ಕುಂದ್ರಾಗೆ ಪೋರ್ನ್ ಐಡಿಯಾ ಕೊಟ್ಟಿದ್ದೇ ಈ 'ಬಿಚ್ಚಮ್ಮ' ನಟಿ ಬಿಚ್ಚಿಟ್ಟ ನಗ್ನ ಸತ್ಯ!

First Published | Sep 28, 2021, 12:36 AM IST

ಮುಂಬೈ(ಸೆ. 28)  ಪೋರ್ನ್ ವಿಡಿಯೋ ಚಿತ್ರೀಕರಿಸಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ  ಜು.19ರಂದು ಬಂಧನಕ್ಕೊಳಗಾಗಿ ಎರಡು ತಿಂಗಳ ನಂತರ ಜಾಮೀನಿನ ಮೇಲೆ ಬಿಡಗಡೆಯಾಗಿರುವ ರಾಜ್ ಕುಂದ್ರಾ ಪರವಾಗಿ ಈಗ ನಟಿಯೊಬ್ಬರು ಬ್ಯಾಟ್ ಬೀಸಿದ್ದಾರೆ.

ನಟಿ  ಗೆಹನಾ ವಸಿಷ್ಠ ರಾಜ್ ಕುಂದ್ರಾ ಅವರನ್ನು ಢಿಫೆಂಡ್ ಮಾಡಿಕೊಂಡು ಶೆರ್ಲಿನ್ ಚೋಪ್ರಾ ವಿರುದ್ಧ ಆರೋಪ ಮಾಡಿದ್ದಾರೆ.  ಶೆರ್ಲಿನ್ ರ ಇನ್ನೊಂದು ಲೋಕ ತೆರೆದಿರಿಸಿದ್ದಾರೆ.

ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ  ಸಲ್ಲದ ಆರೋಪ ಮಾಡಿದ್ದಾರೆ. ನ್ಯೂಸ್ ಹೆಡ್ ಲೈನ್ ನಲ್ಲಿ ಬರಬೇಕು ಎಂಬ ಕಾರಣಕ್ಕೆ ಶೆರ್ಲಿನ್ ಇಂಥ ಕೆಲಸ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

Tap to resize

ಈ ವಿಚಾರವನ್ನು ಪರ್ಸನಲ್ ಆಗಿ ತೆಗೆದುಕೊಂಡಿರುವ ಶೆರ್ಲಿನ್ ಶಿಲ್ಪಾ ಶೆಟ್ಟಿ ವಿರುದ್ಧವೂ ಆಧಾರರಹಿತ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಟ್ಟೆ ಬಿಚ್ಚಿ ಹಾಕುವುದರಿಂದಲೇ ಶೆರ್ಲಿನ್ ಸುದ್ದಿ ಮಾಡುತ್ತಾಳೆ. ರಾಜ್ ಕುಂದ್ರಾ ವಿರುದ್ಧ ಮಾತನಾಡಿದರೆ ಅಟೆಂಶನ್ ಸಿಗುತ್ತದೆ ಎಂಬ ಭ್ರಮೆಯಲ್ಲಿ ಇದ್ದಾಳೆ.

ಈ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಅವರಿಗೆ ಧನ್ಯವಾದ ಹೇಳಬೇಕು.. ಶೆರ್ಲಿನ್ ರ ಅಸಂಭದ್ಧ ಆರೋಪಗಳಿಗೆ ಅವರು ಯಾವುದೇ ಉತ್ತರ ನೀಡಲು ಹೋಗದೆ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ನಟಿ ಹೇಳಿದ್ದಾರೆ. 

ಹಲವು ಸಿನಿಮಾಗಳು ಹಾಗೂ ವೆಬ್‌ ಸರಣಿಗಳಲ್ಲಿ ಅಭಿನಯಿಸಿರುವ ನಟಿ ಗೆಹನಾ ವಸಿಷ್ಠ ಅವರನ್ನು ಮುಂಬೈನ ಅಪರಾಧ ವಿಭಾಗದ ಪೊಲೀಸರು ಪೋರ್ನ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ್ದರು. 

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರ ಹಳೆಯ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋರ್ನ್ ವಿಡಿಯೋ ಸಂಬಂಧಿಸಿ ರಾಜ್ ಕುಂದ್ರಾನ ಮೇಲೆ ಆರೋಪ ಮಾಡಿದ್ದ ನಟಿ ಶೆರ್ಲಿನ್ ಚೋಪ್ರಾ ಹಳೆಯ ಫೋಟೋ ಶೇರ್ ಮಾಡಿಕೊಂಡಿದ್ದರು.

ನಟಿ ಶೆರ್ಲಿನ್ ಚೋಪ್ರಾ ರಾಜ್ ಕುಂದ್ರಾ ತನ್ನ ಮನೆಗೆ ಬಂದು ಬಲವಂತವಾಗಿ ಕಿಸ್ ಮಾಡಿದ್ದಾಗಿ ಹೇಳಿದ್ದರು. ಯಾವುದೇ ಮಾಹಿತಿ ಇಲ್ಲದೇ ಏಕಾಏಕಿ ಮನೆಗೆ ನುಗ್ಗಿದ ರಾಜ್ ನನಗೆ ಚುಂಬಿಸಲಾರಂಭಿಸಿದ್ದರು ಎಂದು ಆರೋಪಿಸಿದ್ದರು.

ಶೆರ್ಲಿನ್ ಗೆ ಹೊಸ ಬಿಸಿಸನ್ ಐಡಿಯಾ ಕೊಟ್ಟವರು ರಾಜ್ ಕುಂದ್ರಾ. ಶೆರ್ಲಿನ್ ಇಂದು ಈ ಸ್ಥಿತಿಯಲ್ಲಿರಲು ಅವರೇ ಕಾರಣ.. ಶೆರ್ಲಿನ್ ಅವರಿಗೆ ಋಣಿಯಾಗಿರಬೇಕು ಎಂದಿದ್ದಾರೆ.

ಬೋಲ್ಡ್ ಕಂಟೆಂಟ್ ಸಿದ್ಧ ಮಾಡಲು ರಾಜ್ ಕುಂದ್ರಾ ಅವರನ್ನು ಎಳೆದು ತಂದಿದ್ದೇ ಶೆರ್ಲಿನ್. 2012 ರಲ್ಲಿಯೇ ಶರ್ಲಿನ್ ಪೋರ್ನ್ ನಲ್ಲಿ ತೊಡಗಿಕೊಂಡಿದ್ದರು. ಎರಡೂ ವರೆ ವರ್ಷದ ಹಿಂದೆ ರಾಜ್ ಬೋಲ್ಡ್ ಕಂಟೆಟ್ ಸಿದ್ಧ ಮಾಡಲು ಮುಂದಾಗಿದ್ದ ಆರೋಪ ಇದೆ.

Latest Videos

click me!