ನಟಿ ಹನ್ಸಿಕಾ ಮದುವೆ ಫೋಟೋಗಳು ವೈರಲ್; ಪ್ರಿ-ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ 'ಬಿಂದಾಸ್' ಬೆಡಗಿ

First Published Dec 4, 2022, 4:00 PM IST

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ.  ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಕಥರಿಯಾ ಮದುವೆ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ನಡೆಯುತ್ತಿದೆ. 

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ.  ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಕಥರಿಯಾ ಮದುವೆ ಜೈಪುರದ ಪುರಾತನ ಮಂಡೋಟಾ ಅರಮನೆಯಲ್ಲಿ ನಡೆಯುತ್ತಿದೆ. ಎರಡೂ ಕುಟುಂಬ ಈಗಾಗಲೇ ಮಂಡೋಟಾ ಅರಮನೆಯಲ್ಲಿ ಬೀಡು ಬಿಟ್ಟಿದ್ದು ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. 

ಹನ್ಸಿಕಾ ಮತ್ತು ಸೊಹೇಲ್ ಕಥರಿಯಾ ಮದುವೆ ಶಾಸ್ತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಳೆದ ನಾಲ್ಕೈದು ದಿನಗಳಿಂದ ರಾಜಸ್ಥಾನದ ಅರಮನೆಯಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಮೆಹಂದಿ ಶಾಸ್ತ್ರ, ಹಳದಿ, ಸಂಗೀತ ಕಾರ್ಯಕ್ರಮ ಸೇರಿದಂತೆ ಎಲ್ಲಾ ಶಾಸ್ತ್ರಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಹನ್ಸಿಕಾ. 

ಮದುವೆ ಶಾಸ್ತ್ರಗಳನ್ನು ಹನ್ಸಿಕಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತರಹೇವಾರಿ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಹನ್ಸಿಕಾ ಮತ್ತು ಸೊಹೇಲ್ ಅವರ ಪ್ರಿ ವೆಡ್ಡಿಂಗ್ ಪಾರ್ಟಿ ಅದ್ದೂರಿಯಾಗಿ ನಡೆದಿದೆ. ಪ್ರಿ ವೆಡ್ಡಿಂಗ್ ಪಾರ್ಟಿಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಡಿಸೆಂಬರ್ 2 ರಾತ್ರಿಯಿಂದನೇ ಮದುವೆ ಸಮಾರಂಭ ಪ್ರಾರಂಭವಾಗಿದೆ. ಡಿಸೆಂಬರ್ 3ರಿಂದ ಮೆಹಂದಿ ಮತ್ತು ಅರಿಶಿಣ ಶಾಸ್ತ್ರದ ಸಂಭ್ರಮ ನಡೆಯುತ್ತಿದೆ. ಡಿಸೆಂಬರ್ 4ರಂದು ಹನ್ಸಿಕಾ ಕೊರಳಿಗೆ ಸೊಹೇಲ್.  ಮಾಂಗಲ್ಯ ಧಾರಣೆ ಮಾಡಲಾಗಿದ್ದಾರೆ ಎನ್ನಲಾಗಿತ್ತು. ಆದರೆ ಇದುವರೆಗೂ ಮದುವೆ ಫೋಟೋ ರಿವೀಲ್ ಆಗಿಲ್ಲ. 

ಹನ್ಸಿಕಾ ಮತ್ತು ಸೊಹೇಲ್ ಇಬ್ಬರೂ ಮದುವೆ ದಿನಾಂಕವನ್ನು ಎಲ್ಲಿಯೂ ಶೇರ್ ಮಾಡಿಲ್ಲ. ಸದ್ಯ ಮದುವೆ ಶಾಸ್ತ್ರಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇಬ್ಬರ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಲೈಕ್ಸ್ ಒತ್ತುತ್ತಿದ್ದಾರೆ. 

ನಟಿ ಹನ್ಸಿಕಾ 2003ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಹಿಂದಿ ಸಿನಿಮಾ ಮೂಲಕ ತೆರೆಮೇಲೆ ಮಿಂಚಿದ ಹನ್ಸಿಕಾ ನಂತರ ಸೌತ್ ಇಂಡಿಯಾ ಕಡೆ ಮುಖ ಮಾಡಿದರು. ತೆಲುಗು ಸಿನಿಮಾ ಮೂಲಕ ದಕ್ಷಿಣಕ್ಕೆ ಎಂಟ್ರಿ ಹನ್ಸಿಕಾ ಬಳಿಕ ಸೌತ್ ನಟಿಯಾಗಿಯೇ ಖ್ಯಾತಿ ಗಳಿಸಿದರು.

ಕನ್ನಡ ಸಿನಿಮಾದಲ್ಲೂ ಹನ್ಸಿಕಾ ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ಹನ್ಸಿಕಾ ನಟಿಸಿದ್ದಾರೆ. ಸದ್ಯ ತಮಿಳಿನ ಅನೇಕ ಸಿನಿಮಾಗಳು ಹನ್ಸಿಕಾ ಕೈಯಲ್ಲಿದೆ.  
 

click me!