ಅಮಿತಾಬ್ ಜೊತೆ ಸಂಬಂಧ: ಮೌನ ಮುರಿದ ಬಾಲಿವುಡ್ ಎವರ್ ಗ್ರೀನ್ ನಟಿ ರೇಖಾ !

First Published | Aug 24, 2020, 4:25 PM IST

ಅಮಿತಾಬ್ ಬಚ್ಚನ್, ರೇಖಾ ಮತ್ತು ಜಯ ಬಚ್ಚನ್‌ರ ಲವ್ ಟ್ರಯಾಂಗಲ್ ಪ್ರಮುಖ ಸುದ್ದಿಗಳಲ್ಲೊಂದು. ರೇಖಾಳೊಂದಿಗೆ ಸಂಬಂಧ ಜಯಾ ಅಮಿತಾಬ್ ಮದುವೆಯ ನಂತರ ಶುರುವಾಗಿದ್ದು ಎನ್ನುತ್ತಾರೆ. 1973 ರಲ್ಲಿ ಜಯಾರನ್ನು ಮದುವೆಯಾದ ಕೆಲವು ವರ್ಷಗಳ ನಂತರ, ಅವರ ಸಂಬಂಧದ ಸುದ್ದಿ ಚರ್ಚೆಗೆ ಮುನ್ನೆಲೆಗೆ ಬರಲಾರಂಭಿಸಿತು. ಆದಾಗ್ಯೂ ಬಾಲಿವುಡ್‌ನ ಫೇಮಸ್‌ ಸ್ಟಾರ್‌ಗಳಲ್ಲಿ ರೇಖಾ ಒಬ್ಬರು. ಅವರ ಪ್ರೇಮಕಥೆ ಅಪೂರ್ಣ. ವಾಸ್ತವವಾಗಿ, ಬಿಗ್ ಬಿ ಈ ರಿಲೆಷನ್‌ಶಿಪ್‌ ಅನ್ನು ಸದಾ ನಿರಾಕರಿಸಿದ್ದಾರೆ. ಆದರೆ, ಈ ಇಬ್ಬರ ನಟರ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಲೇ ಇರುತ್ತದೆ. ಅಲ್ಲದೇ ಸದಾ ಕುತೂಹಲ ಕೆರಳಿಸುವಂಥ ಸಂಬಂಧ ಈ ಜೋಡಿಯದ್ದು. ಈ ಬಗ್ಗೆ ರೇಖಾ ಹೇಳಿದ್ದಿಷ್ಟು.... 

ಅಮಿತಾಬ್ ಬಚ್ಚನ್, ರೇಖಾ ಮತ್ತು ಜಯಾ ಬಚ್ಚನ್‌ರಲವ್ ತ್ರಿಕೋನ ಪ್ರೇಮಕಥೆ ಬಾಲಿವುಡ್‌ನ ಮುಖ್ಯ ಸುದ್ದಿಗಳಲ್ಲೊಂದಾಗಿ ಸದಾ ಚರ್ಚೆಯಲ್ಲಿರುತ್ತದೆ.
ಆದರೆ ಬಿಗ್‌ ಬಿ ಎಂದಿಗೂ ಈ ಸಂಬಂಧವನ್ನು ನಿರಾಕರಿಸುತ್ತಲೇ ಬಂದಿದ್ದಾರೆ.
Tap to resize

