ರಿಲೈನ್ಸ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಓರಿ; 6 ವರ್ಷಗಳಿಂದ ಮುಚ್ಚಿಟ್ಟಿರುವ ಗುಟ್ಟು ರಟ್ಟು!

First Published | Jan 8, 2024, 9:50 AM IST

ಸೆಲೆಬ್ರಿಟಿ ಪಾರ್ಟಿ, ಬಾಲಿವುಡ್ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುವ ಓರಿ. ಆದರೆ ಯಾರಿಗೂ ಗೊತ್ತಿಲ್ಲ ಓರಿ ಆಧಾಯ ಎಷ್ಟು ಎಂದು......

ಬಾಲಿವುಡ್ ಅಂಗಳದಲ್ಲಿ ಓರಿ ಎಂದೇ ಖ್ಯಾತಿ ಪಡೆದಿರುವ ಒರ್ಹಾನ್ ಅವತ್ರಮಣಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವ ಇನ್‌ಫ್ಲೂಯನ್ಸರ್. 

ದೊಡ್ಡ ಸ್ಟಾರ್‌ಗಳು ಮತ್ತು ಅವರ ಮಕ್ಕಳ ಜೊತೆ ಕಾಣಿಸಿಕೊಳ್ಳುವ ಓರಿ ದುಡಿಮೆ ಮತ್ತು ಜೀವನಕ್ಕೆ ಏನು ಸಂಪಾದನೆ ಮಾಡುತ್ತಾರೆ ಅನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಈಗ ಅವರ ಲಿಂಕ್‌ಡಿನ್‌ನಲ್ಲಿ ಮಾಹಿತಿ ಸಿಕ್ಕಿದೆ.

Tap to resize

ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬದ ಜೊತೆ ಆಪ್ತತೆ ಹೊಂದಿರುವ ಓರಿ ನಿತಾ ಅಂಬಾನಿ, ಇಶಾ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಜೊತೆ ಸದಾ ಇರುತ್ತಾರೆ.

ಲಿಂಕ್‌ಡಿನ್‌ ಪ್ರೊಫೈಟ್‌ ಮೂಲಕ ಓರಿ ಜೀವನಕ್ಕೆ ಏನು ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ರಿಲೈನ್ಸ್‌ ಇಂಡಸ್ಟ್ರಿ ಲಿಮಿಟೆಡ್‌ನಲ್ಲಿ ಓರಿ ಸ್ಪೆಷಲ್ ಪ್ರಾಜೆಕ್ಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಸುಮಾರು 6 ವರ್ಷಗಳಿಂದ ರಿಲೈನ್‌ಸ್‌ ಕಂಪನಿ ಜೊತೆ ಕೆಲಸ ಮಾಡುತ್ತಿದ್ದು. ಗ್ರಾಫಿಕ್ ಡಿಸೈನರ್ ಆಗೋ ಆಸೆ ತುಂಬಾನೇ ಇದೆ ಅಂತೆ. ಹೀಗಾಗಿ ಅಂಬಾನಿ ಕುಟುಂಬ ತುಂಬಾನೇ ಕ್ಲೋಸ್.

ಇನ್ನು ಪ್ಯಾಪರಾಜಿಗಳ ಕಣ್ಣಿಗೆ ಬೀಳುವ ಓರಿ ವೃತ್ತಿ ಜೀವನದಕ್ಕೆ ಪ್ರಶ್ನೆ ಮಾಡಿದಾಗ ಉತ್ತರ ಕೊಡದೆ ಕಾಣೆಯಾಗುತ್ತಾರೆ. ಆದರೆ influencer ರೀತಿ ಬದುಕುತ್ತಾರೆ.  

ರಿಲೈನ್ಸ್‌ ಕಂಪನಿಯಲ್ಲಿ ಕೆಲಸ ಮಾಡಿದರೆ ಅಂಬಾನಿ ಫ್ಯಾಮಿಲಿಗೆ ಇಷ್ಟೋಂದು ಕ್ಲೋಸ್ ಆಗ್ಬೋದಾ? ಎಂದು ನೆಟ್ಟಿಗರು ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ.

ಈ ಹಿಂದೆ ನಾನು ಲಿವರ್ ನಾನು ಬದುಕಿರುವುದು ಜೀವನ ಎಂಜಾಯ್ ಮಾಡುವುದಕ್ಕೆ ಕಷ್ಟ ಪಟ್ಟು ಕೆಲಸ ಮಾಡುವುದಕ್ಕೆ ಅಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. 

ಓರಿ ಧರಿಸುವ ಸಿಂಪಲ್ ಬಟ್ಟೆ ಕೂಡ ಡಿಸೈನರ್ ವೇರ್ ಆಗಿರುತ್ತದೆ. ಅಷ್ಟೇ ಯಾಕೆ ದೇಶ ವಿದೇಶಗಳಿಂದ ಡಿಫರೆಂಟ್ ಆಗಿರುವ ಮೊಬೈಲ್‌ ಪ್ಯಾನಲ್‌ಗಳನ್ನು ಓರಿಗೆ ಎಂದು ಡಿಸೈನ್ ಮಾಡಿ ಕಳುಹಿಸುತ್ತಾರೆ.

Latest Videos

click me!