ಕೊರೋನಾ ಕಾಲದಲ್ಲಿ ಕಷ್ಟದಲ್ಲಿದ್ದವರ ಪಾಲಿನ ದೇವರಾದ ಸೋನು ಸೂದ್ ಆಸ್ತಿ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಿ!

Published : Jul 21, 2025, 06:11 PM IST

ಹಿಂದಿ ಕನ್ನಡ ಸೇರಿ ಬಹು ಬಾಷೆಗಳಲ್ಲಿ ಖಳನಾಯಕ, ಪೋಷಕ ಪಾತ್ರದ ಮೂಲಕ ಖ್ಯಾತಿ ಪಡೆದ ನಟ ಸೋನು ಸೂದ್ ಅವರ ಐಷಾರಾಮಿ ಜೀವನ, ಆಸ್ತಿ ಮೌಲ್ಯದ ವಿವರ ಇಲ್ಲಿದೆ. 

PREV
19

ಕೊರೋನಾ ಸಮಯದಲ್ಲಿ ತಮ್ಮದಲ್ಲದ ಊರಿನಲ್ಲಿ ಸಿಕ್ಕಿಬಿದ್ದಿದ್ದ ಹಲವು ಜನರಿಗೆ ನೆರವಾಗಿ ರೀಲ್ ನಲ್ಲಿ ವಿಲನ್ ಆದರೂ ರಿಯಲ್ ಲೈಫಲ್ಲಿ ಹೀರೋ ಆದವರು ಸೋನು ಸೂದ್ (Sonu Sood). ಈ ಬಹುಭಾಷಾ ನಟನ ನೆಟ್ ವರ್ತ್ ಎಷ್ಟಿದೆ ಗೊತ್ತಾ?

29

ಇತ್ತೀಚಿನ ದಿನಗಳಲ್ಲಿ ಫರಾ ಖಾನ್ (Farah Khan)ಯುಟ್ಯೂಬ್ ನಲ್ಲಿ ತನ್ನ ಅಡುಗೆ ಚಾನೆಲ್ ಮೂಲಕ ಸೆಲೆಬ್ರಿಟಿಗಳ ಮನೆಗಳಿಗೆ ಹೋಗಿ ಅವರೊಂದಿಗೆ ಅಡುಗೆ ಮಾಡುತ್ತಾರೆ ಮತ್ತು ಇತ್ತೀಚೆಗೆ ಅವರು ಸೋನು ಅವರ ಮನೆಗೆ ಭೇಟಿ ನೀಡಿದ್ದು, ಈ ಸಮಯದಲ್ಲಿ ಸೋನು ಸೂದು ಅವರ ವಿಲ್ಲಾ ವೈರಲ್ ಆಗಿತ್ತಿ.

39

ಬಾಲಿವುಡ್‌ನ ಪ್ರಸಿದ್ಧ ನೃತ್ಯ ಸಂಯೋಜಕಿ ಮತ್ತು ನಿರ್ದೇಶಕಿ ಫರಾ ಖಾನ್ ತಮ್ಮ ವ್ಲಾಗ್‌ನಲ್ಲಿ ಮುಂಬೈನ ಅಂಧೇರಿ (ಪಶ್ಚಿಮ) ಪ್ರದೇಶದಲ್ಲಿರುವ ಸೋನು ಸೂದ್ ಅವರ ಐಷಾರಾಮಿ ಮನೆಯ ಒಂದು ನೋಟವನ್ನು ತೋರಿಸಿದ್ದಾರೆ. ಈ ಮನೆಯ ಬೆಲೆ ಸುಮಾರು 20 ಕೋಟೊಈ ವೆಚ್ಚದ್ದಾಗಿದೆ.

49

ಸೋನು ತಮ್ಮ ವಿಲ್ಲಾಗೆ ಗಂಗೋತ್ರಿ ಎಂದು ಹೆಸರಿಟ್ಟಿದ್ದಾರೆ ಮತ್ತು ಅದನ್ನು ತುಂಬಾ ಸುಂದರವಾಗಿ ಅಲಂಕರಿಸಲಾಗಿದೆ. ಹೊರಗಡೆ ನೇಚರ್ ಕೂಡ ಇದೆ. ನೀವು ಫರಾ ಖಾನ್ ಅವರ ಯೂಟ್ಯೂಬ್ ವೀಡಿಯೊದಲ್ಲಿ (Youtube Video) ಮನೆಯ ಐಷಾರಾಮಿತನವನ್ನು ನೋಡಬಹುದು. ಇಲ್ಲಿ ಫೋಟೊಗಳನ್ನು ಅವರ ದುಬಾರಿ ಬಂಗಲೆಯ ಜಲಕ್ ಇದೆ.

