ಹೆಚ್ಚಿಸಿದೆ. 

ಇತ್ತ ಆಗಸ್ತ್ಯಾ ಸೋದರಿ ನವ್ಯಾ ನವೇಲಿ ಸಿನಿಮಾ ರಂಗದಿಂದ ದೂರವೇ ಉಳಿದಿದ್ದು ಇತ್ತೀಚೆಗೆ ಅತ್ತೆ ಐಶ್ವರ್ಯಾರಂತೆ  ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಕೆಲ ದಿನಗಳ ಹಿಂದೆ ಆಗಸ್ತ್ಯ ನಂದಾ ಇಂಟರ್‌ಪ್ರಿನ್ಯೂರ್‌  ಮ್ಯಾಗ್‌ಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರಿ ಟ್ರೋಲ್‌ಗೆ ಗುರಿಯಾಗಿದ್ದರು.

ಆಗಸ್ತ್ಯಾ ಏನು ಸಾಧನೆ ಮಾಡಿದ್ದಾರೆ ಎಂದು ಬ್ಯುಸಿನೆಸ್ ಮ್ಯಾಗಜೀನ್‌ನಲ್ಲಿ ಅವರ ಫೋಟೋ ಹಾಕಿದ್ದೀರಾ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

Latest Videos

click me!