ಹನುಮಾನ್ ಚಿತ್ರದ ಪ್ರತಿ ಟಿಕೆಟ್‌ನ 5 ರೂಪಾಯಿ ರಾಮ ಮಂದಿರಕ್ಕೆ ದೇಣಿಗೆ, ನಟ ಚಿರಂಜೀವಿ ಘೋಷಣೆ!

First Published | Jan 8, 2024, 5:10 PM IST

ಹನುಮಾನ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಮಹತ್ವದ ಘೋಷಣೆ ಮಾಡಿದ್ದಾರೆ. ಹನುಮಾನ್ ಚಿತ್ರದ ಪ್ರತಿ ಟಿಕೆಟ್‌ನಿಂದ 5 ರೂಪಾಯಿಯನ್ನು ರಾಮ ಮಂದಿರಕ್ಕೆ ದೇಣಿಗೆ ನೀಡಲಾಗುವುದು ಎಂದಿದ್ದಾರೆ. 
 

ತೇಜಾ ಸಜ್ಜಾ ಅಭಿಯನದ ಹನುಮಾನ್ ಚಿತ್ರ ಬಿಡುಗಡೆ ಸಜ್ಜಾಗಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಬಹು ನಿರೀಕ್ಷೆಯ ಈ ಚಿತ್ರ ಜನವರಿ 12 ರಂದು ಬಿಡುಗಡೆಯಾಗುತ್ತಿದೆ. ಇದೀಗ ಹೈದರಾಬಾದ್‌ನಲ್ಲಿ ಚಿತ್ರದ ಪ್ರಿ ರೀಲಿಸ್ ಕಾರ್ಯಕ್ರಮ ನಡೆದಿದೆ.
 

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತೆಲುಗು ಸಿನಿಮಾದ ಮೆಘಾಸ್ಟಾರ್ ಚಿರಂಜೀವಿ ಮಹತ್ವದ ಘೋಷಣೆ ಮಾಡಿದ್ದಾರೆ. ಹನುಮಾನ್ ಚಿತ್ರದ ಪ್ರತಿ ಟಿಕೆಟ್‌ನ 5 ರೂಪಾಯಿ ಹಣವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡಲಾಗುತ್ತದೆ ಎಂದಿದ್ದಾರೆ.

Tap to resize

ಹನುಮಾನ್ ಚಿತ್ರತಂಡದ ಪರವಾಗಿ ನಾನು ಈ ಘೋಷಣಣೆ ಮಾಡುತ್ತಿದ್ದೇನೆ. ಶ್ರೀರಾಮನ ಭಂಟನ ಕುರಿತು ಚಿತ್ರ ಇದಾಗಿದೆ. ಹೀಗಾಗಿ ಈ ಚಿತ್ರದ ಆದಾಯದಲ್ಲಿ ಒಂದಿಷ್ಟು ಹಣವನ್ನು ರಾಮ ಮಂದಿರಕ್ಕೆ ದೇಣಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಚಿರಂಜೀವಿ ಹೇಳಿದ್ದಾರೆ.
 

ಹುಮಾನ್ ಚಿತ್ರದ ಪ್ರಿ ರೀಲಿಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಚಿರಂಜೀವಿ, ರಾಮ ಮಂದಿರ ಉದ್ಘಾಟನೆಗೆ ತಯಾರಿಗಳು ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ತಂಡ ದೇಣಿಗೆ ಮೂಲಕ ತಮ್ಮ ಅಳಿಲು ಸೇವೆ ನೀಡಲಿದೆ ಎಂದು ಚಿರಂಜೀವಿ ಹೇಳಿದ್ದಾರೆ.

ಚಿತ್ರದ ಪ್ರತಿ ಟಿಕೆಟ್‌ನಿಂದ ಬರುವ ಹಣದಲ್ಲಿ 5 ರೂಪಾಯಿ ರಾಮ ಮಂದಿರಕ್ಕೆ ದೇಣಿಗೆಯಾಗಿ ಸಲ್ಲಲಿದೆ. ಈ ಸಂದರ್ಭದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡ ಚಿತ್ರ ತಂಡಕ್ಕೆ ಅಭಿನಂದನೆಗಳು ಎಂದು ಚಿರಂಜೀವಿ ಹೇಳಿದ್ದಾರೆ.
 

ಜನವರಿ 12ರಂದು ಬಿಡುಗಡೆಯಾಗುತ್ತಿರುವ  ಹುಮಾನ್ ಚಿತ್ರದಲ್ಲಿ ತೇಜಾ ಸಜ್ಜಾ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್, ವಿನಯ್ ರೈ ಸೇರಿದಂತೆ ಪ್ರಮುಖರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಆಯೋಧ್ಯೆ ಭವ್ಯ ಶ್ರೀರಾಮ ಮಂದಿರ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠೆ ಮೂಲಕ ರಾಮ ಮಂದಿರ ಉದ್ಗಾಟನೆಗೊಳ್ಳಲಿದೆ. 

ರಾಮ ಮಂದಿರ ಉದ್ಘಾಟನೆಗೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ. ಈಗಾಗಲೇ ರಾಮ ಮಂದಿದ ಮಂತ್ರಾಕ್ಷತೆ ವಿತರಣೆ ಕಾರ್ಯ ನಡೆಯುತ್ತಿದೆ. ಮನೆ ಮನೆಗೂ ಮಂತ್ರಾಕ್ಷತೆ ವಿತರಿಸಲಾಗುತ್ತಿದೆ.
 

Latest Videos

click me!