Published : Jun 30, 2025, 12:13 PM ISTUpdated : Jun 30, 2025, 12:18 PM IST
ಎಷ್ಟೇ ಆಕ್ಷನ್, ಹಾರರ್, ಥ್ರಿಲ್ಲರ್ ಸಿನಿಮಾ ಬಂದ್ರೂ ಕೂಡ ರೊಮ್ಯಾಂಟಿಕ್ ಸಿನಿಮಾ ಕಥೆಗಳಿಗೆ ಭಾರೀ ಬೇಡಿಕೆಯಿದೆ. ಒಟಿಟಿಯಲ್ಲಿ ಈ ಐದು ರೊಮ್ಯಾಂಟಿಕ್ ಸಿನಿಮಾಗಳು ಭಾರೀ ಪ್ರಮಾಣದಲ್ಲಿ ವೀಕ್ಷಣೆ ಆಗಿದೆ.
ಬಾಲಿವುಡ್‌ನಲ್ಲಿ ಈಗಾಗಲೇ ಸಾಕಷ್ಟು ರೊಮ್ಯಾಂಟಿಕ್ ಸಿನಿಮಾಗಳು ಹಿಟ್ ಆಗಿವೆ. ಅವುಗಳಲ್ಲಿ ಐದು ಜನಪ್ರಿಯ ಸಿನಿಮಾಗಳು ಇಲ್ಲಿವೆ.
26
ಜಬ್ ವಿ ಮೆಟ್ ಸಿನಿಮಾ ( jab we met movie )
ಇಮ್ತಿಯಾಜ್ ಅಲಿ ಅವರ ಬ್ಲಾಕ್‌ಬಸ್ಟರ್ ರೊಮ್ಯಾಂಟಿಕ್ ಸಿನಿಮಾವಿದು. ಈ ಸಿನಿಮಾವನ್ನು ಎಷ್ಟೇ ಬಾರಿ ನೋಡಿದರೂ ಹಳೆಯದಾಗುವುದಿಲ್ಲ. ಇಂದಿನ ಯುವಜನತೆ ಕೂಡ ಈ ರೀತಿ ಕಥೆಗೋಸ್ಕರ ಹಾತೊರೆಯುತ್ತಿದ್ದಾರೆ. ಗೀತ್ ಹಾಗೂ ಆದಿತ್ಯ ನಡುವಿನ ಲವ್‌ಸ್ಟೋರಿ ಇಲ್ಲಿದೆ. ಕರೀನಾ ಕಪೂರ್, ಶಾಹೀದ್ ಕಪೂರ್ ಸಿನಿಮಾವಿದು.
36
ಕರೀಬ್ ಕರೀಬ್ ಸಿಂಗಲ್ ಸಿನಿಮಾ
ʼಕರೀಬ್ ಕರೀಬ್ ಸಿಂಗಲ್ʼ ಎನ್ನೋದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಇದರಲ್ಲಿ ಇರ್ಫಾನ್ ಖಾನ್ ಮತ್ತು ಪಾರ್ವತಿ ನಟಿಸಿದ್ದಾರೆ. ಈ ಸಿನಿಮಾವು ವಿಧವೆಯಾದ ಜಯಾ (ಪಾರ್ವತಿ), ಕವಿ ಯೋಗಿ (ಇರ್ಫಾನ್) ಒಂದು ಡೇಟಿಂಗ್ ವೆಬ್‌ಸೈಟ್‌ನಲ್ಲಿ ಭೇಟಿಯಾಗುವ ಕತೆಯನ್ನು ಹೇಳುತ್ತದೆ. ಆಮೇಲೆ ಯೋಗಿ ತನ್ನ ಮಾಜಿ ಗೆಳತಿಯರನ್ನು ಭೇಟಿಯಾಗಲು ಹೋದಾಗ ಏನೇನು ಆಗುವುದು ಎನ್ನೋದು ಈ ಸಿನಿಮಾದಲ್ಲಿದೆ. ಈ ಸಿನಿಮಾವನ್ನು ತನುಜಾ ಚಂದ್ರ ನಿರ್ದೇಶಿಸಿದ್ದಾರೆ.
