ಯಶ್ ತೆಕ್ಕೆಯಲ್ಲಿ ಹೀರೋಯಿನ್, ಬೀಚ್ ರೊಮ್ಯಾಂಟಿಕ್ ಸೀನ್ ಬಗ್ಗೆ ಹೆಚ್ಚಾಯಿತು ಕುತೂಹಲ, ಈ ಹಾಡಿನ ತಿರುಳನ್ನು ಫೋಟೋ ಮೂಲಕ ನೀಡಿದ್ದಾರೆ. ಅದ್ಬುತ ಫೋಟೋ ಇದೀಗ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ.
ಕುತೂಹಲ ಹೆಚ್ಚಾಗುತ್ತಿದೆ. ಕೌಂಟ್‌ಡೌನ್ ಶುರುವಾಗಿದೆ. ಯಶ್ ಅಭಿಮಾನಿಗಳು ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಇದೀಗ ಟಾಕ್ಸಿಕ್ ಸಿನಿಮಾ ತಂಡ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಯಶ್ ಟಾಕ್ಸಿಕ್ ಸಿನಿಮಾ ಟೀಸರ್ ಈಗಾಗಲೇ ಅಬಿಮಾನಿಗಳ ಕುತೂಹಲ ಡಬಲ್ ಮಾಡಿದೆ. ಇದೀಗ ಟಾಕ್ಸಿಕ್ ಸಿನಿಮಾದ ಸಾಂಗ್ ರಿಲೀಸ್ ಮಾಡುತ್ತಿದೆ.
25
ಮಾರ್ಚ್ 2ಕ್ಕೆ ಟಾಕ್ಸಿಕ್ ಸಿನಿಮಾ ಸಾಂಗ್ ರಿಲೀಸ್
ಮಾರ್ಚ್ 2ರಂದು ಟಾಕ್ಸಿಕ್ ಸಿನಿಮಾದ ಸಾಂಗ್ ರಿಲೀಸ್ ಆಗುತ್ತಿದೆ. ತಬಾಹಿ ಸಾಂಗ್ ಸಿನಿಮಾ ಜಗತ್ತಿನಲ್ಲೇ ಧೂಳೆಬ್ಬಿಸಲು ಸಜ್ಜಾಗಿದೆ. ಪ್ರೀತಿ, ಪ್ರೇಮದ ನವೆರೇಳುವ ಹಾಡನ್ನು ಟಾಕ್ಸಿಕ್ ತಂಡ ರಿಲೀಸ್ ಮಾಡುತ್ತಿದೆ. ಯಶ್ ಮಾರ್ಕೆಟಿಂಗ್ ತಂತ್ರಕ್ಕೆ ಇದೀಗ ಬಾಲಿವುಡ್ ಕೂಡ ಬೆಚ್ಚಿ ಬಿದ್ದಿದೆ.
35
ಕಿಯಾರ ಅಡ್ವಾಣಿ ಪೋಸ್ಟ್
ತಬಾಹಿ ಸಾಂಗ್ ಕುರಿತ ಅಪ್‌ಡೇಟನ್ನು ಟಾಕ್ಸಿಕ್ ಸಿನಿಮಾ ತಂಡದ ನಾಯಕಿಯರ ಪೈಕಿ ಕಿಯಾರ ಅಡ್ವಾಣಿ ನೀಡಿದ್ದಾರೆ. ಹೀಗಾಗಿ ಯಶ್ ತೋಳೇರಿದ ನಾಯಕಿ ಕಿಯಾರ ಅಡ್ವಾಣಿ ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ. ರುಕ್ಣಿವಂಸತ್, ನಯನತಾರ, ಹುಮಾ ಖುರೇಷಿ ಸೇರಿದಂತೆ ನಾಯಕಿರ ದಂಡೇ ಟಾಕ್ಸಿಕ್ ಸಿನಿಮಾದಲ್ಲಿದೆ.
ಯಶ್ ಟಾಕ್ಸಿಕ್ ಸಿನಿಮಾದ ತಬಾಹಿ ಸಾಂಗ್ ಇದೀಗ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಟಾಕ್ಸಿಕ್ ಟೀಸರ್‌ನಲ್ಲಿ ಕ್ರೈಂ ಥ್ರಿಲ್ಲರ್ ಸೀನ್‌ಗಳೇ ಹೆಚ್ಚಿತ್ತು. ಆದರೆ ಇದೀಗ ನವಿರಾದ ಪ್ರೀತಿ ಪ್ರೇಮದ ಹಾಡು ಬಿಡುಗಡೆ ಮಾಡಲು ಟಾಕ್ಸಿಕ್ ತಂಡ ಸಜ್ಜಾಗಿದೆ. ಹೀಗಾಗಿ ಇಡೀ ಸಿನಿಮಾದಲ್ಲಿ ಕ್ರೈಂ ತುಂಬಿಕೊಂಡಿದೆ ಎಂದು ಊಹಿಸಿದವರಿಗೆ ಹೊಸ ಟಾನಿಕ್ ನೀಡಿದ್ದಾರೆ.
55
ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ
ಟಾಕ್ಸಿಕ್ ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದೆ. ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಈ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇತ್ತ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಭಾರತದ ಹಲವು ಸ್ಥಳೀಯ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಇದೀಗ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.
ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.