ಅಮೃತಾ ಸಿಂಗ್‌ರಿಂದ ಮಲೈಕಾ ಅರೋರಾವರೆಗೆ ಬಾಲಿವುಡ್‌ನ ದುಬಾರಿ ಡಿವೋರ್ಸ್‌ಗಳು

Suvarna News   | Asianet News
Published : Jun 24, 2020, 06:30 PM IST

ಬಾಲಿವುಡ್‌ನಲ್ಲಿ ಹಲವು ನಟನಟಿಯರ ವಿಚ್ಛೇದನ ಪ್ರಕರಣಗಳನ್ನು ಕಾಣುತ್ತೇವೆ. ಅವುಗಳಲ್ಲಿ ಸೈಫ್‌- ಅಮೃತಾ, ಅರ್ಬಾಜ್‌ -ಮಲೈಕಾ, ಹೃತಿಕ್‌-ಸುಜೇನ್‌ ಕರೀಷ್ಮಾ - ಸಂಜಯ್‌ರ ಡಿವೋರ್ಸ್‌ ಹೆಚ್ಚು ಸುದ್ದಿ ಮಾಡುತ್ತಿವೆ. ವಿಚ್ಛೇದನದ ನಂತರದ ಜೀವನಾಂಶ ಇದಕ್ಕೆ ಕಾರಣ. ನಟರು ತಮ್ಮ ಪತ್ನಿಯರಿಗೆ ನೀಡಿದ ಹಣದ ವಿವರಗಳು ಸದ್ದುಮಾಡಿದ್ದವು. ಅತ್ಯಂತ ದುಬಾರಿಗಳುವಿಚ್ಛೇದನ ಇವೆಂದೂ ಕರೆಯಾಲಾಗುತ್ತಿದೆ. ವಿಚ್ಛೇದನಕ್ಕೆ ಪ್ರತಿಯಾಗಿ ಈ ಸೆಲೆಬ್ರೆಟಿಗಳು ಕೋಟ್ಯಂತರ ರೂಪಾಯಿಗಳ  ಹಣವನ್ನು ಪಾವತಿಸಿದ್ದಾರೆ.

PREV
19
ಅಮೃತಾ ಸಿಂಗ್‌ರಿಂದ ಮಲೈಕಾ ಅರೋರಾವರೆಗೆ ಬಾಲಿವುಡ್‌ನ ದುಬಾರಿ ಡಿವೋರ್ಸ್‌ಗಳು

ಮದುವೆಯಂತೆಯೇ ಸೈಫ್ ಮತ್ತು ಅಮೃತಾರ ವಿಚ್ಛೇದನವೂ ಸಾಕಷ್ಟು ಸುದ್ದಿ ಮಾಡಿತ್ತು. ವಯಸ್ಸಿನಲ್ಲಿ ಹಿರಿಯಳಾದ ಅಮೃತಾಳನ್ನು ಮದುವೆಯಾಗಿ 13 ವರ್ಷಗಳ ನಂತರ ಡಿವೋರ್ಸ್‌ ಮಾಡಿದ ಸೈಫ್, 'ವಿಚ್ಛೇದನ ಸಮಯದಲ್ಲಿ 5 ಕೋಟಿ ರೂ.ಗಳ ಜೀವನಾಂಶವನ್ನು ನಿಗದಿಪಡಿಸಲಾಗಿದೆ, ಅದರಲ್ಲಿ  2.5 ಕೋಟಿ ರೂ ಕೊಟ್ಟಾಗಿದೆ. ಅಲ್ಲದೆ, ಮಕ್ಕಳ ಆರೈಕೆಗಾಗಿ ಅವರು ಪ್ರತಿ ತಿಂಗಳು 1 ಲಕ್ಷ ರೂಪಾಯಿ ಅಮೃತಾಗೆ ನೀಡುತ್ತೇನೆ,' ಎಂದಿದ್ದರು. 

