ಬೆತ್ತಲೆ ವಿಡಿಯೋ ಸೆಷನ್ ಮಾಡಿದ ಮುಸ್ಕಾನ್ ಈಗ ಬಿಗ್‌ಬಾಸ್ ಮನೆಯೊಳಗೆ

Published : Aug 11, 2021, 05:52 PM ISTUpdated : Aug 11, 2021, 06:24 PM IST

ಬರೀ ವಿವಾದಗಳನ್ನೇ ಹಾಸಿ ಹೊದ್ದಿರೋ ಬಿಗ್‌ಬಾಸ್ ಸ್ಪರ್ಧಿ ಈಕೆ ಬಿಗ್‌ಬಾಸ್ ಮನೆಯಲ್ಲಿರೋ ಕಾಂಟ್ರವರ್ಶಿಯಲ್ ಪರ್ಸನ್ ಈಕೆ ಟಿಕ್‌ಟಾಕ್ + ಇನ್‌ಸ್ಟಗ್ರಾಂ ಸ್ಟಾರ್

PREV
110
ಬೆತ್ತಲೆ ವಿಡಿಯೋ ಸೆಷನ್ ಮಾಡಿದ ಮುಸ್ಕಾನ್ ಈಗ ಬಿಗ್‌ಬಾಸ್ ಮನೆಯೊಳಗೆ
Moose Jattana

ಜನರು ಯಾವ ಶೋಗಾಗಿ ಕಾಯುತ್ತಿದ್ದರೋ ಆ ಶೋ ಜನರ ಮುಂದೆ ಬಂದಾಯಿತು. ಆದರೆ ಪ್ರತಿವರ್ಷ ಟಿವಿಯಲ್ಲಿ ಬರುತ್ತಿದ್ದ ಈ ಶೋ ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಭಾನುವಾರ ನಿರ್ಮಾಪಕ ಕರಣ್ ಜೋಹರ್ ಈ ಶೋವನ್ನು ಅದ್ಧೂರಿಯಾಗಿ ಆರಂಭಿಸಿದ್ದಾರೆ.

210
Moose Jattana

ಈ ಮೂಲಕ ಶೋದಲ್ಲಿರುವ 13 ಸ್ಪರ್ಧಿಗಳನ್ನು ಕೂಡಾ ರಿವೀಲ್ ಮಾಡಲಾಗಿದೆ. ಒಬ್ಬೊಬ್ಬರನ್ನಾಗಿಯೇ ಕರಣ್ ಸ್ಪರ್ಧಿಗಳನ್ನು ಜನರಿಗೆ ಪರಿಚಯಿಸಿದ್ದಾರೆ. ಆದರೆ ಈ ಶೋದಲ್ಲಿ ಬಹಳಷ್ಟು ಚರ್ಚೆಯಲ್ಲಿರೋ ಅಭ್ಯರ್ಥಿಗಳು ಶಮಿತಾ ಶೆಟ್ಟಿ ಹಾಗೂ ಮೂಸ್ ಜಟ್ಟನಾ ಅಥವಾ ಮುಸ್ಕಾನ್ ಜಟ್ಟನ

310
Moose Jattana

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಅವರ ನಡೆಯುತ್ತಿರೋ ವಿವಾದದ ಮಧ್ಯೆಯೇ ಶಮಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾರೆ. ಹಾಗಾಗಿಯೇ ಸದ್ಯ ಶೋನಲ್ಲಿ ಇವರು ವಿವಾದಿತ ಸ್ಪರ್ಧಿ. ಆದರೆ ಇವರಲ್ಲದೆ ಇನ್ನೊಬ್ಬ ಸ್ಪರ್ಧಿ ಟಿಕ್ ಟಾಕ್, ಇನ್‌ಸ್ಟಾಗ್ರಾಂ ಸ್ಟಾರ್ ಮೂಸ್ ಜಟ್ಟನ

410
Moose Jattana

ಮುಖ್ಯಾಂಶಗಳಲ್ಲಿರುವವರು, ವಿವಾದಗಳೊಂದಿಗೆ ದೊಡ್ಡ ಸಂಪರ್ಕ ಹೊಂದಿರುವವರು ಈ  ಸ್ಪರ್ಧಿ.  ಇವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚಿಸಲಾಗುತ್ತಿದೆ. ಆ ಸ್ಪರ್ಧಿ ಮುಸ್ಕಾನ್ ಜಟ್ಟನಾ ಅಥವಾ ಮೂಸ್ ಜಟ್ಟಾನಾ

510
Moose Jattana

ಬಿಗ್‌ಬಾಸ್‌ನ ಅತ್ಯಂತ ಕಿರಿಯ ಸ್ಪರ್ಧಿ: ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿರೋ ಮುಸ್ಕಾನ್ ಜಟ್ಟನಾ ಅತ್ಯಂತ ಕಿರಿಯ ಸ್ಪರ್ಧಿ. ಮೂಸ್ ಜಟ್ಟನಾ ಎಂದೇ ಫೇಮಸ್ ಆಗಿರೋ ಈಕೆಯ ಹೆಸರು ಮುಸ್ಕಾನ್ ಜಟ್ಟನಾ. ಈಕೆ ಸೋಷಿಯಲ್ ಮೀಡಿಯಾ ಇನ್ಸಫುಯೆನ್ಸರ್ ಕೂಡಾ ಹೌದು. 