59

ವಿಲ್ಲಾ ಒಳಗೆ ನೀವು ಎಲ್ಲಾ ರೀತಿಯ ವಸ್ತುಗಳನ್ನು ಕಾಣಬಹುದು ಮತ್ತು ವಿಶೇಷವಾಗಿ ನಟ ತನ್ನ ಶೂಗಳು ಮತ್ತು ದುಬಾರಿ ಸ್ನೀಕರ್‌ಗಳಿಗೆ ವಿಶೇಷ ಸ್ಥಳವನ್ನು ಮಾಡಿದ್ದಾರೆ. ಅಂದರೆ ಅದಕ್ಕಾಗಿ ಸೆಪೆರೇಟ್ ರೂಮ್ ಮಾಡಿದ್ದು, ತಂದೆಯಂತೆ ಮಕ್ಕಳು ಕೂಡ ಹೈಟ್ ಜಾಸ್ತಿ ಇರೋದ್ರಿಂದ ಎಲ್ಲರಿಗೂ ಈ ಶೂ ಸೈಜ್ ಸೇಮ್ ಎನ್ನುತ್ತಾರೆ ಸೋನು.

69

ತನ್ನ ಮಗನಿಗೆ ಚಿತ್ರಕಲೆ ತುಂಬಾ ಇಷ್ಟ ಮತ್ತು ಮಗ ಮಾಡಿದ ವರ್ಣಚಿತ್ರಗಳನ್ನು ಮನೆಯ ಕೆಲವು ಗೋಡೆಗಳ ಮೇಲೆ ನೇತು ಹಾಕಲಾಗಿದೆ ಎಂದು ಸೋನು ವೀಡಿಯೊದಲ್ಲಿ ಹೇಳಿದ್ದಾರೆ. ಸೋನು ಪುತ್ರನ ಸುಂದರವಾದ ಆರ್ಟ್ ನ್ನು ನೀವು ಮನೆಯಲ್ಲಿ ಕಾಣಬಹುದು.

79

ಸೋನು ಅನೇಕ ಚಿತ್ರಗಳಲ್ಲಿ ನಟನಾಗಿ ಕೆಲಸ ಮಾಡಿದ್ದರೂ, ಖಳನಾಯಕನಾಗಿ ಅವರಿಗೆ ವಿಭಿನ್ನ ಗುರುತಿದೆ . ಅವರ ಖಡಕ್ ಪಾತ್ರಗಳು ಜನರಿಗೆ ತುಂಬಾನೆ ಇಷ್ಟ. ಸೋನು ಸೂದ್ ಅವರು ಒಂದು ಚಿತ್ರಕ್ಕೆ 5-7 ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರೆ.

89

ಸೋನು ಸೂದ್ ಅವರಿಗೆ ಇದು ಮಾತ್ರ ವಿಲ್ಲಾ ಇರೋದು ಅಲ್ಲ. ಮೂಲತಃ ಪಂಜಾಬ್ ನವರಾದ ಸೋನು ಮುಂಬೈನಲ್ಲಿ ತನ್ನದೇ ಆದ ಹೋಟೆಲ್ ಅನ್ನು ಹೊಂದಿದ್ದಾರೆ ಮತ್ತು ವರದಿಯ ಪ್ರಕಾರ, ಸೋನು ಸೂದ್ ಹೈದರಾಬಾದ್‌ನ ಐಷಾರಾಮಿ ಪ್ರದೇಶವಾದ ಬಂಜಾರ ಹಿಲ್ಸ್‌ನಲ್ಲಿ ಒಂದು ಐಷಾರಾಮಿ ಮನೆಯನ್ನು ಸಹ ಹೊಂದಿದ್ದಾರೆ.

99

ಇನ್ನು ನಟನ ನೆಟ್ ವರ್ಟ್ (Net worth)ಕೇಳಿದ್ರೆ ಶಾಕ್ ಆಗ್ತೀರಿ. ದಿ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಈ ನಟನ ಒಟ್ಟು ಸಂಪತ್ತು ಸುಮಾರು 140 ಕೋಟಿ ರೂ. ಸೋನು ದಕ್ಷಿಣ ಮತ್ತು ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶನಕ್ಕೂ ಕೈ ಹಾಕಿದ್ದಾರೆ ಇವರು.

Read more Photos on
click me!

Recommended Stories