ಐಶ್ವರ್ಯಾ ರೈ ಫ್ಯಾನ್ಸ್‌ಗೆ ಬಿಗ್ ಟ್ರೀಟ್: ಅತಿ ಲೋಕ ಸುಂದರಿಯ ಫೋಟೋಸ್

First Published Aug 25, 2020, 11:01 AM IST

ಐಶ್ವರ್ಯಾ ರೈ ಬಚ್ಚನ್ ವಿಶ್ವದ ಅತ್ಯಂತ ಸುಂದರಿ ಯುವತಿ ಎಂದು ಗುರುತಿಸಲ್ಪಟ್ಟಾಗ ಐಶ್ ವಯಸ್ಸು 21. 1994ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಐಶ್ವರ್ಯಾ ರೈ ಸುಂದರವಾರ ಕಿರೀಟ ಮುಡಿಗೇರಿಸಿಕೊಂಡಿದ್ದರು. ಮೂಲತಃ ಮಂಗಳೂರಿನವರಾದ ಐಶ್ವರ್ಯಾ ರೈ ಅವರ ಬಲು ಅಪರೂಪದ ಫೋಟೋಸ್ ಇಲ್ಲಿದೆ ನೋಡಿ.

ಐಶ್ವರ್ಯಾ ರೈ ಭಾರತೀಯ ಚಿತ್ರರಂಗದಲ್ಲಿ ಎಲ್ಲರೂ ತಿಳಿದಿರುವ ಫೇಮಸ್ ನಟಿ. 21ನೇ ವಯಸ್ಸಿನಲ್ಲಿ 1994ರಲ್ಲಿ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.
undefined
ವಾವ್‌ ಎನಿಸುವಂತಹ ಅತ್ಯಂತ ಅಪರೂಪದ ಫೋಟೋಸ್ ಇಲ್ಲಿವೆ. ಮಾಡೆಲಿಂಗ್ ಮಾಡುತ್ತಿದ್ದ ಸಂದರ್ಭಐಶ್ವರ್ಯಾ ರೈ ತೆಗೆಸಿದಂತಹ ಸುಂದರ ಫೋಟೋಗಳಿವು.
undefined
ತಾನು ಕಲಿಯುತ್ತಿದ್ದ ಕಾಲೇಜಿನಲ್ಲಿಯೇ ಅತ್ಯಂತ ಸುಂದರಿಯಾಗಿದ್ದರು ಐಶ್ವರ್ಯಾ ರೈ. 1994ರಲ್ಲಿ ವಿಶ್ವ ಸುಂದರಿ ಪಟ್ಟ ಸಿಗುವ ಮೂಲಕ ಐಶ್ವರ್ಯಾ ಅದ್ಭುತ ಸುಂದರಿ ಅನ್ನೋದನ್ನು ಜಗತ್ತೇ ಒಪ್ಪಿಕೊಂಡಿತು.
undefined
ಐಶ್ವರ್ಯಾಗೆ ಪಾಠ ಮಾಡುತ್ತಿದ್ದ ಫಿಸಿಕ್ಸ್ ಪ್ರಫೆಸರ್ ಒಬ್ಬರು ಕಾಲೇಜು ಮ್ಯಾಗಝೀನ್‌ಗಾಗಿ ಒಂದು ಫೋಟೋ ಶೂಟ್ ಮಾಡುವಂತೆ ಐಶ್‌ಗೆ ಸಲಹೆ ಕೊಟ್ಟಿದ್ದರು.
undefined
ಆದರೆ ಐಶ್ವರ್ಯಾಗೆ ಒಬ್ಬ ಯಶಸ್ವೀ ಆರ್ಕಿಟೆಕ್ಟ್ ಆಗಬೇಕೆಂಬುದು ಕನಸಾಗಿತ್ತು.
undefined
ಕಾಲೇಜು ಮ್ಯಾಗಝೀನ್ ಫೋಟೋ ಶೂಟ್‌ನಿಂದ ಐಶ್ವರ್ಯಾ ಬದುಕಿನ ಗತಿಯೇ ಬದಲಾಯಿತು.
undefined
ಆರ್ಕಿಟೆಕ್ಟ್ ಆಗಲು ಬಯಸಿದ ಐಶ್‌ಗೆ ಮಾಡೆಲಿಂಗ್ ಎಸೈನ್‌ಮೆಂಟ್‌ಗಳು ಬರಲಾರಂಭಿಸಿತು. ಅಲ್ಲಿಂದ ಆಕೆ ತಮ್ಮ ಕ್ಷೇತ್ರವನ್ನೇ ಬದಲಾಯಿಸಿಕೊಂಡರು.
undefined
ಫಿಲ್ಮ್ ಫೇರ್ ಅವಾರ್ಡ್‌ ಸೇರಿದಂತೆ 2009ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಪಡೆದಿದ್ದಾರೆ.
undefined
2012ರಲ್ಲಿ ಫ್ರಾನ್ಸ್ ಸರ್ಕಾರ ನೀಡುವ Ordre des Arts et des Letters ಅವಾರ್ಡ್ ಕೂಡಾ ಪಡೆದಿದ್ದಾರೆ.
undefined
ಕಾಲೇಜು ಮ್ಯಾಗಝೀನ್‌ನಿಂದ ತೊಡಗಿ ಸಣ್ಣಪುಟ್ಟ ಕಮರ್ಷಿಯಲ್ ಜಾಹೀರಾತು ಮಾಡುತ್ತಿದ್ದ ಐಶ್ವರ್ಯಾ ನಂತರ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ್ದರು.
undefined
