ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿ ಬಾವಿ ಪತಿ ಪರಿಚಯಿಸಿದ ನಟಿ ಹನ್ಸಿಕಾ; ಮದುವೆ ಯಾವಾಗ?

Published : Nov 02, 2022, 12:12 PM IST

ಬಹುಭಾಷ ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಬಾವಿ ಪತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

PREV
16
ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿ ಬಾವಿ ಪತಿ ಪರಿಚಯಿಸಿದ ನಟಿ ಹನ್ಸಿಕಾ; ಮದುವೆ ಯಾವಾಗ?

ಬಹುಭಾಷ ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಹನ್ಸಿಕಾ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿತ್ತು. ಆದರೆ ಈ ಬಗ್ಗೆ ಯಾವುದೇ ಹನ್ಸಿಕಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದೀಗ ಮೊದಲ ಬಾರಿಗೆ ಹನ್ಸಿಕಾ ಬಾವಿ ಪತಿಯನ್ನು ಪರಿಚಯಿಸಿದ್ದಾರೆ.

26

ಹನ್ಸಿಕಾ ಬಾವಿ ಪತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹನ್ಸಿಕಾ ಉದ್ಯಮಿ ಸೊಹೇಲ್ ಕಥರಿಯಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗಷ್ಟೆ ಹನ್ಸಿಕಾ ಸೊಹೇಲ್ ಜೊತೆ ನಿಶ್ಚಿತಾರ್ತ ಮಾಡಿಕೊಂಡಿದ್ದು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

36

ಫೋಟೋ ಶೇರ್ ಮಾಡಿ, 'ಈಗ ಮತ್ತು ಎಂದೆಂದಿಗೂ' ಕ್ಯಾಪ್ಷನ್ ನೀಡಿದ್ದಾರೆ. ಅಂದಹಾಗೆ ಹನ್ಸಿಕಾ ಮತ್ತು ಸೊಹೇಲ್ ಇಬ್ಬರು ಪ್ಯಾರಿಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಬಂದಿದೆ. 

46

ಹನ್ಸಿಕಾಗೆ ಅನೇಕ ಸ್ಟಾರ್ಸ್ ವಿಶ್ ಮಾಡಿದ್ದಾರೆ. ವರುಣ್ ಧವನ್, ಅನುಷ್ಕಾ ಶೆಟ್ಟಿ, ಪಿವಿ ಸಿಂಧು ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ. ಹನ್ಸಿಕಾ ತನ್ನ ಮದುವೆ ದಿನಾಂಕ ಇನ್ನು ರಿವೀಲ್ ಮಾಡಿಲ್ಲ. 
 

56

ಮೂಲಗಳ ಪ್ರಕಾರ ಹನ್ಸಿಕಾ ಡಿಸೆಂಬರ್ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಜೈಪುರದಲ್ಲಿ ಅದ್ದೂರಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಹನ್ಸಿಕಾ ಮತ್ತು ಸೊಹೇಲ್ ಕುಟುಂಬ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

66

ಹನ್ಸಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ತೀರ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 2ರಿಂದ ಮದುವೆ ಸಮಾರಂಭ ಪ್ರಾರಂಭವಾಗಲಿದೆ. ಹಾಗಾಗಿ ನವೆಂಬರ್ ಕೊನೆಯ ವಾರದಲ್ಲಿ ಎರಡು ಕುಟುಂಬದವರು ಜೈಪುರಗೆ ಹಾರಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.  

Read more Photos on
click me!

Recommended Stories