ಕತ್ರಿನಾ ಕೈಫ್:
ಕತ್ರಿನಾ ಕೈಫ್ ತಮ್ಮದೇ ಮೇಕಪ್ ಬ್ರಾಂಡ್ ಕೇ ಬ್ಯೂಟಿಯನ್ನು 2019ರಲ್ಲಿ ಪ್ರಾರಂಭಿಸಿದರು. ಸ್ವಲ್ಪ ಸಮಯದೊಳಗೆ, ಈ ಬ್ರ್ಯಾಂಡ್ ಜನಸಾಮಾನ್ಯರಲ್ಲಿ ಜನಪ್ರಿಯವಾಗಿ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ 'ಇಟ್ಸ್ 'ಕೇ ಟು ಬಿ ಯು' ಎಂಬ ಹೆಸರಿನಿಂದ ಬ್ರ್ಯಾಂಡ್ ಮಹಿಳೆಯರೊಂದಿಗೆ ಸಂಪರ್ಕ ಹೊಂದಿದೆ.
ಪ್ರಿಯಾಂಕಾ ಚೋಪ್ರಾ:
ಪ್ರಿಯಾಂಕಾ ಚೋಪ್ರಾ ಅವರು ನಟಿ ನಿರ್ಮಾಪಕಿ, ರೆಸ್ಟೋರೆಂಟ್ ಮಾಲೀಕರು ಮತ್ತು ಅದರ ಜೊತೆಗೆ ಅವರು ತಮ್ಮದೇ ಆದ ಹೇರ್‌ಕೇರ್ ಬ್ರ್ಯಾಂಡ್ ಪ್ರಾರಂಭಿಸಿದ್ದಾರೆ, ಇದು ಪರಿಸರ ಪ್ರಜ್ಞೆ ಮತ್ತು ಸ್ವಚ್ಛ ಸೌಂದರ್ಯವನ್ನು ಉತ್ತೇಜಿಸುತ್ತದೆ. ಪ್ರಸ್ತುತ ಈ ಬ್ರ್ಯಾಂಡ್ ಹೇರ್‌ಕೇರ್ ಉತ್ಪನ್ನಗಳ ಮೇಲೆ ಕೇಂದ್ರೀಕರಿಸಿದೆ. ಇದು ಸಸ್ಯಾಹಾರಿ ಮಾತ್ರವಲ್ಲದೆ 100% ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ನಲ್ಲಿ ಪ್ಯಾಕ್ ಮಾಡಲಾಗಿದೆ.
ಸನ್ನಿ ಲಿಯೋನ್:
ಸೌಂದರ್ಯ ಉದ್ಯಮೆಗೆ ಕಾಲಿಟ್ಟ ಮೊದಲ ಸೆಲೆಬ್ರಿಟಿಗಳಲ್ಲಿ ಸನ್ನಿ ಲಿಯೋನ್ ಮೊದಲಿಗರು. ಅವರು 2017ರಲ್ಲಿಯೇ ಸುಗಂಧ ದ್ರವ್ಯಗಳನ್ನು ಪ್ರಾರಂಭಿಸಿದರು ಮತ್ತು 2018ರಲ್ಲಿ ಸ್ಟಾರ್ಟ್‌ಸ್ಟ್ರಕ್ ಪ್ರಾರಂಭಿಸಿ ಅನ್ನು ಕೈಗೆಟುಕುವ ದರದಲ್ಲಿ ಮೇಕ್ಅಪ್ ಅನ್ನು ಪರಿಚಯಿಸಿದರು. ಇವರ ಸಂಪೂರ್ಣ ಶ್ರೇಣಿಯು ಸಸ್ಯಾಹಾರಿ ಮತ್ತು ವಿಶೇಷವಾಗಿ ಭಾರತೀಯ ಚರ್ಮ ಮತ್ತು ಮೈಬಣ್ಣಕ್ಕೆ ಸರಿ ಹೋಗುವ ಬಣ್ಣಗಳು ಮತ್ತು ಉತ್ಪನ್ನಗಳಿಂದ ತಯಾರಿಸಲ್ಪಟ್ಟಿದೆ.
