ಅಮ್ಮ ಯಾವಾಗಲೂ ಜೊತೆಗೇ ಇರ್ತಾರಲ್ಲ, ಲವ್ವಲ್ಲಿ ಹೇಗೆ ಬೀಳಲಿ: ಶ್ರೀಲೀಲಾ

Published : Jul 21, 2025, 11:56 AM IST

ನನ್ನ ಜೊತೆಗೆ ಯಾವಾಗಲೂ ಅಮ್ಮ ಇರ್ತಾರೆ. ಹೇಗೆ ತಾನೇ ನಾನು ಪ್ರೇಮದಲ್ಲಿ ಬೀಳಲಿ ಎಂದು ನಟಿ ಶ್ರೀಲೀಲಾ ಹೇಳಿದ್ದಾರೆ.

PREV
16

‘ನಾನು ಲವ್ವಲ್ಲಿ ಬಿದ್ದಿದ್ದೀನಿ ಅಂತ ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ನನ್ನ ಜೊತೆಗೆ ಯಾವಾಗಲೂ ಅಮ್ಮ ಇರ್ತಾರೆ. ಹೇಗೆ ತಾನೇ ನಾನು ಪ್ರೇಮದಲ್ಲಿ ಬೀಳಲಿ’ ಎಂದು ನಟಿ ಶ್ರೀಲೀಲಾ ಹೇಳಿದ್ದಾರೆ.

26

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನನಗೆ ಬಗೆಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸಲಾಗುತ್ತಿದೆ’ ಎಂದು ಆಕ್ಷೇಪಿಸಿದ್ದಾರೆ.

36

‘ನನಗೆ ಈಗ 23 ವರ್ಷ ವಯಸ್ಸು. ಇನ್ನು 10 ವರ್ಷಗಳ ಕಾಲ ಮದುವೆ ಯೋಚನೆ ಇಲ್ಲ. ಹೀಗಾಗಿ ಈ ಬಗ್ಗೆ ಸುಮ್ಮನೆ ವದಂತಿ ಹಬ್ಬಿಸಬೇಡಿ’ ಎಂದಿದ್ದಾರೆ.

46

ಈ ಹಿಂದೆ ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌ ಜೊತೆಗೆ ಶ್ರೀಲೀಲಾ ಡೇಟಿಂಗ್‌ ಮಾಡುತ್ತಿರುವ ಬಗ್ಗೆ ರೂಮರ್‌ ಇತ್ತು.

56

4 ಕೋಟಿಗೆ ಏರಿದ ಸಂಭಾವನೆ: ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಇರುವ ಶ್ರೀಲೀಲಾ ಈಗ ಸಂಭಾವನೆ ವಿಚಾರಕ್ಕೆ ಎಲ್ಲರ ಅಚ್ಚರಿಗೆ ಕಾರಣವಾಗಿದ್ದಾರೆ. ಇಲ್ಲಿವರೆಗೂ 1.5 ರಿಂದ 2 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದವರು ಈಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

66

ಸದ್ಯ ಶ್ರೀಲೀಲಾ ಅವರು 4 ಕೋಟಿ ಸಂಭಾವನೆ ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಡಾನ್ಸ್‌ನಿಂದಲೇ ಎಲ್ಲರ ಮನಗೆದ್ದಿರುವ ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ಚಿತ್ರಗಳು ಅಷ್ಟಾಗಿ ಯಶಸ್ಸು ಕಾಣದಿದ್ದರೂ ಸಂಭಾವನೆ ಮಾತ್ರ ದೊಡ್ಡ ಮೊತ್ತಕ್ಕೆ ಏರಿಸಿಕೊಂಡಿರುವ ಬಗ್ಗೆ ಗುಸುಗುಸು ಚರ್ಚೆ ನಡೆದಿದೆ.

Read more Photos on
click me!

Recommended Stories