ಆನ್‌ಸ್ಕ್ರೀನ್ ಕಿಸ್ ಇಲ್ಲ ಎಂದ ಕರೀನಾ-ಸೈಫ್‌ಗೆ ಸಾರಾ ಹೇಳಿದ್ದಿಷ್ಟು

Published : Aug 12, 2021, 11:18 AM ISTUpdated : Aug 12, 2021, 12:54 PM IST

ಆನ್‌ಸ್ಕ್ರೀನ್ ಕಿಸ್ ಮಾಡಲ್ಲ ಎಂದ ಆಫ್‌ಲೈನ್ ಜೋಡಿ ಸೈಫ್-ಕರೀನಾರ ಪಾಲಿಸಿ ಬದಲಾಯಿಸಿದ ಸಾರಾ ಅಲಿ ಖಾನ್ ಎರಡನೇ ಹೆಂಡ್ತಿಗೆ ತೆರೆಯ ಮೇಲೆ ಕಿಸ್ ಮಾಡಲ್ಲ ಎಂದ ಅಪ್ಪನಿಗೆ ಸಾರಾ ಹೇಳಿದ್ದೇನು ?

PREV
18
ಆನ್‌ಸ್ಕ್ರೀನ್ ಕಿಸ್ ಇಲ್ಲ ಎಂದ ಕರೀನಾ-ಸೈಫ್‌ಗೆ ಸಾರಾ ಹೇಳಿದ್ದಿಷ್ಟು

ಸಾರಾ ಅಲಿ ಖಾನ್ ಆ.12ರಂದು ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಪುತ್ರಿ ಸಾರಾ ಅಲಿ ಖಾನ್ ತಂದೆ ಹಾಗೂ ತಂದೆಯ ಎರಡನೇ ಹೆಂಡತಿ ಕರೀನಾ ಕಪೂರ್ ಖಾನ್ ಜೊತೆ ಚಂದದ ಸಂಬಂಧದಲ್ಲಿದ್ದಾರೆ. ಸಾರಾ ಆಗಾಗ ತಂದೆ ಹಾಗೂ ಕರೀನಾ ಜೊತೆಗಿನ ತಮ್ಮ ಸಂಬಂಧದ ಬಗ್ಗೆಯೂ ಮಾತನಾಡುತ್ತಾರೆ.

28

ತೆರೆಯ ಮೇಲೆ ಕಿಸ್ ಮಾಡಬಾರದು ಎಂಬ ಸೈಫ್ ಹಾಗೂ ಕರೀನಾ ಕಪೂರ್ ಅವರ ರೂಲ್ಸ್ ಬ್ರೇಕ್ ಮಾಡಿದ್ದು ಸಾರಾ ಅಲಿ ಖಾನ್. ಹೇಗೆ ಅಂತೀರಾ ? ಅಷ್ಟೂ ಪ್ರಭಾವಿಸ್ತಾರಾ ಸಾರಾ ಅಲಿ ಖಾನ್ ? ಅಲ್ಲ ಎನ್ನುವಂತಿಲ್ಲ.

38

ಸಾರಾ ಅಲಿ ಖಾನ್ ತಮ್ಮ ನಿಯಮ ಬ್ರೇಕ್ ಮಾಡಲು ಹೇಗೆ ಪ್ರಭಾವ ಬೀರಿದ್ದರು ಎಂಬುದನ್ನು ನಟಿ ಕರೀನಾ ಕಪೂರ್ ಹೇಳಿದ್ದರು. ನಮ್ಮ ಕಿಸ್ಸಿಂಗ್ ರೂಲ್ಸ್ ಬಗ್ಗೆ ನಾವು ಸಾರಾ ಜೊತೆ ಚರ್ಚಿಸಿದ್ದೇವೆಂಬುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ ಎಂದಿದ್ದಾರೆ.