ದೀಪಿಕಾ ಪಡುಕೋಣೆ:
ದೀಪಿಕಾ ಪಡುಕೋಣೆಇತ್ತೀಚೆಗೆ ತಮ್ಮ ಸೌಂದರ್ಯ ಬ್ರ್ಯಾಂಡ್ 82 °E ಅನ್ನು ಪ್ರಾರಂಭಿಸಿದರು, ಬ್ರ್ಯಾಂಡ್‌ನಿಂದ ಮೊದಲು ಐಷಾರಾಮಿ ತ್ವಚೆ ಉತ್ಪನ್ನಗಳನ್ನು ಪರಿಚಯಿಸಿದರು. ಇಲ್ಲಿಯವರೆಗೆ, ಬ್ರ್ಯಾಂಡ್ ಆಯಿಲ್ ಬೇಸ್ಡ್ ಸನ್‌ಸ್ಕ್ರೀನ್ ಮತ್ತು ಮುಖದ ಮಾಯಿಶ್ಚರೈಸರ್ ಅನ್ನು ಮಾರಾಟ ಮಾಡುತ್ತದೆ ಮತ್ತು ಉತ್ಪನ್ನಗಳು ಬ್ರ್ಯಾಂಡ್‌ನ ಸ್ವಂತ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ.
ಸೋನಾಕ್ಷಿ ಸಿನ್ಹಾ:
ಸೋನಾಕ್ಷಿ ಸಿನ್ಹಾ ತನ್ನ ಪ್ರೆಸ್-ಆನ್ ನೈಲ್ಸ್, SoEzi ಎಂಬ ಬ್ಯೂಟಿ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದರು. ಬ್ರ್ಯಾಂಡ್ ಪ್ರೆಸ್-ಆನ್ ಉಗುರುಗಳಿಗೆ ಹಚ್ಚಲು ಸುಲಭವಾದ ವ್ಯಾಪಕ ಶ್ರೇಣಿಯನ್ನು ಹೊಂದಿದೆ, ಅದು ನಿಮ್ಮ ಸಮಯವನ್ನು ಉಳಿಸುವುದಲ್ಲದೆ, ಕೈಗೆಟುಕುವ ಬೆಲೆಯಲ್ಲಿ ತುಂಬಾ ಆಯ್ಕೆಗಳನ್ನು ನೀಡುತ್ತದೆ.
ಲಿಸಾ ಹೇಡನ್:
ಲಿಸಾ ಹೇಡನ್ 2013 ರಲ್ಲಿ ನೇಕೆಡ್ ಎಂಬ ತ್ವಚೆ ಉತ್ಪನ್ನಗಳನ್ನು ಪ್ರಾರಂಭಿಸಿದರು. ಉತ್ಪನ್ನಗಳು ಎಲ್ಲಾ ಕರಕುಶಲ, ಸಾವಯವ ಮತ್ತು ರಾಸಾಯನಿಕ ಸಂರಕ್ಷಕ-ಮುಕ್ತವಾಗಿವೆ.
ಮಸಾಬ ಗುಪ್ತಾ:
ಫ್ಯಾಶನ್ ಡಿಸೈನರ್ ಆಗಿರುವ ನಟಿ, ಮಸಾಬಾ ಗುಪ್ತಾ 2019 ರಲ್ಲಿ ತನ್ನದೇ ಆದ ಸೌಂದರ್ಯವರ್ಧಕ ಸರಣಿ ಪ್ರಾರಂಭಿಸಲು Nykaaದ ಜೊತೆ ಕೈಜೋಡಿಸಿದರು. ಅವರ ಉತ್ಪನ್ನಗಳು ಬಳಸಲು ಉತ್ತಮವಾಗಿರುವುದರ ಜೊತೆಗೆ ಅತ್ಯಂತ ಅದ್ಭುತವಾದ ಪ್ಯಾಕೇಜಿಂಗ್ ಅನ್ನು ಸಹ ಹೊಂದಿವೆ. ಇದು. ಮಸಾಬಾ ಅವರ ಲಿಪ್‌ಸ್ಟಿಕ್‌ಗಳು ಜನಸಾಮಾನ್ಯರಲ್ಲಿ ದೊಡ್ಡ ಹಿಟ್ ಆಗಿ ಹೊರಹೊಮ್ಮಿದವು, ಏಕೆಂದರೆ ಶೆಡ್‌ಗಳು ಭಾರತೀಯ ಚರ್ಮದ ಟೋನ್‌ಗಳಿಗೆ ಪರ್ಫೇಕ್ಟ್ ಆಗಿ ಮ್ಯಾಚ್ ಆಗುವಂತಿದೆ.