ಆನಂದ್ ಎಲ್. ರೈ ನಿರ್ದೇಶನದ ʼರಾಂಝನಾʼ ಸಿನಿಮಾದಲ್ಲಿ ಕುಂದನ್ ಕಥೆಯಿದೆ. ಕುಂದನ್, ಎನ್ನುವ ಹುಡುಗಿಯನ್ನು ಪ್ರೀತಿಸುತ್ತಾನೆ. ಈಪ್ರೀತಿಯು ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತದೆ. ಝೋಯಾಳಿಗೆ ಅಕ್ರಮ್ ಮೇಲೆ ಲವ್ ಅಗುತ್ತದೆ. ಈ ಸಿನಿಮಾದಲ್ಲಿ ಪ್ರೀತಿ, ಸಾಮಾಜಿಕ ಭಿನ್ನತೆಗಳು, ಮಾನವ ಸಂಬಂಧಗಳ ಸಂಕೀರ್ಣತೆ ಕೂಡ ಇವೆ. ಈ ಸಿನಿಮಾದ ಹಾಡುಗಳು ತುಂಬ ವೈರಲ್ ಆಗಿವೆ. ಧನುಷ್, ಸೋನಂ ಕಪೂರ್ ಸಿನಿಮಾವಿದು.
56
ಶಾದಿ ಮೇಂ ಜರೂರ್ ಆನಾ ಸಿನಿಮಾ ( shadi me jarur aana movie )
ʼಶಾದಿ ಮೇಂ ಜರೂರ್ ಆನಾʼ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್, ಕೃತಿ ಕರಬಂಧ ನಟಿಸಿದ್ದಾರೆ. ಐಎಎಸ್ ಆಗಬೇಕು ಅಂತಿದ್ದ ಆರತಿಯು, ಸತ್ಯೇಂದ್ರ ಮಿಶ್ರಾ ಜೊತೆಗೆ ಫಿಕ್ಸ್ ಆಗಿದ್ದ ಮದುವೆಯನ್ನು ನಿಲ್ಲಿಸುತ್ತಾಳೆ. ಆಮೇಲೆ ಸತ್ಯೇಂದ್ರ ಮಿಶ್ರಾ ಐಎಎಸ್ ಆಫೀಸರ್ ಆಗುತ್ತಾನೆ. ಆರತಿ ಒಂದು ಹಗರಣದಲ್ಲಿ ಸಿಲುಕಿದಾಗ ಸತ್ಯೇಂದ್ರನೇ ಅವಳನ್ನು ಕಾಪಾಡ್ತಾನೆ. ಮುಂದೆ ಏನಾಗುವುದು ಎನ್ನೋದು ಈ ಸಿನಿಮಾದಲ್ಲಿದೆ.
66
ರಾಕ್‌ಸ್ಟಾರ್ ಸಿನಿಮಾ ( Rockstar Movie )
ಇಮ್ತಿಯಾಜ್ ಅಲಿ ಅವರ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾವಿದು. ಓರ್ವ ವ್ಯಕ್ತಿ ರಾಕ್‌ಸ್ಟಾರ್ ಆಗಲು ಬಯಸುವವನ ಕತೆ ಇಲ್ಲಿದೆ. ಕಾಲೇಜಿನಲ್ಲಿ ಪ್ರೀತಿಗೆ ಬಿದ್ದ ಹುಡುಗ, ಆಮೇಲೆ ಹೇಗೆ ರಾಕ್‌ಸ್ಟಾರ್ ಆಗುತ್ತಾನೆ? ಪ್ರೀತಿ, ಜನಪ್ರಿಯತೆ, ವೈಯಕ್ತಿಕ ನೋವಿನ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ರಣಬೀರ್ ಕಪೂರ್, ನರಗಿಸ್ ಫಕ್ರಿ ಇತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.