610
Moose Jattana

ಅವರು ನಿಶಾಂತ್ ಭಟ್ ಮತ್ತು ಪ್ರತೀಕ್ ಸಹಪಾಲ್ ಅವರನ್ನು ಕರಣ್ ಜೋಹರ್ ಎದುರು ವೇದಿಕೆಯಲ್ಲಿ ಜೋಡಿಯಾಗಿ ಮಾಡಿಕೊಂಡರು. ಆದರೆ ಅಂತಿಮವಾಗಿ ಅವರು ನಿಶಾಂತ್ ಭಟ್ ಜೊತೆ ಸೇರಿಕೊಂಡರು. ಮುಸ್ಕನ್ ಜಟ್ಟಾನಾ ಹೆಸರು ಅನೇಕ ವಿವಾದಗಳಿಗೆ ಸಂಬಂಧಿಸಿದೆ.

710
Moose Jattana

ವಿವಾದಿತ ವಿಡಿಯೋಗಳಿಂದಲೇ ಚರ್ಚೆಯಲ್ಲಿರುತ್ತಾರೆ ಮುಸ್ಕಾನ್: ಮುಸ್ಕಾನ್ ತಮ್ಮ ವಿಡಿಯೋಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಬಹಳಷ್ಟು ವಿಡಿಯೋ ಇವರು ಮಾಡಿದ್ದಾರೆ. 20 ವರ್ಷದ ಇವರು ಚಂಡಿಗಡದವರಾಗಿದ್ದು ಮೆಲ್ಬರ್ನ್‌ನಲ್ಲಿ ತಮ್ಮ ಶಿಕ್ಷಣ ಮುಗಿಸಿದ್ದಾರೆ.

810
Muskan

ಲಿಂಗ ಸಮಾನತೆಯ ಕುರಿತ ಪೋಸ್ಟ್‌ಗಳು: ಮುಸ್ಕಾನ್ ಆಸ್ಟ್ರೇಲಿಯಾ-ಪಂಜಾಬಿ ಪ್ರಭಾವಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಜನಪ್ರಿಯವಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಇನ್ಸ್ಟಾ ಬಯೋ ಕೂಡ ಎಲ್ಲರ ಗಮನ ಸೆಳೆಯುತ್ತದೆ. 

910
Muskan

ಅವರ ಬಯೋನಲ್ಲಿ, 'ಇನ್ನೂ ಬಹಳಷ್ಟು ಮಾಡಬೇಕಿದೆ' ಎಂದು ಬರೆದಿದ್ದಾರೆ. ಮುಸಾ ತುಂಬಾ ಚಿಕ್ಕ ವಯಸ್ಸಿನಲ್ಲೇ ಮಹಿಳೆಯರು ಮತ್ತು ಯುವಕರಿಗೆ ಕೆಲಸ ಮಾಡಿದ್ದಾರೆ. ಅವರು ಆಸ್ಟ್ರೇಲಿಯಾದ ದಕ್ಷಿಣ ಏಷ್ಯನ್ ಕೇಂದ್ರದ ರಾಯಭಾರಿಯೂ ಆಗಿದ್ದಾರೆ. ಮುಸ್ಕಾನ್ ಜಟ್ಟಾನಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಲಿಂಗ ಸಮಾನತೆಯ ಬಗ್ಗೆ ಅನೇಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ.

1010
Muskan

ನ್ಯೂಡ್ ವಿಡಿಯೋ: ಮುಸ್ಕಾನ್ ಜಟ್ಟಾನಾ ವೆಬ್‌ಸೈಟ್‌ನಲ್ಲಿ ಲೈವ್ ನ್ಯೂಡ್ ಸೆಷನ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಆಕೆಯ ನೈಜ ಜೀವನದ ಹಾಗೆ ಈ ಕಾರ್ಯಕ್ರಮದಲ್ಲಿ ಚರ್ಚೆಯಲ್ಲಿ ಉಳಿಯುವ ಮೂಲಕ ಆಟದಲ್ಲಿ ಹೇಗೆ ಮುಂದುವರಿಯುತ್ತಾಳೆ ಎಂಬುದನ್ನು ನೋಡಲು  ಜನ ಕಾಯುತ್ತಿದ್ದಾರೆ

click me!

Recommended Stories