ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾನ ಮದ್ವೆಯಾದಾಗ ಡಿಪ್ರೆಷನ್‌ಗೊಳಗಾಗಿದ್ದ ಶಮಿತಾ

First Published Aug 12, 2021, 9:33 AM IST
  • ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ ಡಿಪ್ರೆಷನ್
  • ಶಿಲ್ಪಾ ಶೆಟ್ಟಿ ತಂಗಿ ಚಿಂತೆಗೆ ಕಾರಣವಾಗಿದ್ದೇನು ?

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಂಗಿ, ನಟಿ, ಇಂಟಿರಿಯರ್ ಡಿಸೈನರ್ ಶಮಿತಾ ಶೆಟ್ಟಿ ಖಿನ್ನತೆಗೆ ಜಾರಿದ್ದು ನಿಮಗೆ ಗೊತ್ತಾ ? ಹೌದು. ಕರಾವಳಿ ಚೆಲುವೆಯೂ ಕೆಲ ವರ್ಷದ ಹಿಂದೆ ಖಿನ್ನತೆಗೆ ಜಾರಿದ್ದರು, ಅದೂ ಪ್ರೀತಿಯ ಅಕ್ಕನಿಂದಾಗಿ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆಗೆ ಶಮಿತಾ ಕ್ಲೋಸ್. ಭಾವ ಅಂದ್ರೆ ಶಮಿತಾಗೆ ಅಚ್ಚುಮೆಚ್ಚು. ಹಾಗಾಗಿಯೇ ಈಗ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ನಟಿಯನ್ನು ಕೂಡಾ ಪ್ರಭಾವಿಸಿವೆ. ಈ ಸಮಯ ಕೂಡಾ ಕಳೆದು ಹೋಗುತ್ತದೆ ಎಂದು ಶಮಿತಾ ಅಕ್ಕನಿಗೆ ಧೈರ್ಯ ಕೂಡಾ ಹೇಳಿದ್ದಾರೆ.

ಈ ಹಿಂದೆ ಕಪಿಲ್ ಶರ್ಮಾ ಶೋನಲ್ಲಿ ಶಿಲ್ಪಾ ಶೆಟ್ಟಿ, ಉದ್ಯಮಿ ರಾಜ್ ಕುಂದ್ರಾ ಮತ್ತು ನಾದಿನಿ ಶಮಿತಾ ಭಾಗವಹಿಸಿದ್ದರು. ಆಗ ಕೆಲವೊಂದು ಸೀಕ್ರೆಟ್‌ಗಳನ್ನು ಬಿಚ್ಚಿಟ್ಟಿದ್ದರು ರಾಜ್ ಕುಂದ್ರಾ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ 45 ವರ್ಷದ ಉದ್ಯಮಿ ಜುಲೈ 19ರಂದು ಬಂಧಿಸಲ್ಪಟ್ಟಿದ್ದಾರೆ. ಮುಂಬೈ ಪೊಲೀಸರ ಕಸ್ಟಡಿಯಲ್ಲಿರುವ ಉದ್ಯಮಿಯ ಜಾಮೀನು ಅರ್ಜಿ ಪದೇ ಪದೇ ತಿರಸ್ಕರಿಸಲ್ಪಡುತ್ತಿದ್ದು, ಗಂಡನ ಜೈಲಿಂದ ಹೊರಗೆ ಕರೆ ತರುವ ಶಿಲ್ಪಾ ಪ್ರಯತ್ನಗಳೆಲ್ಲ ವ್ಯರ್ಥವಾಗುತ್ತಿವೆ.
 

ಕಳೆದ ಕೆಲವೊಂದು ವಾರಗಳಿಂದ ಶಿಲ್ಪಾ ಹಾಗೂ ರಾಜ್ ಕುರಿತು ಬರೀ ನೆಗೆಟಿವ್ ಸುದ್ದಿಗಳೇ ಹೈಲೈಟ್ ಆಗುತ್ತಿದೆ. ಇನ್ನು ಮನೆಯಲ್ಲಿ ಸರ್ಚ್ ನಡೆಸಲು ಬಂದಾಗಲೂ ಶಿಲ್ಪಾ ಶೆಟ್ಟಿ ಪತಿಯ ಮೇಲೆ ಸತತವಾಗಿ ಕೂಗಾಡಿದ್ದರು ಎನ್ನಲಾಗಿದೆ.

2016ರಲ್ಲಿ ರಾಜ್ ಕುಂದ್ರಾ ಅವರು ಪತ್ನಿ ಶಿಲ್ಪಾ ಹಾಗೂ ನಾದಿನಿ ಶಮಿತಾ ಶೆಟ್ಟಿ ಜೊತೆ ಕಪಿಲ್ ಶರ್ಮಾ ಶೋಗೆ ಬಂದಿದ್ದರು. ಆ ಸಂದರ್ಭ ಕುಂದ್ರಾ ತಮ್ಮ ಖಾಸಗಿ ಮತ್ತು ಔದ್ಯೋಗಿಕ ಬದುಕಿನ ಬಹಳಷ್ಟು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಶೋನಲ್ಲಿ ನಾದಿನಿ ಶಮಿತಾ ಜೊತೆ ಪಾರ್ಟಿ ಮಾಡುತ್ತೇನೆ ಎಂದೂ ಹೇಳಿದ್ದಾರೆ ರಾಜ್.

ಈ ಸಂದರ್ಭ ಮಾತನಾಡಿದ ಶಮಿತಾ ಅಕ್ಕನ ಮದುವೆ ಹಾಗೂ ತನ್ನ ಡಿಪ್ರೆಷನ್ ಬಗ್ಗೆ ಹೇಳಿದ್ದಾರೆ. ಶಿಲ್ಪಾ ಮತ್ತು ರಾಜ್ ಮದುವೆಯಾದಾಗ ನನಗೆ ಖುಷಿಯಾಗಿತ್ತು. ಆದರೆ ಒಂದು ತಿಂಗಳ ಕಾಲ ನಾನು ಡಿಪ್ರೆಷನ್‌ಗೆ ಜಾರಿದೆ. ಶಿಲ್ಪಾ ಮನೆಯಲ್ಲಿದ್ದಾಗ ನಾವೆಲ್ಲರೂ ಜೊತೆಯಾಗಿ ಜೋರಾಗಿ ನಗುತ್ತಿದ್ದೆವು. ಆಮೇಲೆ ನಾವು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೆವು ಎಂದಿದ್ದಾರೆ.
 

click me!