29

ಮಲೈಕಾ ಅರೋರಾ ಅರ್ಬಾಜ್ ಖಾನ್‌ರಿಂದ 10 ಕೋಟಿ ರೂಪಾಯಿಗಳನ್ನು ಕೇಳಿದರು. ಆದರೆ, 10ರ ಬದಲು ಮಲೈಕಾಗೆ 15 ಕೋಟಿ ರೂ ನೀಡಿದ  ಅರ್ಬಾಜ್.

39

ಹೃತಿಕ್ ರೋಷನ್ ಮತ್ತು ಸುಜೇನ್ ಖಾನ್ ಅವರ ವಿಚ್ಛೇದನವನ್ನು ದುಬಾರಿ ಎಂದು ಪರಿಗಣಿಸಲಾಗಿದೆ. 2000ರಲ್ಲಿ ವಿವಾಹವಾದ  2013ರಲ್ಲಿ ಬೇರೆಯಾದರು. ಜೀವನಾಂಶ ರೂಪದಲ್ಲಿ ಸುಜೇನ್‌ ಕೋಟಿಗಟ್ಟಲೆ ರೂಪಾಯಿಗಳ ಬೇಡಿಕೆ ಇಟ್ಟಿದ್ದರು ಮತ್ತು ಹೃತಿಕ್ ಭಾರಿ ಮೊತ್ತವನ್ನು ಪಾವತಿಸಿದರು. ಸುಜೇನ್‌ 400 ಕೋಟಿ ರೂ. ಬೇಡಿಕೆ ಇಟ್ಟಿದ್ದರು  ಪ್ರತಿಯಾಗಿ ಹೃತಿಕ್ 380 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ, ಎನ್ನಲಾಗಿದೆ. ಆದರೆ, ಈ ಸುದ್ದಿಯನ್ನು ನಿರಾಕರಿಸಿ ಹೃತಿಕ್ ನಂತರ ಟ್ವೀಟ್ ಮಾಡಿದ್ದಾರೆ.

49

ಪ್ರಭುದೇವ 2011ರಲ್ಲಿ ಪತ್ನಿ ರಾಮಲತಾ ವಿಚ್ಛೇದನ ಪಡೆದರು. ವರದಿಯ ಪ್ರಕಾರ, ಪ್ರಭುದೇವ 20 ರಿಂದ 25 ಕೋಟಿ ಮೌಲ್ಯದ ಆಸ್ತಿ, ಎರಡು ದುಬಾರಿ ವಾಹನಗಳು ಮತ್ತು 10 ಲಕ್ಷ ರೂ. ನೀಡಿದ್ದಾರಂತೆ.

59

ವರದಿಗಳ ಪ್ರಕಾರ, ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಪತ್ನಿ ಪಾಯಲ್ ಖನ್ನಾರಿಂದ ವಿಚ್ಚೇದನ ಪಡೆಯಲು 50 ಕೋಟಿ ರೂ ನೀಡಿದ್ದಾರೆ. 2001ರಲ್ಲಿ ವಿವಾಹವಾಗಿದ್ದ ಆದಿತ್ಯ ಮತ್ತು ಪಾಯಲ್  2009ರಲ್ಲಿ ಬೇರ್ಪಟ್ಟರು.

69

ರಿಯಾ ಪಿಳ್ಳೈ ಸಂಜಯ್ ದತ್ ಎರಡನೇ ಹೆಂಡತಿ. 1998ರಲ್ಲಿ ವಿವಾಹವಾದ ಇವರು  2005ರಲ್ಲಿ ವಿಚ್ಚೇದನ ಪಡೆದರು. ಪರಿಹಾರವಾಗಿ ರಿಯಾಗೆ ಎಷ್ಟು ಹಣವನ್ನು ನೀಡಿದರು ಎಂದು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ ಸಂಜಯ್ 4 ಕೋಟಿ ರೂ. ಅಲ್ಲದೆ, ದುಬಾರಿ ಕಾರು ಮತ್ತು ಸೀ ಫೇಸ್‌ ಐಷಾರಾಮಿ ಅಪಾರ್ಟ್ಮೆಂಟ್ ಸಹ ನೀಡಿದ್ದಾರೆ.

