ರಾಮ್ ಚರಣ್ ಮೇಲಿನ ಅಭಿಮಾನ ದೇಶಗಳನ್ನು ದಾಟಿದೆ. ಮೆಗಾ ಪವರ್ ಸ್ಟಾರ್ ನೋಡಲು ವಿದೇಶಿ ಅಭಿಮಾನಿಗಳು ಅವರ ಮನೆಗೆ ಬರ್ತಿದ್ದಾರೆ. ಇತ್ತೀಚೆಗೆ ಜಪಾನ್‌ನಿಂದ ಬಂದ ಅಭಿಮಾನಿಗಳಿಗಾಗಿ ಚರಣ್ ಏನು ಮಾಡಿದ್ರು ಗೊತ್ತಾ?
ಮೆಗಾಪವರ್ ಸ್ಟಾರ್ ರಾಮ್ ಚರಣ್‌ಗೆ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಆರ್‌ಆರ್‌ಆರ್ ನಂತರ ಅವರ ಸಂಖ್ಯೆ ಭಾರೀ ಹೆಚ್ಚಾಗಿದೆ. ಭಾರತೀಯ ಸಿನಿಮಾಗಳು, ಅದರಲ್ಲೂ ತೆಲುಗು ಸಿನಿಮಾಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಮುಖ್ಯವಾಗಿ ಜಪಾನ್‌ನಲ್ಲಿ ರಾಮ್ ಚರಣ್‌ಗೆ ಇರುವ ಕ್ರೇಜ್ ಬೇರೆಯೇ ಲೆವೆಲ್‌ನಲ್ಲಿದೆ. ಆರ್‌ಆರ್‌ಆರ್ ನಂತರ ಚರಣ್ ಸಿನಿಮಾಗಳಿಗಾಗಿ ಅಲ್ಲಿನ ಪ್ರೇಕ್ಷಕರು ಹೆಚ್ಚು ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ಚರಣ್‌ಗಾಗಿ ಜಪಾನ್‌ನಿಂದ ನೇರವಾಗಿ ಭಾರತಕ್ಕೆ ಅಭಿಮಾನಿಗಳು ಬರ್ತಿದ್ದಾರೆ.
24
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಇತ್ತೀಚಿನ ಮಾಹಿತಿ ಪ್ರಕಾರ, ಜಪಾನ್‌ನ ಕೆಲವು ಡೈ ಹಾರ್ಡ್ ಫ್ಯಾನ್ಸ್ ರಾಮ್ ಚರಣ್‌ರನ್ನು ನೋಡಲೆಂದೇ ಭಾರತಕ್ಕೆ ಬಂದಿದ್ದಾರೆ. ಸದ್ಯ 'ಪೆದ್ದಿ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಚರಣ್, ಈ ವಿಷಯ ತಿಳಿದ ತಕ್ಷಣ ಅವರನ್ನು ಭೇಟಿಯಾಗಲು ವಿಶೇಷವಾಗಿ ಆಹ್ವಾನಿಸಿದ್ದಾರೆ. ತನ್ನನ್ನು ನೋಡಲು ಇಷ್ಟು ದೂರ ಪ್ರಯಾಣಿಸಿ ಬಂದ ಅಭಿಮಾನಿಗಳನ್ನು ಚರಣ್ ಬಹಳ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ರಾಮ್ ಚರಣ್ ಅವರೊಂದಿಗೆ ಖುಷಿಯಿಂದ ಮಾತನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಪಾನ್ ಅಭಿಮಾನಿಗಳನ್ನು ಭೇಟಿಯಾಗಿ, ಅವರೊಂದಿಗೆ ಫೋಟೋ ತೆಗೆಸಿಕೊಂಡು, ಪ್ರೀತಿಯಿಂದ ಮಾತನಾಡಿದ್ದನ್ನು ನೋಡಿ ನೆಟ್ಟಿಗರು ಚರಣ್ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
34
ಪೆದ್ದಿ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ..
ರಾಮ್ ಚರಣ್ ಸದ್ಯ 'ಪೆದ್ದಿ' ಸಿನಿಮಾ ಶೂಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಬಾರಿ ಹೇಗಾದರೂ ಹಿಟ್ ಕೊಡಲೇಬೇಕೆಂದು ಹಠ ಹಿಡಿದಿದ್ದಾರೆ. ಬುಚ್ಚಿಬಾಬು ಸನಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಬೃಹತ್ ಪ್ರಾಜೆಕ್ಟ್‌ನ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಚಿತ್ರತಂಡ ಶೀಘ್ರದಲ್ಲೇ ದೆಹಲಿಗೆ ಹೋಗಲಿದೆ. ಅಲ್ಲಿ ಪ್ರಮುಖ ಆ್ಯಕ್ಷನ್ ಮತ್ತು ಭಾವನಾತ್ಮಕ ದೃಶ್ಯಗಳನ್ನು ಚಿತ್ರೀಕರಿಸಲು ತಂಡ ಪ್ಲ್ಯಾನ್ ಮಾಡುತ್ತಿದೆಯಂತೆ.
ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಹಿನ್ನೆಲೆಯಲ್ಲಿ ತಯಾರಾಗುತ್ತಿರುವ 'ಪೆದ್ದಿ' ಸಿನಿಮಾದಲ್ಲಿ ಚರಣ್ ಜೋಡಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಜಗಪತಿ ಬಾಬು, ಬೊಮನ್ ಇರಾನಿ ಮುಂತಾದ ಪ್ರಮುಖ ನಟರೂ ನಟಿಸುತ್ತಿದ್ದಾರೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಗಳು ಹೆಚ್ಚುತ್ತಲೇ ಇವೆ. ರಾಮ್ ಚರಣ್ ಅವರ ಇತ್ತೀಚಿನ ಟ್ರಾನ್ಸ್‌ಫಾರ್ಮೇಶನ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದೆ. ಮುಂದಿನ ವರ್ಷ ಚರಣ್ ಹುಟ್ಟುಹಬ್ಬದಂದು ಈ ಸಿನಿಮಾ ರಿಲೀಸ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.