ಬಿಗ್‌ಬಾಸ್ ಮನೆಗೆ ಬಂದು ಸಖತ್ ಸೌಂಡ್ ಮಾಡ್ತಿರೋ ಬಾಲಿವುಡ್ ಬೆಡಗಿ ಶಮಿತಾ ಶೆಟ್ಟಿ. ಭಾವ ಜೈಲಲ್ಲಿ ಇರಬೇಕಾದರೆ ರಿಯಾಲಿಟಿ ಶೂ ಬೇಕಿತ್ತಾ ಈಕೆಗೆ ಅಂತ ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಆದ್ರೆ ಅದಕ್ಕೆಲ್ಲ ತಲೆ ಕೆಡಿಸಿಕೊಂಡಿರಲಿಲ್ಲ ನಟಿ. ಅದಕ್ಕೆ ಕಾರಣವೂ ಇದೆ.
ಭಾವ ರಾಜ್ ಕುಂದ್ರಾ ಜೈಲಲ್ಲಿ, ಇಬ್ಬರು ಮಕ್ಕಳು ವೃದ್ಧ ತಾಯಿಯೊಂದಿಗೆ ಶಿಲ್ಪಾ ಶೆಟ್ಟಿ ಒಬ್ಬರೇ. ಹೀಗಿದ್ದರೂ ಅಕ್ಕನನ್ನು ಬಿಟ್ಟು ಬಿಗ್‌ಬಾಸ್ ಮನೆಗೆ ಬರೋಕೆ ಕಾರಣ ಏನು ? ಕಮಿಟ್‌ಮೆಂಟ್ಸ್ ಅಂತ ಶಮಿತಾ ಹೇಳಿದ್ದರು. ಅದೂ ನಿಜ.
ಆದರೆ ಅದಷ್ಟೇ ಕಾರಣವಲ್ಲ. ಬಿಗ್‌ಬಾಸ್ ಸ್ಪರ್ಧಿಗಳಿಗೆ ವಾರವೊಂದಕ್ಕೆ ಸಿಗೋ ಸಂಭಾವನೆ ಎಷ್ಟು ಎಂಬುದು ನಿಮಗೆ ಗೊತ್ತೇ ? ಕೆಲವು ಸಾವಿರ ಏನಲ್ಲ. ಲಕ್ಷಗಳಲ್ಲಿ ಸಂಭಾವನೆ ಎಣಿಸ್ತಾರೆ ಬಿಗ್‌ಬಾಸ್ ಸ್ಫರ್ಧಿಗಳು.
ರಿಧಿಮಾ ಪಂಡಿತ್: ಬಿಗ್‌ಬಾಸ್‌ನಲ್ಲಿ ಅತ್ಯಧಿಕ ಸಂಭಾವನೆ ಪಡೆಯೋ ಸ್ಪರ್ಧಿ ರಿಧಿಮಾ ಪಂಡಿತ್. ಈಕೆ ಬಿಗ್‌ಬಾಸ್ ಒಟಿಟಿಯಲ್ಲಿ ಅತ್ಯಧಿಕ ಹಣವನ್ನು ಸಂಪಾದಿಸುತ್ತಾರೆ. ಈಕೆ ವಾರವೊಂದಕ್ಕೆ ಪಡೆಯೋ ಸಂಭಾವನೆ ಬರೋಬ್ಬರಿ 5 ಲಕ್ಷ ರೂಪಾಯಿ.
