ಕ್ರಿಶ್ 3 ಚಿತ್ರವು 2006 ರಲ್ಲಿ ಬಿಡುಗಡೆಯಾದ ಕ್ರಿಶ್ ಚಿತ್ರದ ಮುಂದುವರಿದ ಭಾಗವಾಗಿತ್ತು. ಈ ಚಿತ್ರದಲ್ಲಿ ಕಂಗನಾ ರಣಾವತ್ ಹೃತಿಕ್ ಜೊತೆ ಎರಡನೇ ಬಾರಿಗೆ ಕೆಲಸ ಮಾಡಿದ್ದಾರೆ. ಈ ಹಿಂದೆ ಇಬ್ಬರೂ ಕೈಟ್ಸ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ, ಈ ಚಿತ್ರ ಬಿಡುಗಡೆಯಾದ ನಂತರ ಕಂಗನಾ ರಣಾವತ್ ಮತ್ತು ಹೃತಿಕ್ ರೋಷನ್ ನಡುವೆ ಭಾರೀ ವಿವಾದ ಹುಟ್ಟಿಕೊಂಡಿದ್ದು, ಹೃತಿಕ್ ತನ್ನನ್ನು ಈ ಚಿತ್ರದಲ್ಲಿ ನಟಿಸಲು 6 ತಿಂಗಳ ಕಾಲ ಹಿಂಬಾಲಿಸುತ್ತಿದ್ದಾರೆ ಎಂದು ಕಂಗನಾ ಮಾಧ್ಯಮಗಳೊಂದಿಗೆ ಹೇಳಿ ಕೊಂಡಿದ್ದರು. 2014 ರಲ್ಲಿ ಸುಸ್ಸಾನೆಯಿಂದ ವಿಚ್ಛೇದನದ ನಂತರ, ಹೃತಿಕ್ ಪ್ಯಾರಿಸ್‌ನಲ್ಲಿ ತನ್ನನ್ನು ಮದುವೆಯಾಗಲು ಪ್ರಸ್ತಾಪಿಸಿದ್ದಾಗಿಯೂ ಕಂಗನಾ ಹೇಳಿದ್ದರು. ಈ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆದರೆ ಇಬ್ಬರೂ ತಮ್ಮ ಸಂಬಂಧವನ್ನು ಮಾಧ್ಯಮಗಳಿಂದ ಮುಚ್ಚಿಟ್ಟಿದ್ದರು. ನಂತರ, ಹೃತಿಕ್ ತನ್ನನ್ನು ಆವಾಯಿಡ್ ಮಾಡುತ್ತಿದ್ದಾರೆ, ಎಂದು ಕಂಗನಾ ಭಾವಿಸಿದಾಗ, ಅವರು ಮಾಧ್ಯಮಗಳ ಮುಂದೆ ಈ ವಿಷಯಗಳನ್ನು ಬಹಿರಂಗ ಪಡಿಸಿದ್ದರು.