1984ರ ನವೆಂಬರ್‌ನಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ರೇಖಾ ಅಮಿತಾಭ್ ಈ ಸಂಬಂಧವನ್ನು ನಿರಾಕರಿಸಿ ಬಹಿರಂಗವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ, ಅಮಿತಾಭ್ ಹೀಗೆ ಮಾಡಬಾರದಿತ್ತು ಎಂದೂ ರೇಖಾ ಹೇಳಿದ್ದಾರೆ.
'ತನ್ನ ಇಮೇಜ್‌ ಉಳಿಸಿಕೊಳ್ಳಲು, ತಮ್ಮ ಕುಟುಂಬ ಮತ್ತು ಮಕ್ಕಳನ್ನು ರಕ್ಷಿಸಲು ಹೀಗೆ ಮಾಡಿದ್ದಾರೆ. ಆದರೆ ಈ ಸಂಬಂಧ ತುಂಬಾ ಸುಂದರವಾಗಿತ್ತೆಂದು ಭಾವಿಸುತ್ತೇನೆ. ಜನರು ಈ ಬಗ್ಗೆ ಏನು ಯೋಚಿಸುತ್ತಾರೆಂಬುದರ ಬಗ್ಗೆನಾನು ಹೆದರುವುದಿಲ್ಲ' ಎಂದಿದ್ದರು ರೇಖಾ.
'ಅವರ ಮೇಲೆ ನನ್ನ ಪ್ರೀತಿ ಅಥವಾ ನನ್ನ ಬಗ್ಗೆ ಅವರ ಪ್ರೀತಿ ಹೇಗಿದೆ ಎಂಬುವುದು ಜನರಿಗೆ ತಿಳಿಯಬೇಕು.ನಾನು ಅವರನ್ನು ಪ್ರೀತಿಸುತ್ತೇನೆ, ಅವರು ನನ್ನನ್ನು ಪ್ರೀತಿಸುತ್ತಾರೆ. ಕೇವಲ, ಇತರರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ಮುಖ್ಯವಲ್ಲ' ಎಂದು ನಟಿ ರೇಖಾ ಹೇಳಿಕೆ ಕೊಟ್ಟಿದ್ದರು.
'ಅವರು ನನಗೆ ವೈಯಕ್ತಿಕವಾಗಿ ಈ ರೀತಿ ಪ್ರತಿಕ್ರಿಯಿಸುತ್ತಿದ್ದರೆ, ನಾನು ಖಂಡಿತವಾಗಿಯೂ ತುಂಬಾ ನಿರಾಶೆಯಾಗುತ್ತಿದ್ದೆ. ಆದರೆ ಅವರು ಆ ರೀತಿ ಎಂದಿಗೂ ಮಾಡಿಲ್ಲ. ಹಾಗಾಗಿ ಅವರು ಜನರ ಮುಂದೆ ಏನು ಹೇಳುತ್ತಾರೆಂಬುವುದು ಮುಖ್ಯವಲ್ಲ,' ಎಂದು ರೇಖಾ ಸಂದರ್ಶನವೊಂದರಲ್ಲಿ ಹೇಳಿದ್ದರು.
'ಪಾಪ ರೇಖಾ ಅವರ ಮೇಲೆ ಹುಚ್ಚಿಯಾಗಿದ್ದಾಳೆ ಎಂದು ಜನರು ಹೇಳುತ್ತಾರೆಂದು ನಂಗೆ ಗೊತ್ತು. ಬಹುಶಃ ನಾನು ಆ ದಯೆಗೆ ಅರ್ಹಳಾನಾಗಿರಬಹುದು. ಅವರಿಗೆ 10 ಆಫೇರ್‌ಗಳಿಲ್ಲ. ಬಚ್ಚನ್‌ಜಿ ಇನ್ನೂ ಹಳೆ ಕಾಲದವರು. ಅವರು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಹಾಗಿದ್ದಲ್ಲಿ ಅವರ ಹೆಂಡತಿಯನ್ನು ಯಾಕೆ ನೋಯಿಸಬೇಕು?' ಎಂದು ರೇಖಾ ತಮ್ಮ ಪ್ರೀತಿಯ ಬಗ್ಗೆ ಮತ್ತಷ್ಟು ಹೇಳಿಕೊಂಡರು.
ಅಮಿತಾಭ್ ಪ್ರತೀ ಬಾರಿಯೂ ರೇಖಾಳೊಂದಿಗಿನ ಸಂಬಂಧವನ್ನು ನಿರಾಕರಿಸುತ್ತಾರೆ. ಆ ಬಗ್ಗೆ ನನ್ನನ್ನು ಪ್ರಶ್ನಿಸಲಾಗುತ್ತದೆ. ಆದರೆ, ನಾವಿಬ್ಬರ ಪರಸ್ಪರ ಪ್ರೀತಿಸುತ್ತಿದ್ದೇವೆ. ಒಬ್ಬರನ್ನೊಬ್ಬರು ಸ್ವೀಕರಿಸಿದ್ದೇವೆ. ದುಃಖಕ್ಕಿಂತ ನಮ್ಮ ಜೀವನದಲ್ಲಿ ಹೆಚ್ಚು ಸಂತೋಷವಿದೆ, ಎಂದಿದ್ದರು ಎವರ್ ಗ್ರೀನ್ ನಟಿ ರೇಖಾ.
'ಆ ವ್ಯಕ್ತಿಯೊಂದಿಗೆ ಇರುವವರೆಗೆ ನಾನು ಹೆದರುವುದಿಲ್ಲ. ಬೇರೆಯವರೊಂದಿಗೆ ನನ್ನನ್ನು ಗುರುತಿಸಲು ಸಾಧ್ಯವಿಲ್ಲ. ಪರ್ವಿನ್ ಬಾಬಿಯಂತೆ ನಾನು ಹುಚ್ಚಿಯಾಗಿದ್ದೇನೆಂದೂ ಹೇಳುತ್ತಾರೆ, ಆದರೆ, ಹಾಗೆ ಏನೂ ಇಲ್ಲ,' ಎಂದಿದ್ದರು ರೇಖಾ.

Latest Videos

click me!