ರಿಷಬ್‌ ಶೆಟ್ಟಿ ಕಾಂತಾರ 1ರಲ್ಲಿ ಬಾಲಿವುಡ್‌ ನಟ ಗುಲ್ಷನ್‌ ದೇವಯ್ಯ: ಪಾತ್ರದ ಲುಕ್ ರಿಲೀಸ್!

Published : Aug 20, 2025, 10:23 AM IST

ಕಾಂತಾರ ಬಿಡುಗಡೆಯ ಬಳಿಕ ಗುಲ್ಷನ್‌ ದೇವಯ್ಯ ಅವರು ಈ ಕುರಿತು ಪ್ರಸ್ತಾಪಿಸಿ, ರಿಷಬ್‌ ಶೆಟ್ಟಿ ಈಗ ಪಾತ್ರ ಕೊಡುತ್ತಾರೋ ಇಲ್ಲವೋ, ಕೊಟ್ಟರೆ ಮಾಡೋಣ ಎಂದಿದ್ದರು.

PREV
15

ಕನ್ನಡ ಮೂಲದ ಖ್ಯಾತ ಬಾಲಿವುಡ್‌ ನಟ ಗುಲ್ಶನ್‌ ದೇವಯ್ಯ ಅವರು ರಿಷಬ್‌ ಶೆಟ್ಟಿ ನಿರ್ದೇಶನ, ನಟನೆಯ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

25

‘ಕುಲಶೇಖರ’ ಎಂಬ ಪಾತ್ರದಲ್ಲಿನ ಅವರ ಲುಕ್‌ ಅನ್ನು ಚಿತ್ರತಂಡ ಇದೀಗ ಬಿಡುಗಡೆ ಮಾಡಿದೆ. ರಿಷಬ್‌ ಶೆಟ್ಟಿ ನಿರ್ದೇಶಿಸಬೇಕಿದ್ದ ‘ರುದ್ರ ಪ್ರಯಾಗ’ ಚಿತ್ರದಲ್ಲಿ ಗುಲ್ಷನ್ ದೇವಯ್ಯ ಅವರು ನಟಿಸಬೇಕಿತ್ತು.

35

ಆದರೆ ಕಾರಣಾಂತರಗಳಿಂದ ಆ ಸಿನಿಮಾ ಆರಂಭವಾಗಿರಲಿಲ್ಲ. ಕಾಂತಾರ ಬಿಡುಗಡೆಯ ಬಳಿಕ ಗುಲ್ಷನ್‌ ದೇವಯ್ಯ ಅವರು ಈ ಕುರಿತು ಪ್ರಸ್ತಾಪಿಸಿ, ರಿಷಬ್‌ ಶೆಟ್ಟಿ ಈಗ ಪಾತ್ರ ಕೊಡುತ್ತಾರೋ ಇಲ್ಲವೋ, ಕೊಟ್ಟರೆ ಮಾಡೋಣ ಎಂದಿದ್ದರು. ಹಳೆಯ ಕತೆಯನ್ನು ಮರೆಯದ ರಿಷಬ್‌ ಶೆಟ್ಟಿ ಅವರು ಗುಲ್ಷನ್‌ ದೇವಯ್ಯ ಅವರಿಗೆ ಒಳ್ಳೆಯ ಪಾತ್ರವನ್ನೇ ಕೊಟ್ಟಿದ್ದಾರೆ.

45

ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಅಕ್ಟೋಬರ್‌ 2ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಚಿತ್ರತಂಡ ಒಂದೊಂದೇ ಪಾತ್ರದ ಲುಕ್‌ ಅನ್ನು ಅನಾವರಣ ಮಾಡುತ್ತಿದೆ.

55

ಇನ್ನು ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ, ಜಾಗತಿಕವಾಗಿ ಮೆಚ್ಚುಗೆ ಗಳಿಸಿದ ‘ಕಾಂತಾರ’ದ ಹಿಂದಿನ ಅಧ್ಯಾಯವಾಗಿದ್ದು, ಹೊಂಬಾಳೆ ಫಿಲಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಚಿತ್ರವು ಸಂಸ್ಕೃತಿ, ಜಾನಪದ ಮತ್ತು ಅದ್ಭುತ ಕಥಾಹಂದರದ ಆಳವಾದ ಪದರಗಳನ್ನು ಪರಿಶೋಧಿಸಲಿದೆ.

Read more Photos on
click me!

Recommended Stories