ನಿರ್ದೇಶಕ ರಾಜಮೌಳಿ ಮತ್ತು ಹೀರೋ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಚಿತ್ರ 'ವಾರಣಾಸಿ'. ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಟೀಸರ್ ನೆಟ್ಟಿಗರನ್ನು ಸಖತ್ ಆಗಿ ಸೆಳೆದಿದೆ.
ಟಾಲಿವುಡ್ ಖ್ಯಾತಿಯನ್ನು ಜಗತ್ತಿಗೆ ತೋರಿಸಿದ ನಿರ್ದೇಶಕ ಎಸ್.ಎಸ್.ರಾಜಮೌಳಿ. ಬಜೆಟ್ ದೊಡ್ಡದಾಗಲಿ, ಸಮಯ ಹೆಚ್ಚಾಗಲಿ, ತನ್ನ ಸಿನಿಮಾಗಳಿಂದ ಭರ್ಜರಿ ಕಲೆಕ್ಷನ್ ಮಾಡುತ್ತಾರೆ ಜಕ್ಕಣ್ಣ. ಅಂತಹ ನಿರ್ದೇಶಕರ ಸಿನಿಮಾದಲ್ಲಿ ಒಂದೇ ಒಂದು ಸೀನ್ ಆದರೂ ಸರಿ, ಸಂಭಾವನೆ ಕಡಿಮೆ ಇದ್ದರೂ ನಟಿಸಲು ರೆಡಿಯಾಗುತ್ತಾರೆ ನಟ-ನಟಿಯರು.
25
ವಿಲನ್ ಪಾತ್ರದ ಹೆಸರು 'ಕುಂಭ'
ಮಗಧೀರ, ಈಗ, ಬಾಹುಬಲಿ, RRR.. ಹೀಗೆ ಜಕ್ಕಣ್ಣನ ಯಾವುದೇ ಸಿನಿಮಾ ಆದರೂ ವಿಲನ್ ಪಾತ್ರಗಳು ಪವರ್‌ಫುಲ್ ಆಗಿರುತ್ತವೆ. ಹೀರೋಗಳಿಗಿಂತ ವಿಲನ್ ಪಾತ್ರಕ್ಕೇ ಹೆಚ್ಚು ಇಂಪ್ಯಾಕ್ಟ್ ಇರುತ್ತದೆ. ಈಗ ರಾಜಮೌಳಿ ನಿರ್ದೇಶಿಸುತ್ತಿರುವ 'ವಾರಣಾಸಿ' ಚಿತ್ರದಲ್ಲೂ ಅದೇ ಪುನರಾವರ್ತನೆಯಾಗಲಿದೆ. ಈ ಸಿನಿಮಾದಲ್ಲಿನ ವಿಲನ್ ಪಾತ್ರದ ಹೆಸರು 'ಕುಂಭ'. ಈ ಪಾತ್ರಕ್ಕೆ ರಾಜಮೌಳಿ ಪೃಥ್ವಿರಾಜ್ ಸುಕುಮಾರನ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬುದು ಇಂಡಸ್ಟ್ರಿ ಮಾತು.
35
ಸೂಟ್ ಆಗ್ತಾರಾ ಇಲ್ವಾ ಅನ್ನೋ ಮಾತಿತ್ತು
ಮೊದಲಿಗೆ ಈ ಪಾತ್ರಕ್ಕೆ ಪೃಥ್ವಿರಾಜ್ ಸೂಟ್ ಆಗ್ತಾರಾ ಇಲ್ವಾ ಅನ್ನೋ ಮಾತಿತ್ತು. ಆದರೆ ಫಸ್ಟ್ ಲುಕ್ ರಿಲೀಸ್ ಆದ್ಮೇಲೆ ಆ ಅನುಮಾನಗಳೆಲ್ಲಾ ದೂರವಾದವು. ಆ ಲುಕ್ ನೋಡಿ 'ಈ ಸಿನಿಮಾದಲ್ಲಿ ವಿಲನ್ ಹೀರೋನನ್ನೇ ಮೀರಿಸಿದ್ದಾನೆ' ಅಂದ್ಕೊಂಡ್ರು. ಆದರೆ, ಇಲ್ಲೊಂದು ಇಂಟರೆಸ್ಟಿಂಗ್ ಮಾತು ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ.
ಪೃಥ್ವಿರಾಜ್ ಅಲ್ವಂತೆ.. ಮೊದಲಿಗೆ 'ಕುಂಭ' ಪಾತ್ರಕ್ಕೆ ಈ ಮಲಯಾಳಂ ನಟನನ್ನು ಅಂದ್ಕೊಂಡಿರಲಿಲ್ವಂತೆ. ಆ ಪಾತ್ರಕ್ಕೆ ಮೊದಲ ಆಯ್ಕೆಯಾಗಿ ಗೋಪಿಚಂದ್ ಅವರನ್ನು ರಾಜಮೌಳಿ ಅಂದುಕೊಂಡಿದ್ದರಂತೆ. ವಿಲನ್ ಆಗಿ ಗೋಪಿಚಂದ್ ನಟಿಸಿದ್ದರೆ ಆ ಪಾತ್ರಕ್ಕೆ ದೊಡ್ಡ ಮಟ್ಟದ ಇಂಪ್ಯಾಕ್ಟ್ ಇರುತ್ತಿತ್ತು ಎಂಬುದು ಅಭಿಮಾನಿಗಳ ಅಭಿಪ್ರಾಯ. ಆದರೆ ಕಾರಣವೇನೆಂದು ತಿಳಿದಿಲ್ಲ, ಗೋಪಿಚಂದ್ ಕೈಯಿಂದ ಆ ಪಾತ್ರ ಜಾರಿ ಪೃಥ್ವಿರಾಜ್ ಸುಕುಮಾರನ್ ಪಾಲಾಗಿದೆ.
55
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗ್ಲಿಂಪ್ಸ್ ಬಿಡುಗಡೆ
ನವೆಂಬರ್ 15 ರಂದು ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ವಾರಣಾಸಿ' ಟೈಟಲ್ ಗ್ಲಿಂಪ್ಸ್ ಅನ್ನು ರಾಜಮೌಳಿ ಬಿಡುಗಡೆ ಮಾಡಿದರು. 'ಗ್ಲೋಬ್ ಟ್ರಾಟರ್.. ಟೈಮ್ ಟ್ರಾಟರ್' ಎನ್ನುವ ಮೂಲಕ ರಾಜಮೌಳಿ ಸಿನಿಮಾ ಮೇಲಿನ ಹೈಪ್ ಹೆಚ್ಚಿಸಿದ್ದಾರೆ. ಇತ್ತ ಮಹೇಶ್ ಬಾಬು ಕೂಡ ತಮ್ಮ ಅಭಿಮಾನಿಗಳಿಗೆ ಇನ್ನೂ ಸಾಕಷ್ಟು ಸರ್‌ಪ್ರೈಸ್‌ಗಳಿವೆ ಎಂದು ಹೇಳಿದ್ದಾರೆ.