ಹ್ಯಾಪಿ ಬರ್ತ್‌ಡೇ ನಿತಾರಾ: ಮಗಳನ್ನು ಮುರಕಲು ಗುಡಿಸಲಿಗೆ ಕರೆದೊಯ್ತಾರೆ ಅಕ್ಷಯ್..!

First Published | Sep 26, 2020, 11:21 AM IST

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಗಳು ನಿತಾರಾಗೆ ಹ್ಯಾಪಿ ಬರ್ತ್‌ಡೇ ಹೇಳಿದ್ದಾರೆ. ಮುದ್ದು ಮಗಳು ಅಂದ್ರೆ ಅಕ್ಕಿಗೆ ಬಲು ಪ್ರೀತಿ. ಇಲ್ಲಿ ನೋಡಿ ಅಪ್ಪ ಮಗಳ ಜೋಡಿ

ನನ್ನ ರಾಜಕುಮಾರಿಗೆ 8ನೇ ವರ್ಷದ ಹ್ಯಾಪಿ ಬರ್ತ್‌ಡೇ ಎಂದು ನಟ ಅಕ್ಷಯ್ ಮಗಳಿಗೆ ವಿಶ್ ಮಾಡಿದ್ದಾರೆ
ಎಲ್ಲರೂ 2020ನ್ನು ಎಷ್ಟು ಹಿಂದಿರುಗಿ ನೋಡ್ತಾರೋ ಗೊತ್ತಿಲ್ಲ. ಆದರೆ ನಾನು ಈ ವರ್ಷ ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆದಿದ್ದೇನೆ ಎಂದಿದ್ದಾರೆ ನಟ ಅಕ್ಷಯ್.
Tap to resize

ಇವಳು ನನ್ನ ಖುಷಿ, ನಾನು ದೊಡ್ಡ ಮಗುವಾಗಿರೋಕೆ ಇವಳೇ ಕಾರಣ, ಎಷ್ಟು ಎಂದು ಹೇಳಲು ಸಾಧ್ಯವಿಲ್ಲದಷ್ಟು ನೀನು ಇಷ್ಟ ಎಂದು ಬರೆದಿದ್ದಾರೆ.
ಇನ್ನೊಮ್ಮೆ ಮಗಳ ಜೊತೆ ಮಾರ್ನಿಂಗ್ ವಾಕ್ ಹೋದ ಅಕ್ಷಯ್ ಸೀದಾ ಗುಡಿಸಲಿಗೆ ನುಗ್ಗಿದ್ದಾರೆ.
ಬಡ, ವೃದ್ಧ ದಂಪತಿ ಮನೆಗೆ ಮಗಳನ್ನು ಕರೆದುಕೊಂಡು ನೀರು ಕುಡಿಯಲು ಹೋಗಿದ್ರು ನಟ.
ನೀರು ಕುಡಿಯಲು ಹೋದೆವು, ರುಚಿಯಾದ ಮನೆ ರೊಟ್ಟಿ ಮಾಡಿಕೊಟ್ಟರು ಎಂದು ಅಕ್ಷಯ್ ಬರೆದಿದ್ದಾರೆ.
ಇನ್ನೊಬ್ಬರ ಕಡೆ ಕರುಣೆ ತೋರುವುದಕ್ಕೆ ಏನೂ ಖರ್ಚಾಗಲ್ಲ, ಆದರೆ ಇದರ ಅರ್ಥ ದೊಡ್ಡದು ಎಂದು ಬರೆದಿದ್ದಾರೆ

Latest Videos

click me!