ಜಗತ್ತಿನ ಪ್ರಮುಖ ಸ್ಟಾರ್ ನಟರಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಕೂಡಾ ಒಬ್ಬರು.
ಹಿಂದೊಮ್ಮೆ ಜಗತ್ತಿನ ಎರಡನೇ ಅತ್ಯಂತ ಶ್ರೀಮಂತ ನಟನಾಗಿ ಮೂಡಿ ಬಂದಿದ್ದರು ಕಿಂಗ್ ಖಾನ್.
ಬಾಲಿವುಡ್ ಮಾತ್ರವಲ್ಲ ಈಗ ಶಾರೂಖ್ ಖಾನ್ ಇನ್‌ಸ್ಟಾಗ್ರಾಂ ಬಾದ್ ಶಾ ಕೂಡಾ ಹೌದು.
ಶಾರೂಖ್‌ಗೆ ಸುಮಾರು 22 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಆದ್ರೆ ಕಿಂಗ್ ಖಾನ್ ಫಾಲೋ ಮಾಡೋದು ಬರೀ 6ಜನರನ್ನು ಮಾತ್ರ.
ಪತ್ನಿ, ಪುತ್ರ, ಪುತ್ರಿ ಸೇರಿ ಕಾಜಲ್ ಆನಂದ್ ಮತ್ತು ಆಲಿಯಾಚಿಬಾರನ್ನ ಫಾಲೋ ಮಾಡ್ತಾರೆ.
ಅಂದ ಹಾಗೆ ಇಲ್ಲಿ ತನಕ ಶಾರೂಖ್ ಹಾಕಿರೋದು 585 ಪೋಸ್ಟ್ ಅಷ್ಟೆ.
ಪ್ರತಿ ಹಬ್ಬ, ವಿಶೇಷ ದಿನಗಳಲ್ಲಿ ಶಾರೂಖ್ ಪೋಸ್ಟ್ ಹಾಕುತ್ತಾರೆ.
ಫೋಟೋ ಶೂಟ್‌ಗಳಿಗಿಂತ ತಮ್ಮದೇ ಸೆಲ್ಫಿ, ಮಗನ ಜೊತೆಗಿನ ತುಂಟಾಟದ ಫೋಟೋಗಳು ಜಾಸ್ತಿ ಇವೆ.
ಅಂದ ಹಾಗೆ ಶಾರೂಖ್ ಇನ್‌ಸ್ಟಾ ಖಾತೆಯಲ್ಲಿ ಏನಾದ್ರೂ ಜಾಹೀರಾತು ಹೋದ್ರೆ ಅದರ ಬೆಲೆ 80 ಲಕ್ಷದಿಂದ 1 ಕೋಟಿ ರೂಪಾಯಿ.
ಆದರೆ ಶಾರೂಖ್ ಖಾನ್‌ಗಿರುವ ಜನಪ್ರಿತೆ ನೋಡಿದ್ರೆ ಈ ಬೆಲೆ ಅಷ್ಟು ಜಾಸ್ತಿ ಅನಿಸೋದಿಲ್ಲ ಅಲ್ವಾ..?
Suvarna News