ಎಷ್ಟು ದಿನ ಇರ್ತೀರಾ?; ಆಶಿಕಾ ರಂಗನಾಥ್ ಕಾಲೆಳೆದವರಿಗೆ ಉತ್ತರ ಕೊಟ್ಟ ತೆಲುಗು ನಿರ್ದೇಶಕ!

First Published | Jan 8, 2024, 10:57 AM IST

 ಆಶಿಕಾ ಬಗ್ಗೆ ಭವಿಷ್ಯ ನುಡಿದ ವಿಜಯ್ ಬನ್ನಿ. ಎರಡನೇ ಚಿತ್ರಕ್ಕೆ ಸೂಪರ್ ಸ್ಟಾರ್ ಆಗಲಿದ್ದಾರಾ? 

ಕನ್ನಡ ಚಿತ್ರರಂಗ ಚುಟು ಚುಟು ನಟಿ ಆಶಿಕಾ ರಂಗನಾಥ್ ಸದ್ಯ ಟಾಲಿವುಡ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಎರಡನೇ ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.

ನಟ ನಾಗಾರ್ಜುನ್‌ಗೆ ಜೋಡಿಯಾಗಿ ನಟಿಸಿರುವ ನಾ ಸಾಮಿ ರಂಗ ಸಿನಿಮಾ ಜನವರಿ 14ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ವಿಜಯ್ ಬನ್ನಿ ಆಕ್ಷನ್ ಕಟ್ ಹೇಳಿದ್ದಾರೆ.

Tap to resize

ಟೀಸರ್ ಮತ್ತು ಹಾಡುಗಳಲ್ಲಿ ಆಶಿಕಾ ರಂಗನಾಥ್ ಕಂಡು ವೀಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಪ್ರಚಾರ ಮಾಡುವ ನಾಯಕಿಯನ್ನು ಕೊಂಡಾಡಿದ್ದಾರೆ.

ಆಶಿಕಾ ರಂಗನಾಥ್ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಖಂಡಿತವಾಗಿಯೂ ಎಲ್ಲರನ್ನು ಇಂಪ್ರೆಸ್ ಮಾಡುತ್ತಾರೆ ಎಂದು ನಿರ್ದೇಶಕ ವಿಜಯ್ ಬನ್ನಿ ಹೇಳಿದ್ದಾರಂತೆ.

ನಾ ಸಾಮಿ ರಂಗ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಆಶಿಕಾ ರಂಗನಾಥ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಾರೆ, ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗುತ್ತಾರೆ ಎಂದಿದ್ದಾರೆ.

ಎಷ್ಟು ದಿನ ತೆಲುಗು ಚಿತ್ರರಂಗದಲ್ಲಿ ಉಳಿಯುತ್ತಾರೆ? ಎಷ್ಟು ದಿನ  ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ ಎಂದು ಟೀಕೆ ಮಾಡುತ್ತಿದ್ದವರಿಗೆ ವಿಜಯ್ ಹೇಳಿಕೆ ಉತ್ತರ ಕೊಟ್ಟಂತೆ ಆಯ್ತು. 

Latest Videos

click me!