ನಟಿ ಕಾಣಿಸಿಕೊಂಡಿದ್ದ ಡ್ರೆಸ್ ಪರಿಣಾಮ ಆಕೆ ಟ್ರೋಲ್(Troll) ಗೆ ಒಳಗಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳ ಸರಮಾಲೆಯೇ ಹರಿದು ಬಂದಿತ್ತು.
ಮೊದಲು ಟ್ರೋಲ್ ಬಗ್ಗೆ ನಟಿ ಯಾವುದೆ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ. ಅಂತಿಮವಾಗಿ ಮೌನ ಮುರಿದು ಮಾತನಾಡಿದ್ದಾರೆ. ಡ್ರೆಸ್ ಯಾವುದು ಧರಿಸಬೇಕು ಎಂಬುದನ್ನು ಬೇರೆಯವರಿಂದ ಕಲಿತುಕೊಳ್ಳಬೇಕಾಗಿಲ್ಲ ಎಂದಿದ್ದಾರೆ.
ಅಂಗ್ರೇಜಿ ಮೀಡಿಯಂ ನಲ್ಲಿ ಕಾಣಿಸಿಕೊಂಡಿದ್ದ ನಟಿ ಮಾತನಾಡಿದ್ದಾರೆ. ಇಂಥ ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಾಕಿದ ನಂತರ ಸಂಜೆ ಮತ್ತು ಮುಂಜಾನೆ ಎಲ್ಲ ಮೆಸೇಜ್ ಗಳನ್ನು ನೋಡುತ್ತೇನೆ. ಆದರೆ ಟ್ರೋಲ್ ನವರು ಹೇಗೆ ವರ್ತನೆ ಮಾಡಿದ್ದಾರೆ ಎನ್ನುವ ಬಗ್ಗೆ ಯೋಚನೆ ಮಾಡಲು ಹೋಗುವುದಿಲ್ಲ ಎಂದಿದ್ದಾರೆ.
ನಾನು ಏನು ಧರಿಸುತ್ತೇನೋ ಅದನ್ನು ಪ್ರೀತಿಯಿಂದಲೇ ಧರಿಸುತ್ತೇನೆ. ಟ್ರೋಲ್ ಮಾಡುವುದು ಅವರ ಅಭಿಪ್ರಾಯ.. ಅವರ ಮನಸ್ಥಿತಿ ಇದರಿಂದ ನನಗೆ ಆಗಬೇಕಾದ್ದು ಏನು ಇಲ್ಲ ಎಂದಿದ್ದಾರೆ.
ಇದು ನನ್ನ ದೇಹ..ನನ್ನ ಮನಸಿಗೆ ಬಂದ ಬಟ್ಟೆ ಧರಿಸುತ್ತೇನೆ. ನಾನು ಯಾವ ಡ್ರೆಸ್ ಧರಿಸಬೇಕು ಎಂಬುದನ್ನು ಬೇರೆಯವರು ಹೇಳಿ ಕೊಡಬೇಕಾಗಿಲ್ಲ. ನಾನು ಸುಂದರವಾಗಿ ಕಾಣುತ್ತೇನೋ..ಬಿಡುತ್ತೇನೋ ಅದು ನನಗೆ ಬಿಟ್ಟಿದ್ದು ಎಂದಿದ್ದಾರೆ.
Radhika Madan
ಸಿನಿಮಾ ಮಾತ್ರವಲ್ಲದೇ ವೆಬ್ ಸೀರಿಸ್ ಗಳಲ್ಲಿಯೂ ನಟಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ಕಿ ಕೌಶಲ್ ಸಹೋದರ ಸನ್ನಿ ಕೌಶಲ್ ಜತೆ ಸಿನಿಮಾ ಪ್ರಾಜೆಕ್ಟ್ ಒಂದರಲ್ಲಿ ನಟಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Radhika Madan
ಸನ್ನಿ ಕೌಶಲ್, ರಾಧಿಕಾ ಮದನ್ ಆಗಾಗ ಕ್ಯಾಮರಾ ಕಣ್ಣಿಗೆ ಬೀಳುತ್ತಾರೆ. ರಾಧಿಕಾ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2014ರಲ್ಲಿ 'ಮೇರಿ ಆಶಿಕಿ ತುಮ್ ಸೆ ಹಿ' ಮೂಲಕ ಅವರು ಕಿರುತೆರೆ ಪ್ರವೇಶ ಮಾಡಿದ್ದರು. 'ಝಲಕ್ ದಿಖ್ಲಾ ಜಾ' ಶೋನಲ್ಲಿ ಅವರು ಭಾಗವಹಿಸಿದ್ದರು.
Radhika Madan
ವಿಶಾಲ್ ಭಾರದ್ವಾಜ್ ಅವರ 'ಪಟಾಖಾ' ಸಿನಿಮಾ ಮೂಲಕ ಅವರು ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು. 'ಅಂಗ್ರೇಜಿ ಮೀಡಿಯಂ' ಸಿನಿಮಾದಲ್ಲಿ ಇರ್ಫಾನ್ ಖಾನ್ ಜೊತೆ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡರು.
'ಶಿದ್ದತ್' ಸಿನಿಮಾ ಪ್ರಚಾರ ಕಾರ್ಯದಲ್ಲಿ ರಾಧಿಕಾ ಮದನ್ ಅವರು ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 1ರಂದು ಓಟಿಟಿಯಲ್ಲಿ ಸನ್ನಿ ಕೌಶಲ್, ರಾಧಿಕಾ ಮದನ್ ಅಭಿನಯದ 'ಸಿದ್ದತ್' ರಿಲೀಸ್ ಆಗಲಿದೆ.
'ರೇ','ಫೀಲ್ಸ್ ಲೈಕ್ ಇಶ್ಕ್' ವೆಬ್ ಸಿರೀಸ್‌ನಲ್ಲಿಯೂ ರಾಧಿಕಾ ಮದನ್ ನಟಿಸುತ್ತಿದ್ದಾರೆ. ಬಾಲಿವುಡ್ ಮತ್ತು ವೆಬ್ ಸೀರಿಸ್ ಅಂಗಣದಲ್ಲಿ ರಾಧಿಕಾ ಸದ್ದು ಮಾಡುತ್ತಿದ್ದಾರೆ.
ಬಾಲಿವುಡ್ ನಟಿಯರ ಇತ್ತೀಚಿನ ಡ್ರೆಸ್ ಸೋಶಿಯಲ್ ಮೀಡಿಯಾದಲ್ಲಿ ಕ್ಷಣಮಾತ್ರಕ್ಕೆ ವೈರಲ್ ಆಗುತ್ತಲಿವೆ. ಕಂಗನಾ ರಣಾವತ್, ಜಾಹ್ನವಿ ಕಪೂರ್ ಸಹ ಟ್ರೋಲ್ ಗೆ ಗುರಿಯಾಗಿದ್ದರು.
ಡ್ಯಾನ್ಸರ್, ನಟಿ ನೋರಾ ಫತೇಹಿ ಧರಿಸಿದ್ದ ಡ್ರೆಸ್ ಸಹ ದೊಡ್ಡ ಮಟ್ಟದಲ್ಲಿ ಟ್ರೋಲ್ ಗೆ ಆಹಾರವಾಗಿತ್ತು. ನೋರಾ ಫತೇಹಿ ಫ್ಯಾಷನ್ ಇವೆಂಟ್ ಒಂದರಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.