ಕಾರಲ್ಲಿ ಸೆಕ್ಸ್, ಜಾಕ್ವೆಲಿನ್ ಫರ್ನಾಂಡೀಸ್ ಪ್ರತಿಕ್ರಿಯೆ ಹೀಗಿತ್ತು!

Suvarna News   | Asianet News
Published : Sep 02, 2021, 06:15 PM IST

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ನಟಿ ಮನಿ ಟ್ರಾನ್ಸ್‌ಫರ್‌ ಹಗರಣದ ಕೇಸ್‌ನಲ್ಲಿ ವಿಚಾರಣೆಗೆ ಗುರಿಯಾಗಿದ್ದಾರೆ. ಈ ನಡುವೆ ಅವರ ಇಂಟರ್‌ವ್ಯೂವ್‌ ವೈರಲ್‌ ಆಗಿದೆ. ಅದರಲ್ಲಿ ಕಾರಿನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ ಜಾಕ್ವೆಲಿನ್ ಫರ್ನಾಂಡೀಸ್.   

PREV
17
ಕಾರಲ್ಲಿ ಸೆಕ್ಸ್, ಜಾಕ್ವೆಲಿನ್ ಫರ್ನಾಂಡೀಸ್ ಪ್ರತಿಕ್ರಿಯೆ ಹೀಗಿತ್ತು!

ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪ್ರಸ್ತುತ ಸುದ್ದಿಯಲ್ಲಿದ್ದಾರೆ. ಅವರು ವಂಚಕ ಸುಕೇಶ್ ಚಂದ್ರಶೇಖರ್ ನೇತೃತ್ವದ 200 ಕೋಟಿ ರೂಪಾಯಿಗಳ ಹಣ ವರ್ಗಾವಣೆ ಪ್ರಕರಣದ ಅರೋಪಿಯಾಗಿದ್ದಾರೆ. ಜಾರಿ ನಿರ್ದೇಶನಾಲಯವು ನಟಿಯನ್ನು ಐದು ಗಂಟೆಗಳ ಕಾಲ ಪ್ರಶ್ನಿಸಿದೆ.


 

27

ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಹಳೆಯ ವಿಡಿಯೋವೊಂದು ಮತ್ತೆ ಬೆಳಕಿಗೆ ಬಂದಿದೆ. ಇದರಲ್ಲಿ ಅವರು ಕಾರಿನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರ ಬಗ್ಗೆ ಉತ್ತರಿಸಿದರು. ಪ್ರಶ್ನೆಗೆ ಏನು ಉತ್ತರಿಸಿದ್ದಾರೆ ನೋಡಿ ಜಾಕ್ವೆಲಿನ್ ಫರ್ನಾಂಡೀಸ್.

37

ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅಮಂಡಾ ಸೆರ್ನಿ ಅವರು 'ಫೀಲ್ ಗುಡ್' ಪಾಡ್‌ಕಾಸ್ಟ್ ಅನ್ನು ಆಯೋಜಿಸಿದ್ದರು, ಅಲ್ಲಿ ಅವರು ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಕೆಲವು ತಮಾಷೆಯ ವಿಷಯಗಳನ್ನು ಸಹ ಮಾತನಾಡಿದರು.

 


 

47

ಅಮಂಡಾ ಸೆರ್ನಿ ಕೂಡ ಭಾರತದಲ್ಲಿ ಬಹಳ ಫೇಮಸ್. ಜಾಕ್ವೆಲಿನ್ ಮತ್ತು ಅಮಂಡಾ ಭೇಟಿಯಾದಾಗ, ಅವರ ಕ್ಯೂಟ್‌ ಫೋಟೋಗಳು ಇಂಟರ್‌ನೆಟ್‌ನಲ್ಲಿ  ಬಿರುಗಾಳಿ ಎಬ್ಬಿಸಿದ್ದವು. ಫೀಲ್ ಗುಡ್ ಪಾಡ್‌ಕ್ಯಾಸ್ಟ್ ಎಪಿಸೋಡ್‌ಗಳಲ್ಲಿ, ಮತ್ತೊಬ್ಬ ಅತಿಥಿ, ಡೇನ್ ಕುಕ್, ಇವರ ಜೊತೆ ಜಾಯಿನ್‌ ಆಗಿದ್ದರು.

57

ಈ ಸಂಚಿಕೆಯಲ್ಲಿ ಮಾತನಾಡುವಾಗ, ಅಮಂಡಾ ಅವರು ಜಾಕ್ವೆಲಿನ್ ಮತ್ತು ಡೇನ್ ಅವರನ್ನು ಕಾರಿನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದಾರೆಯೇ ಎಂದು ಕೇಳಿದರು. ಈ ಪ್ರಶ್ನೆಗೆ ಕೈ ಎತ್ತುವ ಮೂಲಕ ಉತ್ತರಿಸಬೇಕಾಗಿತ್ತು.

67

ಡೇನ್ ಮತ್ತು ಅಮಂಡಾ ವೇಗವಾಗಿ ತಮ್ಮ ಕೈಗಳನ್ನು ಮೇಲಕ್ಕೆತ್ತಿದ್ದರು. ಆದರೆ ಜಾಕ್ವೆಲಿನ್ ಸ್ವಲ್ಪ ಹಿಂಜರಿದರು. ಅಮಂಡಾ ಇದಕ್ಕೆ ತಮಾಷೆಯಾಗಿ ಜಾಕ್ವೆಲಿನ್ ಕೈ ಎತ್ತುವಂತೆ ಕೇಳಿದರು. ನಂತರ ಜಾಕ್ವೆಲಿನ್ ತಮ್ಮ ಕೈಯನ್ನು ಮೇಲಕ್ಕೆತ್ತಿ ಕಾರಿನಲ್ಲಿ ಲೈಂಗಿಕ ಸಂಬಂಧ ಹೊಂದಿದ್ದನ್ನು ಒಪ್ಪಿಕೊಂಡರು.

77

ಬೇಡಿಕೆಯ ನಟಿಯರಲ್ಲಿ ಜಾಕ್ವೆಲಿನ್ ಕೂಡ ಒಬ್ಬರು. ತಮ್ಮ ಅಭಿನಯ ಹಾಗೂ ಬೋಲ್ಡ್‌ ಲುಕ್‌ನಿಂದ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ ಈ ಶ್ರೀಲಂಕಾದ ಬ್ಯೂಟಿ. ಪ್ರಸ್ತುತ ನಟಿ ಭೂತ್ ಪೊಲೀಸ್, ರಾಮ್ ಸೇತು, ಬಚ್ಚಾ ಪಾಂಡೆ ಮತ್ತು ಇನ್ನೂ ಅನೇಕ  ಸಿನಿಮಾಗಳನ್ನು ತಮ್ಮ ಆಕೌಂಟ್‌ನಲ್ಲಿ ಹೊಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories