Hanuman Ansh: ಸದ್ಯ ಥಿಯೇಟರ್ ಗಳಲ್ಲಿ ಭಾರಿ ಸದ್ದು ಮಾಡುತ್ತಿರುವ, ಕಥೆಯ ಮೂಲಕ, ಜನರಿಂದ ಜನರಿಂದ ತಲುಪಿರುವ ಸಣ್ಣ ಬಜೆಟ್ ಸಿನಿಮಾ ‘ಹನುಮಾನ್ ಅಂಶ್’ ಸಿನಿಮಾದಲ್ಲಿ ನಟ ಶೋಭಿನವ್ ಸತ್ಯ ಅವರಿಗೆ ನಾಯಕನ ಪಾತ್ರ ಸಿಕ್ಕಿದ್ದು ಹೇಗೆ? ಎನ್ನುವ ಅಚ್ಚರಿಯ ವಿಚಾರ ಇಲ್ಲಿದೆ.
ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಸಿನಿಮಾ ಈ ವರ್ಷ ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಆದರೆ ಈ ಸಿನಿಮಾ ದೊಡ್ಡ ಪರದೆಯ ಮೇಲೆ ಮೂಡಿಬರುವ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಭಕ್ತಿ ಪ್ರಧಾನ ಸಿನಿಮಾ ಇದುವರೆಗೆ 169 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
27
ಶೋಭಿನವ್ ಸತ್ಯ ಲೀಡ್ ಆಕ್ಟರ್ ಆಗಿರಲಿಲ್ಲ!
ಸಿನಿಮಾದಲ್ಲಿ ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಶೋಭಿನವ್ ಸತ್ಯ ಆರಂಭದಲ್ಲಿ ನಾಯಕನ ಪಾತ್ರಕ್ಕೆ ಆಯ್ಕೆಯಾಗಿರಲಿಲ್ಲ. ಸಿನಿಮಾ ಶೂಟಿಂಗ್‌ನ ಮೊದಲ ದಿನವೇ ಮೊದಲು ಆಯ್ಕೆಯಾಗಿದ್ದ ನಟ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಸಹಾಯಕ ನಿರ್ದೇಶಕ ಶೋಭಿನವ್ ಅವರಿಗೆ ಈ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿತು.
37
ಪಾತ್ರ ಸಿಕ್ಕಾಗ ಶೋಭಿನವ್‌ಗೆ ಹಿಂಜರಿಕೆ
ಈ ಪಾತ್ರಕ್ಕೆ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದಾಗ ಶೋಭಿನವ್ ಸತ್ಯ ಅವರೇ ಅಚ್ಚರಿಗೊಳಗಾಗಿದ್ದರು. ಅದರ ಜೊತೆಗೆ ಪಾತ್ರದ ಬಗ್ಗೆ ಅವರಿಗೆ ಸಾಕಷ್ಟು ಒತ್ತಡವೂ ಇತ್ತು. ಅದರಲ್ಲೂ ಮುಖ್ಯವಾಗಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರಿಂದ, ಈ ಪಾತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಅವರಲ್ಲಿತ್ತು.
‘ಜನ ನನ್ನನ್ನು ಈ ಪಾತ್ರದಲ್ಲಿ ಒಪ್ಪಿಕೊಳ್ಳುತ್ತಾರಾ?’ ಎಂಬ ಭಯ
ಶೋಭಿನವ್ ಹೇಳುವಂತೆ, ಆರಂಭದಲ್ಲಿ ಅವರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. “ಮುಂದೆ ಜನರು, ‘ಇಂತಹ ಬಾಬಾನನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದಾರೆ?’ ಎಂದು ಹೇಳಿದರೆ ಏನು ಮಾಡುವುದು ಎಂಬ ಭಯವಿತ್ತು. ಈ ಎಲ್ಲ ವಿಚಾರಗಳು ನನ್ನ ಮನಸ್ಸಿನಲ್ಲಿ ಓಡಾಡುತ್ತಿದ್ದವು. ಆಗ ನಿರ್ದೇಶಕರು ನನ್ನನ್ನು ಸಮಾಧಾನಪಡಿಸಿ, ನೀನು ನಿನ್ನ ಅಭಿನಯದ ಬಗ್ಗೆ ಮಾತ್ರ ಗಮನ ಕೊಡು, ಬಾಕಿದ್ದನ್ನು ನಾನು ನೋಡುತ್ತೇನೆ’ ಎಂದಿದ್ದರಂತೆ. ಆದರೆ ಸಿನಿಮಾ ಚಿತ್ರೀಕರಣ ಆರಂಭವಾದ ನಂತರ ಅವರ ಆತ್ಮವಿಶ್ವಾಸ ನಿಧಾನವಾಗಿ ಹೆಚ್ಚಾಗತೊಡಗಿತು.
57
ಶೂಟಿಂಗ್ ವೇಳೆ ನಡೆದ ವಿಚಿತ್ರ ಅನುಭವ
ಶೂಟಿಂಗ್‌ಗಾಗಿ ತಂಡದೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಾಗ ನಡೆದ ಘಟನೆ ಅವರ ಮನಸ್ಥಿತಿಯನ್ನೇ ಬದಲಿಸಿತು ಎಂದು ಹೇಳುವ ಶೋಭಿನವ್ ‘ಅದು ಮೊದಲ ದಿನವಾಗಿತ್ತು. ನಾನು ಈ ಪಾತ್ರಕ್ಕೆ ನಿಜವಾಗಿಯೂ ಹೊಂದಿಕೊಳ್ಳುತ್ತಿದ್ದೇನೆಯೇ ಎಂಬುದು ನನಗೆ ಖಚಿತವಾಗಿರಲಿಲ್ಲ. ಆದರೆ ಎರಡನೇ ದಿನ ಇಡೀ ತಂಡ ಬೇಸ್‌ಗೆ ತೆರಳಿದಾಗ. ನಾನು ಮಾತ್ರ ದೇವಸ್ಥಾನದಲ್ಲಿ ಒಬ್ಬನೇ ಉಳಿದುಕೊಂಡಿದ್ದೆ. ಆವಾಗ ಅಲ್ಲಿಗೆ ಬಂದಿದ್ದ ಕೆಲವರು ಶೋಭಿನವ್ ಅವರನ್ನು ಬಾಬಾ ಎಂದು ಕರೆದರಂತೆ, ಜೊತೆಗೆ ಏನಾದರೂ ತಿನ್ನಲು ಬೇಕೆ ಎಂದು ಉಪಚರಿಸಿದರಂತೆ.
67
ಬೆಳ್ಳುಳ್ಳಿ, ಉಪ್ಪು ಮತ್ತು ರೊಟ್ಟಿ ತಿಂದ ನಟ
ಆ ಸಮಯದಲ್ಲಿ ತಾನು ಸ್ವಲ್ಪ ಬೆಳ್ಳುಳ್ಳಿ, ಉಪ್ಪು ಮತ್ತು ರೊಟ್ಟಿ ತರುವಂತೆ ಕೇಳಿದಾಗ, ಗ್ರಾಮಸ್ಥರು ಆ ವಸ್ತುಗಳನ್ನು ತಂದುಕೊಟ್ಟಿದ್ದರಂತೆ. ನನ್ನೊಂದಿಗೆ ಇಂತಹ ಹಲವು ಘಟನೆಗಳು ನಡೆಯುತ್ತಲೇ ಇದ್ದವು ಎನ್ನುವ ಶೋಭಿನವ್, ನಾನು ಉದ್ದೇಶಪೂರ್ವಕವಾಗಿ ಏನನ್ನೂ ಮಾಡಲು ಹೋಗಿರಲಿಲ್ಲ. ಆದರೆ ಎಲ್ಲವೂ ಸಹಜವಾಗಿಯೇ ನಡೆಯುತ್ತಿತ್ತು. ಜನರು ನನ್ನ ಬಳಿ ಬಂದು ಆಶೀರ್ವಾದ ಕೇಳಲು ಆರಂಭಿಸಿದಾಗ, ನಾನೂ ಅವರಿಗೆ ಆಶೀರ್ವಾದ ನೀಡಲು ಶುರು ಮಾಡಿದೆ. ಇದರಿಂದ ನಿಧಾನವಾಗಿ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು” ಎಂದು ಅವರು ಹೇಳಿದ್ದಾರೆ.
77
ಲೀಡ್ ಆಕ್ಟರ್ ಆಗಿ ಜನ ಒಪ್ಪಿಕೊಳ್ಳುವರೇ ಎಂಬ ಆತಂಕ
ಶೋಭಿನವ್ ಅವರಿಗೆ ಮತ್ತೊಂದು ದೊಡ್ಡ ಚಿಂತೆ ಇತ್ತು. ತಾವು ಸಹಾಯಕ ನಿರ್ದೇಶಕರಾಗಿ ಪರಿಚಿತರಾಗಿದ್ದ ಕಾರಣ, ಪ್ರೇಕ್ಷಕರು ತಮ್ಮನ್ನು ನಾಯಕನ ಪಾತ್ರದಲ್ಲಿ ಸ್ವೀಕರಿಸುತ್ತಾರೆಯೇ ಎಂಬ ಅನುಮಾನ ಅವರಲ್ಲಿತ್ತು. “ ಜನರು ನನ್ನನ್ನು ಈ ಪಾತ್ರದಲ್ಲಿ ಸ್ವೀಕರಿಸುತ್ತಾರೆಯೇ ಎಂದು ನಾನು ಯೋಚಿಸುತ್ತಿದ್ದೆ. ನಟರು ಇಂತಹ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ನನ್ನನ್ನು ಸಹಾಯಕ ನಿರ್ದೇಶಕ ಎಂದು ತಿಳಿದಿರುವವರು ನನ್ನನ್ನು ನಾಯಕನಾಗಿ ಒಪ್ಪಿಕೊಳ್ಳುತ್ತಾರೆಯೇ? ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಯೋಚನೆಯೂ ಇತ್ತು. ಆದರೆ ನಿರ್ದೇಶಕರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ನಾನು ನಿನ್ನೊಂದಿಗೆ ಇದ್ದೇನೆ ಎಂದು ಧೈರ್ಯ ತುಂಬಿದರು” ಎಂದು ಶೋಭಿನವ್ ಸತ್ಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.