48

ನಮ್ಮ ನಿರ್ಧಾರ ಹೇಳಿದಾಗ ಸೈಫ್ ಮಗಳು, ಅರೆ ಇದು ಸಿಲ್ಲಿಯಾಗಿದೆ. ನೀವೆಲ್ಲರೂ ಕಲಾವಿದರು. ಇಂದಿನ ಸಿನಿಮಾಗಳಲ್ಲಿ ಎರಡು ಪಾತ್ರಗಳು ಕಿಸ್ ಮಾಡಿದರೆ ಅದರಲ್ಲಿ ತಪ್ಪೇನೂ ಇಲ್ಲ ಎಂಬುದು ನಿಮಗೆ ಗೊತ್ತು. ಅರ್ಜುನ್ ಮತ್ತು ಕರೀನಾ ಕೂಡಾ ಗಂಡ-ಹೆಂಡತಿಯಾಗಿ ನಟಿಸಿದ್ರು ಎಂದಿದ್ದಾರೆ. ಇದನ್ನು ಕೇಳಿದ ಮೇಲೆ ನೋ ಕಿಸ್ ರೂಲ್ ಅಷ್ಟಾಗಿ ಮುಖ್ಯ ಎನಿಸಲಿಲ್ಲ ಎಂದಿದ್ದಾರೆ.

58

ನೀವು ಆರಾಮವಾಗಿ ತೆರೆಯ ಮೇಲೆ ಕಿಸ್ ಮಾಡಬೇಕು ಎಂದು ಸಾರಾ ಹೇಳಿದ್ದು ನಮ್ಮಿಬ್ಬರನ್ನೂ ಪ್ರಭಾವಿಸಿತು ಎಂದು ಕರೀನಾ ಕಪೂರ್ ಹೇಳಿದ್ದಾರೆ. ಅಂತೂ ಸಾರಾ ತನ್ನ ಅಪ್ಪ ಹಾಗೂ ಅಪ್ಪನ ಎರಡನೇ ಹೆಂಡತಿ ಜೊತೆ ಆರಾಮವಾಗಿ ಹರಟುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿ.

68

ಪ್ರೆಗ್ನೆನ್ಸಿ ಬೈಬಲ್ ಪುಸ್ತಕ ರಿಲೀಸ್ ಮಾಡಿದ ಕರೀನಾ ಕಪೂರ್ ಅದರಲ್ಲಿ ತೈಮೂರ್‌ಗೆ ಗರ್ಭಿಣಿಯಾಗಿದ್ದಾಗ ಸಾರಾ, ಸೈಫ್ ಹಾಗೂ ತನ್ನೊಂದಿಗೆ ಬೇಬಿಮೂನ್‌ಗೆ ರೋಮ್‌ಗೆ ಬಂದಿದ್ದರು ಎಂದು ಹೇಳಿದ್ದಾರೆ. ಎರಡನೇ ಡೆಲಿವರಿಯ ನಂತರವೂ ಜೆಹಾಂಗೀರ್ ಅಲಿ ಖಾನ್‌ಗಾಗಿ ಬಹಳಷ್ಟು ಉಡುಗೊರೆಗಳನ್ನು ತಂದಿದ್ದರು ಸಾರಾ ಎಂದು ಪುಸ್ತಕದಲ್ಲಿ ರಿವೀಲ್ ಮಾಡಿದ್ದಾರೆ.
 

78

ಸಾರಾ ಅಲಿ ಖಾನ್ ಸೈಫ್ ಹಾಗೂ ಅಮೃತಾ ಸಿಂಗ್ ಅವರ ಮಗಳು. ಸೈಫ್ ಹಾಗೂ ಅಮೃತಾ ಸಿಂಗ್ 2004ರಲ್ಲಿ ವಿವಾಹವಾಗಿದ್ದರು.

88

2018ರಲ್ಲಿ ಸಾರಾ ಅಲಿ ಖಾನ್ ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರನಾಥ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿಕೊಟ್ಟರು. ನಂತರ ರಣವೀರ್ ಸಿಂಗ್ ಜೊತೆ ಸಿಂಬದಲ್ಲಿ ಕಾಣಿಸಿಕೊಂಡಿದ್ದರು. 2020ರಲ್ಲಿ ಲವ್ ಆಜ್‌ ಕಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯದಾಗಿ ನಟಿ ಕೂಲಿ ನಂ.1ನಲ್ಲಿ ಕಾಣಿಸಿಕೊಂಡಿದ್ದರು.

click me!

Recommended Stories