Image: Instagram
ಅಶ್ಲೀಲ ಸಿನಿಮಾ ಮಾಡಿ ಅವಮಾನಕ್ಕೊಳಗಾಗಿ ನಂತರ ವರ್ಷಗಳ ಕಾಲ ಮುಖ ಕಾಣದಂತೆ ಮಾಸ್ಕ್ ಹಾಕಿ ತಿರುಗಾಡುವ ಮೂಲಕ ಮಾಸ್ಕ್ ಮ್ಯಾನ್ ಎಂದೇ ಖ್ಯಾತಿ ಗಳಿಸಿದ ರಾಜ್ ಕುಂದ್ರಾ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಪತಿಯ ಅಶ್ಲೀಲ ಸಿನಿಮಾ ಪ್ರಕರಣದಿಂದ ಅವಮಾನಕ್ಕೊಳಗಾಗಿದ್ದ ಶಿಲ್ಪಾ ಶೆಟ್ಟಿ ದೇಶ ಬಿಟ್ಟು ಹೋಗುವುದಕ್ಕೂ ಮನಸ್ಸು ಮಾಡಿದ್ದರಂತೆ, ಅಲ್ಲದೇ ಪತಿಗೆ ವಿದೇಶದಲ್ಲೇ ನೆಲೆಸುವಂತೆ ಸಲಹೆ ನೀಡಿದ್ದರಂತೆ.
ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಜ್ ಕುಂದ್ರಾ, ಈ ಘಟನೆಯ ನಂತರ ನೀವು ವಿದೇಶದಲ್ಲಿ ನೆಲೆಸುವುದಕ್ಕೆ ಬಯಸುವಿರಾ ಎಂದು ಪತ್ನಿ ಶಿಲ್ಪಾ ನನ್ನ ಬಳಿ ಕೇಳಿದ್ದಳು ಎಂದಿದ್ದಾರೆ.
ನೀವು ವಿದೇಶದಲ್ಲಿ ನೆಲೆಸಲು ಬಯಸುವಿರಾ ರಾಜ್, ನೀವು ಲಂಡನ್‌ನಲ್ಲಿ ಎಲ್ಲವನ್ನು ಬಿಟ್ಟು ಬಂದಿದ್ದೀರಿ, ನೀವು ಅಲ್ಲೇ ಹುಟ್ಟಿ ಅಲ್ಲೇ ಬೆಳೆದಿದ್ದೀರಿ? ಆದರೆ ನಾನು ಇಲ್ಲೇ ಇರಬೇಕು ಎಂದು ಬಯಸಿದ ಕಾರಣಕ್ಕೆ ನೀವು ಇಲ್ಲಿ ಇದ್ದೀರಿ
ನೀವು ಬಯಸಿದಲ್ಲಿ ನಾನು ಅಲ್ಲಿಗೆ ತೆರಳುವ ಬಗ್ಗೆ ಪ್ರಯತ್ನ ಮಾಡುವೆ ಹಾಗೆಯೇ ದೇಶ ತೊರೆದು ನಾವು ವಿದೇಶದಲ್ಲಿ ನೆಲೆಸೋಣ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು ಎಂದು ರಾಜ್ ಕುಂದ್ರಾ ಹೇಳಿದ್ದಾರೆ.
ಆದರೆ ನಾನು ಆಕೆಗೆ ನಾನು ಭಾರತವನ್ನು ಪ್ರೀತಿಸುತ್ತೇನೆ, ಹಾಗೂ ಭಾರತವನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದೆ ಎಂದು ಪತ್ನಿ ಜೊತೆಗಿನ ಸಂವಹನವನ್ನು ಮರು ನೆನೆದಿದ್ದಾರೆ ರಾಜ್ ಕುಂದ್ರಾ.
ಜನರು ದೊಡ್ಡ ಹಗರಣಗಳನ್ನು ಮಾಡುತ್ತಾರೆ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಮಾಡಿ ದೇಶ ತೊರೆಯುತ್ತಾರೆ. ಆದರೆ ನಾನು ಏನೂ ಮಾಡಿಲ್ಲ, ಹಾಗಾಗಿ ದೇಶ ತೊರೆಯುವುದಿಲ್ಲ ಎಂದು ಕುಂದ್ರಾ ಹೇಳಿದ್ದಾರೆ.
ಅಲ್ಲದೇ ಜೈಲು ಸೇರಿದ ಬಳಿಕ ನಿಂದನೆ ಹಾಗೂ ಅವಮಾನಕ್ಕೊಳಗಾಗಿ ಜೈಲಿನಲ್ಲೇ ನಾನು ಬದುಕನ್ನು ಕೊನೆಗೊಳಿಸಲು ಬಯಸಿದ್ದೆ ಎಂದು ಕುಂದ್ರಾ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ಸಂಪೂರ್ಣ ಕುಸಿದು ಹೋಗಿದೆ, ಬಹುಶಃ ಒಳಗೆಯ ವಿಷಯಗಳನ್ನು ಕೊನೆಗಾಣಿಸಲು ಸಾಕಷ್ಟು ಯೋಚಿಸಿದ್ದೆ. ತುಂಬಾ ಅವಮಾನ, ಪ್ರತಿಷ್ಠೆಗೆ ಧಕ್ಕೆಯಾಯಿತು.
ನನ್ನಿಂದಾಗಿ ಮಾಧ್ಯಮಗಳು ನನ್ನ ಹೆಂಡತಿ, ಮಕ್ಕಳು ಮತ್ತು ತಂದೆ ತಾಯಿಯ ಹಿಂದೆ ಬಿದ್ದಿದ್ದವು, ಇದರಿಂದ ಅವರು ಅವಮಾನಿತರಾಗಿದ್ದರು. ಅದರಿಂದ ತುಂಬಾ ನೋವಿಗೊಳಗಾಗಿದ್ದೆ ಎಂದು ರಾಜ್ ಕುಂದ್ರಾ ಹೇಳಿಕೊಂಡಿದ್ದಾರೆ.
ಅಶ್ಲೀಲ ಚಿತ್ರಗಳ ನಿರ್ಮಾಣ ಹಾಗೂ ಹಂಚಿಕೆಯ ಆರೋಪದ ಮೇಲೆ ಕಳೆದ ವರ್ಷ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇತ್ತೀಚೆಗೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಪರಸ್ಪರ ದೂರಾಗುತ್ತಿದ್ದಾರೆ. ವಿಚ್ಚೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿಯೊಂದು ಭಾರಿ ಸಂಚಲನ ಸೃಷ್ಟಿಸಿತ್ತು.
ಸ್ವತಃ ರಾಜ್‌ಕುಂದ್ರಾ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಈ ಗಾಸಿಪ್‌ಗೆ ತೆರೆ ಎಳೆದಿದ್ದರು.