ಸೋಮವಾರ ಟ್ವಿಟರ್ ನಲ್ಲಿ #Boycott_Kangana ಟ್ರೆಂಡ್ ಆಯಿತು.
ಈ ಟ್ರೆಂಡ್ ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಕಂಗನಾ , ಇದೀಗ ಇಲಿಗಳು ನಿಧಾನವಾಗಿ ಬಿಲದಿಂದ ಹೊರಕ್ಕೆ ಬರುತ್ತಿವೆ ಎಂದು ವ್ಯಂಗ್ಯಭರಿತ ಆಕ್ರೋಶ ಹೊರಹಾಕಿದರು.
ಇಂಥ ಇಲಿಗಳನ್ನು ಬಾಲಿವುಡ್ ಮಾಫಿಯಾ ತನಗೆ ಬೇಕಾದ್ದನ್ನು ಮಾಡುತ್ತದೆ ಎಂದು ಕಂಗನಾ ತಿರುಗೇಟು ನೀಡಿದರು.
ಇಷ್ಟಕ್ಕೆ ನಿಲ್ಲದ ಕಂಗನಾ ಸಿನಿಮಾ ಕುಟುಂಬದಿಂದ ಬಂದ ರಣಬೀರ್ ಕಪೂರ್, ಕರಣ್ ಜೋಹರ್, ಆಲಿಯಾ ಭಟ್ ಮತ್ತು ವರುಣ್ ಧವನ್ ಪೋಟೋ ಒಂದು ಕಡೆ ಹಾಕಿ ವೈರಸ್ ಎಂದು ಹೇಳಿದರು. ತಮ್ಮ ಪೋಟೋಕ್ಕೆ ಸಾನಿಟೈಸರ್ ಎಂದು ಬರೆದುಕೊಂಡರು.
ಇದಕ್ಕೆಲ್ಲ ನಾನು ಹೆದರುವುದಿಲ್ಲ, ಹೋಗಿ ನಿಮ್ಮ ಬಿಲ ಸೇರಿಕೊಳ್ಳಿ ಎಂದು ಠಕ್ಕರ್ ನೀಡಿದರು.
ಕಂಗನಾ ಬೆನ್ನಿಗೆ ನಿಂತ ಅಭಿಮಾನಿಗಳು ಝಾನ್ಸಿ ಕೀ ರಾಣಿ ಕಂಗನಾ ಹ್ಯಾಷ್ ಟ್ಯಾಗ್ ಟ್ರೆಂಡ್ ಮಾಡಿ ಟೀಕಾಕಾರಿಗೆ ತಮ್ಮದೆ ಭಾಷೆಯಲ್ಲಿ ತಿರುಗೇಟು ಕೊಟ್ಟರು.
ಅಭಿಮಾನಿಗಳಿಗೆ ಕಂಗನಾ ಧನ್ಯವಾದ ಹೇಳಲು ಮರೆತಿಲ್ಲ.