79

ಫರ್ಹಾನ್ ಅಖ್ತರ್ ಮತ್ತು ಪತ್ನಿ ಅಧುನಾರ 16 ವರ್ಷಗಳ ವಿವಾಹದ ಬ್ರೇಕಪ್ಅಪ್‌‌ ಇಂಡಸ್ಟ್ರಿಗೆ ದೊಡ್ಡ ಶಾಕ್‌. ಫರ್ಹಾನ್‌ನಿಂದ ವಿಚ್ಚೇದನದ ಅಧುನಾಗೆ ಜೀವನಾಂಶ ಸಿಗಲಿಲ್ಲ, ಆದರೆ ಮುಂಬೈನ ಅತ್ಯಂತ ದುಬಾರಿ ಪ್ರದೇಶವಾದ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿರುವ ಕೋಟಿಗಟ್ಟಲೆಯ ಬಂಗಲೆ ಅವರ ಪಾಲಾಯಿತು.

89

ಕರಿಷ್ಮಾ ಕಪೂರ್ ಮದುವೆಯಾದ 11 ವರ್ಷಗಳ ನಂತರ 2016ರಲ್ಲಿ ವಿಚ್ಛೇದನ ಪಡೆದರು. ಕರಿಷ್ಮಾ ಮತ್ತು ಉದ್ಯಮಿ ಪತಿ ಸಂಜಯ್ ಕಪೂರ್ ನಡುವೆ 14 ಕೋಟಿ ರೂಪಾಯಿಗಳ ಒಪ್ಪಂದವಾಗಿತ್ತು. ಇದರ ಅಡಿಯಲ್ಲಿ ಸಂಜಯ್ ಕರಿಷ್ಮಾಗೆ ಪ್ರತಿ ತಿಂಗಳು 10 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ. ಹಣವನ್ನು ಅವರ ಇಬ್ಬರು ಮಕ್ಕಳ ಆರೈಕೆಗೆ ಖರ್ಚು ಮಾಡಲಾಗುತ್ತದೆ. ಇದಲ್ಲದೆ ಸಂಜಯ್ ಕರಿಷ್ಮಾಗೆ ಬಂಗಲೆಯನ್ನೂ ನೀಡಿದರು. 

99

ಹೆತ್ತವರಿಗೆ ವಿರುದ್ಧವಾಗಿ 1986ರಲ್ಲಿ ರೀನಾ ದತ್ತಾಳನ್ನು ಮದುವೆಯಾಗಿದ್ದರು ಆಮೀರ್ ಖಾನ್, ಆದರೆ ಕೆಲವು ವರ್ಷಗಳ ನಂತರ, ಇಬ್ಬರ ನಡುವಿನ ಅಂತರ ಹೆಚ್ಚಾಗಿ 2002ರಲ್ಲಿ, ದಂಪತಿ ವಿಚ್ಚೇದನ ಪಡೆದರು. ಈ  ಡಿವೋರ್ಸ್‌ ಆಮೀರ್‌ಗೆ ದುಬಾರಿಯಾಯಿತು. ವರದಿಗಳ ಪ್ರಕಾರ, ಅಮೀರ್ ಪರಿಹಾರವಾಗಿ ಭಾರಿ ಮೊತ್ತವನ್ನು ಪಾವತಿಸಿದ್ದಾರೆ. ಆದರೆ, ಅವರು ರೀನಾಗೆ ಎಷ್ಟು ಹಣವನ್ನು ನೀಡಿದರು ಎಂಬುದು ಎಂದಿಗೂ ಬಹಿರಂಗಗೊಂಡಿಲ್ಲ.

click me!

Recommended Stories