ಐಶ್ವರ್ಯಾ ರೈ ಫಿಲ್ಮ್ ಜರ್ನಿ ಆರಂಭವಾಗಿದ್ದು ಸೌತ್ ಸಿನಿಮಾದಿಂದ. 1997ರಲ್ಲಿ ಮಣಿ ರತ್ನಂ ನಿರ್ದೇಶನದ ಇರುವರ್ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟರು ಐಶ್.
undefined
ಅದೇ ವರ್ಷ ಔರ್ ಫ್ಯಾರ್ ಹೋಗಯಾ - ಐಶ್ವರ್ಯಾ ರೈಯ ಮೊದಲ ಹಿಂದಿ ಸಿನಿಮಾ ಅದೇ ವರ್ಷ ಬಿಡುಗಡೆಯಾಯಿತು.
undefined
1998ರಲ್ಲಿ ಆಗಿನ ಭಾರತದ ಬಿಗ್ ಬಜೆಟ್ ಸಿನಿಮಾ ತಮಿಳಿನ ಜೀನ್ಸ್ ಅವರಿಗೆ ನಟಿಯಾಗಿ ಮೊದಲ ಗೆಲುವು ತಂದುಕೊಟ್ಟ ಸಿನಿಮಾ.
undefined
1999ರ ಹಮ್‌ ದಿಲ್ ದೇ ಚುಕೇ ಸನಮ್ ಸಿನಿಮಾ ಹಾಗೂ 2002ರಲ್ಲಿದೇವದಾಸ್ ಮೂಲಕ ಬೆಸ್ಟ್ ಆಕ್ಟ್ರೆಸ್ ಫಿಲ್ಮ್ ಫೇರ್ ಅವಾರ್ಡ್ ಪಡೆದರು.
undefined
ತಮಿಳು ಸಿನಿಮಾ ಕಂಡುಕೊಂಡೇನ್ ಕಂಡು ಕೊಂಡೇನ್(2000), ಬೆಂಗಾಲಿ ಸಿನಿಮಾ ಚೋಕರ್ ಬಲಿ(2003), ರೈನ್ ಕೋಟ್(2004) ಐಶ್ವರ್ಯಾ ನಟಿಸಿದ ಪ್ರಮುಖ ಸಿನಿಮಾಗಳು. ಸಿನಿಮಾಗಳ ಲಿಸ್ಟ್ ಹೀಗೆ ಮುಂದುವರಿಯುತ್ತಿದೆ.
undefined
ಇನ್ನು ಧೂಮ್ 2(2006), ಗುರು(2007), ಜೋಧಾ ಅಕ್ಬರ್ (2008), ಎಂದಿರನ್(2010), ಏ ದಿಲ್ ಹೇ ಮುಶ್‌ಕಿಲ್(2016)ನಲ್ಲಿ ಐಶ್ವರ್ಯಾ ಪಾತ್ರ ಮರೆಯಲಾಗದು.
undefined
2007ರಲ್ಲಿ ಐಶ್ವರ್ಯಾ ಅಮಿತಾಭ್ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.
undefined
ಹಲವಾರು ಚಾರಿಟಿ ಸಂಸ್ಥೆಗಳ ಹಾಗೂ ಅಭಿಯಾನಗಳ ಬ್ರಾಂಡ್ ಅಂಬಾಸಿಡರ್ ಆಗಿ ಐಶ್ವರ್ಯಾ ಕೆಲಸ ಮಾಡುತ್ತಿದ್ದಾರೆ,
undefined
ಏಡ್ಸ್ ಕುರಿತ ವಿಶ್ವ ಸಂಸ್ಥೆ ಜಂಟಿ ಕಾರ್ಯಕ್ರಮದ ಗುಡ್‌ವಿಲ್ ರಾಯಭಾರಿಯೂ ಹೌದು.
undefined
2003ರ ಕೆನ್ನಾಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ಜ್ಯೂರಿ ಮೆಂಬರ್ ಆಗಿ ಭಾಗವಹಿಸಿದ ಮೊದಲ ಭಾರತೀಯ ನಟಿ ಐಶ್ವರ್ಯಾ.
undefined
2003ರ ಕೆನ್ನಾಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ಜ್ಯೂರಿ ಮೆಂಬರ್ ಆಗಿ ಭಾಗವಹಿಸಿದ ಮೊದಲ ಭಾರತೀಯ ನಟಿ ಐಶ್ವರ್ಯಾ.
undefined
ಐಶ್ವರ್ಯಾ ಕರ್ನಾಟಕದ ಮಂಗಳೂರಿನ ಬಂಟ್ ಕುಟುಂಬದಲ್ಲಿ 1973 ನವೆಂಬರ್ 1ರಂದು ಜನಿಸಿದ್ದರು. ಐಶ್ವರ್ಯಾ ರೈ ತಂದೆ ಕಷ್ಣ ರಾಜ್ ಆರ್ಮಿ ಬಯಾಲಜಿಸ್ಟ್ ಆಗಿದ್ದರು.ಐಶ್ವರ್ಯಾ ಹರೆಯದಲ್ಲಿದ್ದಾಗ 5 ವರ್ಷ ನೃತ್ಯ ಮತ್ತು ಸಂಗೀತಾಭ್ಯಾಸವನ್ನು ಮಾಡಿದ್ದರು.
undefined
ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬ ಹಂಬಲ ಐಶ್‌ಗಿತ್ತು. ನಂತರ ಆರ್ಕಿಟೆಕ್ಟ್ ಆಗಬೇಕೆಂದು ಬಯಸಿದರು. ಆದರೆ ಆಕೆ ಮಿಂಚಿದ್ದು ಸಿನಿಮಾ ರಂಗದಲ್ಲಿ.
undefined
click me!