ರಾಕೇಶ್ ಬಪತ್: ಶಮಿತಾ ಶೆಟ್ಟಿ ಜೊತೆ ಫುಲ್ ಟೈಂ ರೊಮ್ಯಾನ್ಸ್ ಮಾಡೋ ರಾಕೇಶ್ ಬಪತ್ ಕೂಡಾ ಸಂಭಾವನೆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಿಗ್‌ಬಾಸ್ ಒಟಿಟಿಯಲ್ಲಿ ವಾರವೊಂದಕ್ಕೆ ರಾಕೇಶ್ ಪಡೆಯೋ ಸಂಭಾವನೆ 1.2 ಲಕ್ಷ ರೂಪಾಯಿ. ಇವರು ಬಿಗ್‌ಬಾಸ್ ಮನೆಯಲ್ಲಿ ಸಖತ್ ಆಕ್ಟಿವ್ ಸ್ಪರ್ಧಿ
ಅಕ್ಷರಾ ಸಿಂಗ್: ಭೋಜ್ಪುರಿಯ ಈ ಪ್ರಸಿದ್ಧ ನಟಿ ಅಕ್ಷರ ಸಿಂಗ್ ವಾರವೊಂದಕ್ಕೆ 1.75 ಲಕ್ಷ ಸಂಭಾವನೆ ಪಡೆಯುತ್ತಾರೆ. ಬಿಗ್‌ಬಾಸ್ ಮನೆಯಲ್ಲಿ ಸಕ್ರಿಯರಾಗಿರುತ್ತಾರೆ ಈ ನಟಿ
ಝೀಶಾನ್ ಖಾನ್: ಕಿರುತೆರೆಯ ಈ ಪ್ರಸಿದ್ಧ ನಟ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೂ ಸುದ್ದಿಯಲ್ಲಿದ್ದಾರೆ. ಕುಂಕುಮ್ ಭಾಗ್ಯ ಸೀರಿಯಲ್ ನಟ ಬಿಗ್‌ಬಾಸ್ ಮನೆಯಲ್ಲಿ ವಾರವೊಂದಕ್ಕೆ ಪಡೆಯೋ ಸಂಭಾವನೆ ಬರೋಬ್ಬರಿ 2.5 ಲಕ್ಷ ರೂಪಾಯಿ
ಶಮಿತಾ ಶೆಟ್ಟಿ: ಶಮಿತಾ ಶೆಟ್ಟಿ ಬಿಗ್‌ಬಾಸ್ ಒಟಿಟಿಯಲ್ಲಿ ಎರಡನೇ ಅತ್ಯಧಿಕ ಸಂಭಾವನೆ ಪಡೆಯೋ ನಟಿ. ಬಾಲಿವುಡ್ ನಟಿ ಬಿಗ್‌ಬಾಸ್ ಮನೆಯಲ್ಲಿ ವಾರವೊಂದಕ್ಕೆ ಪಡೆಯೋ ಸಂಭಾವನೆ 3.75 ಲಕ್ಷ ರೂಪಾಯಿ
Millind Gaba
ಮಿಲ್ಲಿಂದ್ ಗಾಬ: ಮಿಲ್ಲಿಂದ್‌ನ ಫನ್ನಿ ನೇಚರ್ ಬಿಗ್‌ಬಾಸ್ ವೀಕ್ಷಕರಿಗೆಲ್ಲ ಇಷ್ಟವಾಗಿದೆ. ಹಾಗಾಗಿಯೇ ಸಖತ್ ಸೌಂಡ್ ಮಾಡುತ್ತಿದ್ದಾರೆ ಇವರು. ವಾರವೊಂದಕ್ಕೆ ಮಿಲ್ಲಿಂದ್ ಪಡೆಯೋ ಸಂಭಾವನೆ 1.75 ಲಕ್ಷ ರೂಪಾಯಿ
Karan Nath
ಕರಣ್ ನಾಥ್: ಬಿಗ್‌ಬಾಸ್ ಒಟಿಟಿಯಲ್ಲಿ ಇನ್ನೂ ತಮ್ಮ ಗ್ರಿಪ್ ಸಾಧಿಸಲು ಕರಣ್ ಕಷ್ಟಪಡುತ್ತಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ. ಇವರು ಒಂದು ವಾರದ ಶೂಗೆ ಬರೋಬ್ಬರಿ 1.75 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ನೇಹಾ ಭಾಸಿನ್: ಗಾಯಕಿ ನೇಹಾ ಭಾಸಿನ್ ಬಾಲಿವುಡ್‌ನಲ್ಲಿ ತಕ್ಕಮಟ್ಟಿಗೆ ಖ್ಯಾತ ಗಾಯಕಿ. ಚಶ್ನಿ, ಜಗ್ ಗೂಮೆಯಾ ಸಾಂಗ್ ಮೂಲಕ ಸಂಗೀತ ಪ್ರಿಯರ ಮನಸಿಗೆ ಲಗ್ಗೆ ಇಟ್ಟ ಇವರು ಶೋಗಾಗಿ ವಾರಕ್ಕೆ ಪಡೆಯೋ ಸಂಭಾವನೆ 2 ಲಕ್ಷ ರೂಪಾಯಿ.
