ಅಮಲಾ ಪೌಲ್ ಕೆಂಪು ಬಾರ್ಡರ್ ಇರುವ ಬಿಳಿ ಬಣ್ಣದ ಸೀರೆಗೆ, ಕೆಂಪು ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ರೆ, ಪತಿ ಆಫ್ ವೈಟ್ ಬಣ್ಣದ ರೇಷ್ಮೆ ಪಂಚೆ, ಶರ್ಟ್ ಧರಿಸಿದ್ದಾರೆ. ಪುಟಾಣಿ ಮಗನಿಗೆ ಕೆಂಪು ಶೇಡ್ ಇರುವ ಬಿಳಿ ಬಣ್ಣದ ಕಚ್ಚೆ ಧರಿಸಿದ್ದು, ಮೂವರ ಮುದ್ದಾದ ಫ್ಯಾಮಿಲಿ ಫೋಟೊ ತುಂಬಾನೆ ಕ್ಯೂಟ್ ಆಗಿದೆ. ಗಂಡನಿಗೆ ಅಮಲಾ ಲಿಪ್ ಲಾಕ್ (liploack) ಮಾಡಿರುವ ಫೋಟೊವನ್ನು ಸಹ ಶೇರ್ ಮಾಡಿದ್ದು, ಇಂಟರ್ನೆಟಲ್ಲಿ ಫೋಟೊ ವೈರಲ್ ಆಗುತ್ತಿದೆ. ಈ ಫೋಟೊಗಳಿಗೆ ಲೈಕ್, ಮೆಚ್ಚಿಗೆಗಳ ಸುರಿಮಳೆ ಬರುತ್ತಿದೆ.