ನನ್ನ ಎಕ್ಸ್‌ ಮನೆ ಬಾಡಿಗೆ ಕಟ್ಟುವುದು ಅವರ ತಂದೆ- ಕಂಗನಾ ರಣಾವತ್

First Published | Jun 24, 2020, 4:35 PM IST

ಬಿ-ಟೌನ್‌ನಲ್ಲಿ ಹೃತಿಕ್ ರೋಷನ್ ಮತ್ತು ರಣಾವತ್ ನಡುವಿನ ಜಗಳ ಹಲವು ವರ್ಷಗಳಿಂದ ನಡೆಯುತ್ತಿದೆ. ಕಂಗನಾ ಹೆಚ್ಚಾಗಿ ಹೃತಿಕ್‌ ಅವರನ್ನು ದೂರುವುದು ಕಂಡುಬರುತ್ತದೆ, ಅದೇ ಸಮಯದಲ್ಲಿ, ನಟ ಕಂಗನಾ ಹೆಸರು ಕೇಳಿದರೂ ಸಾಕು ತಪ್ಪಿಸಿಕೊಳ್ಳುತ್ತಾನೆ. ಇವರ ಆಪಾದಿತ ಸಂಬಂಧ ಬಹಿರಂಗವಾದಾಗಿನಿಂದ ಈ ಇಬ್ಬರಿಗೂ ಒಬ್ಬರನ್ನು ನೋಡಿದರೆ, ಮತ್ತೊಬ್ಬರಿಗೆ ಆಗುವುದೇ ಇಲ್ಲ. ಅಂಥ ಪರಿಸ್ಥಿತಿಯಲ್ಲಿ, ನಟಿ ಮತ್ತೊಮ್ಮೆ ಹೃತಿಕ್ ಬಗ್ಗೆ ಮಾತನಾಡಿದ್ದಾರೆ. ಕಂಗನಾ ಆಡಿರುವ ಮಾತು ಮತ್ತದೇ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. 

ಬಾಲಿವುಡ್‌ನ ಅದ್ಭುತ ನಟಿ ಕಂಗನಾ ನೇರ ಹಾಗೂ ನಿಷ್ಠೂರ ಮಾತಿನಿಂದ ಸದಾ ಸುದ್ದಿಯಲ್ಲಿರುತ್ತಾರೆ.
ವರ್ಷಗಳಿಂದ ಚಾಲ್ತಿಯಲ್ಲಿರುವ ಇವರ ಹಾಗೂ ನಟ ಹೃತಿಕ್‌ರ ಜಗಳ ಬಾಲಿವುಡ್‌ನ ಟಾಪ್‌ ನ್ಯೂಸ್‌‌ಗಳಲ್ಲಿ ಒಂದು.
Tap to resize

ಹೃತಿಕ್‌ ಹಾಗೂ ಕಂಗನಾರ ಅಫೇರ್‌ನ ರೂಮರ್‌ ನಂತರ ಇಬ್ಬರ ಕಿತ್ತಾಟ ತಿಳಿದೇ ಇದೆ.
ಈಗ ಮತ್ತೆ ಕಂಗನಾ ಹೃತಿಕ್‌ ಮನೆಯ ಬಾಡಿಗೆಯನ್ನು ಅವರ ಅಪ್ಪ ಕಟ್ಟುವುದು ಎಂದು ಹೇಳಿಕೆ ಕೊಟ್ಟು ನಟನ ನಿದ್ರೆಗೆಡಿಸಿದ್ದಾರೆ.
ಕಂಗನಾಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಜರ್ನಿಯ ಬಗ್ಗೆಹೇಳುತ್ತಾ,ತಮ್ಮ ಎಕ್ಸ್ಕಾರಣದಿಂದ 'ಹಣದ ದುರಾಸೆ' ಎಂಬ ಟ್ಯಾಗ್ ಅಂಟಿಸಿಕೊಂಡಿದ್ದೆ, ಎಂದು ಹೇಳಿಕೊಂಡಿದ್ದಾರೆ. ಆದರೆ ಇಂದು ನಟಿ ಮುಂಬೈನ ಐಷಾರಾಮಿ ಕಚೇರಿಯಲ್ಲಿ ಸ್ವಂತ ಮನೆ ಹೊಂದಿದ್ದಾರೆಂದು ಹೆಮ್ಮೆಪಡುತ್ತಾರೆ, ಅವರ ಎಕ್ಸ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಹಾಗೂ ಬಾಡಿಗೆಯನ್ನು ಅವರ ತಂದೆ ಪಾವತಿಸುತ್ತಾರೆ ಎಂದು ಹೇಳಿದ್ದಾರೆ ಮಣಿಕರ್ಣಿಕಾ ನಟಿ.
ತನ್ನ ಜರ್ನಿಯನ್ನು ನೋಡಿದಾಗ ತುಂಬಾ ಹೆಮ್ಮೆ ಅನಿಸುತ್ತದೆ. ಇದನ್ನು ಪ್ರಾರಂಭಿಸಿದಾಗ ನನಗೆ ಯಾವುದೇ ಭೌತಿಕ ಮಹತ್ವಾಕಾಂಕ್ಷೆಗಳಿರಲಿಲ್ಲ ಎಂದು ಹೇಳಬಹುದು ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಆದರೆ ವರ್ಷಗಳ ಹಿಂದೆ ಅವಳ ಎಕ್ಸ್ (ಹೃತಿಕ್ ರೋಷನ್) ಜೊತೆ ಜಗಳವಾಡಿದಾಗ ಮತ್ತು ನಂತರ ಕಾನೂನು ಹೋರಾಟ ನಡೆದಾಗ, ಹಣದ ಹಿಂದೆ ಓಡುವ ಒಂದು ಸಣ್ಣ ಪಟ್ಟಣದ ಹುಡುಗಿ ಎಂದು ಸುದ್ದಿಯಾಗಿತ್ತು, ಎಂದು ನೆನಪಿಸಿಕೊಳ್ಳುತ್ತಾರೆ ಬಾಲಿವುಡ್‌ನ ಕ್ವೀನ್‌ ಫೇಮ್ ನಟಿ‌.
ಹೆಣ್ಣು ಮಕ್ಕಳನ್ನು ಸಮಾಜ ನೋಡುವ ರೀತಿಯೇ ಬೇರೆ. ಆಕೆಗೆ ಬಂಗಾರ ಹಾಗೂ ಹಣದ ಮೇಲೆ ವ್ಯಾಮೋಹ ಎಂದೇ ಪರಿಗಣಿಸಲಾಗುತ್ತದೆ. ಅವೆಲ್ಲವನ್ನೂ ಮೀರಿದ ಮತ್ತೊಂದು ಮನಸ್ಸು, ಆಸೆ, ಗುರಿ ಹೆಣ್ಣಿಗಿರುತ್ತದೆ, ಎನ್ನುತ್ತಾರೆ ಕಂಗನಾ.
ಇಂದು, ತನ್ನ ಎಕ್ಸ್ ಅವರ ತಂದೆ ಪಾವತಿಸುವ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ. ಆದರೆ ನನ್ನ ಕಠಿಣ ಪರಿಶ್ರಮದಿಂದ ಮುಂಬಯಿಯಲ್ಲಿ ಸ್ವಂತ ಮನೆ ಮತ್ತು ಕಚೇರಿಯನ್ನು ಹೊಂದಿದ್ದೇನೆ, ಎಂದು ಹೆಮ್ಮೆಯಿಂದ ಹೇಳಿ ಕೊಂಡಿದ್ದಾರೆಕಂಗನಾ.
ಹಣವೀಗನನಗೆ ಆತ್ಮ ವಿಶ್ವಾಸ ತಂದು ಕೊಟ್ಟಿದೆ. ಹಣದ ಹಿಂದೆ ಯಾರೋ ಹಿಂದೆ ಹೋಗುತ್ತಾಳೆ ಎಂಬ ಮಾತು ಕೇಳುವ ಅಗತ್ಯವಿಲ್ಲ. ನನ್ನ ಪರಿಶ್ರಮದಿಂದ ನಾನು ಏನು ಬೇಕೋ ಅದನ್ನು ಸಾಧಿಸಿದ್ದೇನೆ, ಎನ್ನುತ್ತಾರೆ ಕಂಗನಾ.

Latest Videos

click me!