ದಿವ್ಯಾ ಅಗರ್ವಾಲ್: ದಿವ್ಯಾ ಅಗರ್ವಾಲ್ ಸುದ್ದಿಯಾಗೋ ಒಂದು ಅವಕಾಶವನ್ನೂ ಬಿಡುತ್ತಿಲ್ಲ. ಅಷ್ಟರಮಟ್ಟಿಗೆ ಸುದ್ದಿಯಾಗುತ್ತಿದ್ದಾರೆ. ಬಿಗ್‌ಬಾಸ್ ಒಟಿಟಿಯಲ್ಲಿ ವಾರವೊಂದಕ್ಕೆ ದಿವ್ಯಾ ಪಡೆಯೋ ಸಂಭಾವನೆ 2 ಲಕ್ಷ ರೂಪಾಯಿ
ಪ್ರತೀಕ್ ಸೆಹಜ್‌ಪಾಲ್: ಲವ್ ಸ್ಕೂಲ್ ಖ್ಯಾತಿಯ ಪ್ರತೀಕ್ ಸೆಹಜ್‌ಪಾಲ್ ಅತ್ಯಂತ ಕಡಿಮೆ ಸಂಭಾವನೆ ಪಡೆಯೋ ಸ್ಪರ್ಧಿ. ಬಿಗ್‌ಬಾಸ್ ಶೋನಲ್ಲಿ ಪ್ರತೀಕ್ ವಾರವೊಂದಕ್ಕೆ 1 ಲಕ್ಷ ಸಂಭಾವನೆ ಪಡೆಯುತ್ತಾರೆ.
Moose Jattana
ಮೂಸ್ ಜಟ್ಟನ: ವಿವಾದಗಳನ್ನೇ ಹಾಸು ಹೊದ್ದಿರೋ ಮೂಸ್ ವಾರವೊಂದಕ್ಕೆ 1.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಮನೆಯ ಹೊರಗೆ ಭಾರೀ ಸುದ್ದಿಯಲ್ಲಿರೋ ಈಕೆ ಈಗಲೂ ಹಾಗೆಯೇ
Nishant
ನಿಶಾಂತ್ ಭಟ್: ಕೊರಿಯೋಗ್ರಫರ್ ನಿಶಾಂತ್ ಭಟ್ ಹೆಣ್ಮಕ್ಕಳ ಜೊತೆ ಜಗಳದಿಂದ ಟೀಕೆಗೊಳಗಾಗಿದ್ದಾರೆ. ಇದರಿಂದ ಮಾತ್ರ ಸುದ್ದಿಯಲ್ಲಿರೋ ನಿಶಾಂತ್ ಅವರು ಪಡೆಯೋ ಸಂಭಾವನೆ 1.2 ಲಕ್ಷ ರೂಪಾಯಿ
ಉರ್ಫಿ ಜಾವೇದ್: ಬಿಗ್‌ಬಾಸ್ ಮನೆಯಿಂದ ಮೊದಲು ಎಲಿಮಿನೇಟ್ ಆದ ಸ್ಪರ್ಧಿ ಈಕೆ. ಇವರು ವಾರವೊಂದಕ್ಕೆ 2.75 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ.