ಆಲಿಯಾ ಭಟ್‌ ಮಾತ್ರವಲ್ಲ ಈ ನಟಿಯರೂ ಐಷರಾಮಿ ಕಾರು ಖರೀದಿಸಿದ್ದಾರೆ!

First Published | Oct 26, 2023, 5:19 PM IST

ಇತ್ತೀಚೆಗೆ  ಬಾಲಿವುಡ್‌ನ ಹಲವು ನಟಿಯರು ದುಬಾರಿ ಐಷರಾಮಿ ಕಾರುಗಳನ್ನು ಖರೀದಿಸಿದ ವರದಿಯಾಗಿದೆ. ಆಲಿಯಾ ಭಟ್‌ನಿಂದ ಹಿಡಿದು ಶ್ರದ್ಧಾ ಕಪೂರ್ ವರೆಗೆ ಬೆಲೆಬಾಳುವ ಹೊಸ  ಐಷಾರಾಮಿ ಕಾರುಗಳನ್ನು ತಮ್ಮ ಸಂಗ್ರಹಕ್ಕೆ ಸೇರಿಸಿದ ಪಟ್ಟಿಯಲ್ಲಿದ್ದಾರೆ.

ಆಲಿಯಾ ಭಟ್:
ಇತ್ತೀಚೆಗೆ  ಅತ್ಯುತ್ತಮ ನಟಿಗಾಗಿ ರಾಷ್ಟ್ರ  ಪ್ರಶಸ್ತಿ ಗೆದ್ದ ನಂತರ ಆಲಿಯಾ ಭಟ್ ಸುಮಾರು 3.2 ಕೋಟಿ ಮೌಲ್ಯದ ರೇಂಜ್ ರೋವರ್ ಆಟೋಬಯೋಗ್ರಫಿ SUV ಕಾರನ್ನು ಖರೀದಿಸಿದರು.

ಸೋನಂ ಕಪೂರ್:
ಬಾಲಿವುಡ್ ನಟಿ ಸೋನಂ ಕಪೂರ್ ರೇಂಜ್ ರೋವರ್ ಆಟೋಬಯೋಗ್ರಫಿ  ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 3.43 ಕೋಟಿ ರೂಪಾಯಿ.

Tap to resize

ತಾಪ್ಸಿ ಪನ್ನು:
ಇತ್ತೀಚೆಗೆ ಐಷಾರಾಮಿ ಕಾರುಗಳನ್ನು ಖರೀದಿಸಿದ ನಟಿಯರು ಪಟ್ಟಿಯಲ್ಲಿ ತಾಪ್ಸಿ ಪನ್ನು ಸಹ ಇದ್ದಾರೆ. ತಾಪ್ಸಿ ತನ್ನ ಸಂಗ್ರಹಕ್ಕೆ 3 ಕೋಟಿ ರೂಪಾಯಿ ಮೌಲ್ಯದ Mercedes Maybach GLS 600 ಕಾರನ್ನು ಸೇರಿಸಿದ್ದಾರೆ.

ರಾಕುಲ್ ಪ್ರೀತ್‌:
ನಟಿ ರಾಕುಲ್ ಪ್ರೀತ್ ಈ ವರ್ಷ ಆಗಸ್ಟ್‌ನಲ್ಲಿ 3 ಕೋಟಿ ಬೆಲೆಯ Mercedes Maybach GLS ಅನ್ನು ಖರೀದಿಸಿದ್ದಾರೆ.

ಶ್ರದ್ಧಾ ಕಪೂರ್‌:
ಶ್ರದ್ಧಾ ಕಪೂರ್ ಇತ್ತೀಚೆಗೆ ತಮ್ಮ ಗ್ಯಾರೇಜ್‌ಗೆ ಲಂಬೋರ್ಗಿನಿ ಹುರಾಕನ್ ಅನ್ನು ಸೇರಿಸಿದ್ದಾರೆ. ನಟಿ ತನ್ನ ಹೊಸ ಕಾರಿಗೆ ಪೂಜೆ ಮಾಡಲು ಮುಂಬೈನ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 

ಪೂಜಾ ಹೆಗ್ಡೆ:
ನಟಿ ಮತ್ತು ಮಾಡೆಲ್‌ ಪೂಜಾ ಹೆಗ್ಡೆ 4 ಕೋಟಿ ಮೌಲ್ಯದ ರೇಂಜ್ ರೋವರ್ ಎಸ್‌ಯುವಿ ಕಾರನ್ನು ಅವರ ಸಂಗ್ರಹಕ್ಕೆ ಸೇರಿಸಿದ್ದಾರೆ.

ಕಿಯಾರಾ ಅಡ್ವಾಣಿ:
ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ 2.69 ಕೋಟಿ ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ S580 ಖರೀದಿಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್:
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ 1.95 ಕೋಟಿ ರೂಪಾಯಿ ಬೆಲೆಯ BMW i7 ಅನ್ನು ಖರೀದಿಸಿದ್ದಾರೆ.

Latest Videos

click me!