ಸಾವಿನ ಸುಳ್ಳು ಸುದ್ದಿ ಹರಡಿದ ಪೂನಂ ಪಾಂಡೆಗೆ ಮೊದಲ ಸಂಕಷ್ಟ, FIR ದಾಖಲು!

Published : Feb 04, 2024, 10:49 PM IST

ಜಾಗೃತಿಗಾಗಿ ಸಾವಿನ ಸುಳ್ಳು ಸುದ್ದಿ ಹರಡಿ ಭಾರಿ ಸಂಚಲನ ಸೃಷ್ಟಿಸಿದ ನಟಿ ಪೂನಂ ಪಾಂಡೆಗೆ ಇದೀಗ ಮೊದಲ ಸಂಕಷ್ಟ ಎದುರಾಗಿದೆ. ಪೂನಂ ಪಾಂಡೆ ಹಾಗೂ ಪಾಂಡೆ ಮ್ಯಾನೇಜರ್ ವಿರುದ್ಧ ದೂರು ದಾಖಲಾಗಿದೆ.  

PREV
18
ಸಾವಿನ ಸುಳ್ಳು ಸುದ್ದಿ ಹರಡಿದ ಪೂನಂ ಪಾಂಡೆಗೆ ಮೊದಲ ಸಂಕಷ್ಟ, FIR ದಾಖಲು!

ಬೋಲ್ಡ್ ಹಾಗೂ ಸೆಕ್ಸಿ ನಡತೆ, ವಿವಾದಗಳಿಂದ ಸುದ್ದಿಯಾಗುತ್ತಿದ್ದ ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್‌ನಿಂದ ಮತ್ತಪಟ್ಟ ಸುಳ್ಳು ಸುದ್ದಿ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಕೊನೆಗ ಪೂನಂ ಪಾಂಡೆ, ತಾನು ಬದುಕಿದ್ದೇನೆ ಇದು ಜಾಗೃತಿ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದ್ದರು.

28

ಪೂನಂ ಪಾಂಡೆ ಸಾವಿನ ಸುಳ್ಳು ಸುದ್ದಿ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇತ್ತ ಪೂನಂ ಪಾಂಡೆ ಹಾಗೂ ತಂಡ ದುಪ್ಪಟ್ಟು ಹಣ ಪಡೆದಿರುವುದು ಮಾತ್ರವಲ್ಲದೆ, ದೇಶಾದ್ಯಂತ ಪುಕ್ಕಟೆ ಪ್ರಚಾರವನ್ನೂ ಗಿಟ್ಟಿಸಿಕೊಂಡಿತ್ತು. ಆದರೆ ಪೂನಂಗೆ ಮತ್ತ ಸಂಕಷ್ಟ ದಿನಗಳು ಆರಂಭಗೊಂಡಿದೆ.

38

ಪೂನಂ ಪಾಂಡೆ ಹಾಗೂ ಆಕೆಯ ಮ್ಯಾನೇಜರ್ ಸುಳ್ಳು ಸುದ್ದಿ ಹರಡಿದ್ದಾರೆ. ಅದರಲ್ಲೂ ಸಾವಿನ ಕುರಿತು ಸುಳ್ಳು ಸುದ್ದಿ ಹರಡಲಾಗಿದೆ. ಫೇಕ್ ನ್ಯೂಸ್ ಹರಡುವಿಕೆ ಕಾನೂನು ಪ್ರಕಾರ ತಪ್ಪು ಎಂದು ದೂರು ದಾಖಲಾಗಿದೆ.

48

ಅಲಿ ಕಾಶಿಪ್ ಅನ್ನೋ ವಕೀಲರು ದೂರು ದಾಖಲಿಸಿರುವುದಾಗಿ ವರದಿಗಳು ಹೇಳುತ್ತಿದೆ. ಪೂನಂ ಪಾಂಡೆ ಹಾಗೂ ಮ್ಯಾನೇಜರ್ ಇಬ್ಬರ ವಿರುದ್ದ FIR ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

58

ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದ ನಟಿ, ಮಾಡೆಲ್‌ ಪೂನಂ ಪಾಂಡೆ ಅವರು ದಿಢೀರನೇ ‘ನಾನು ಸತ್ತಿಲ್ಲ, ಜೀವಂತವಾಗಿದ್ದೇನೆ’ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು.
 

68

ಗರ್ಭಕಂಠದ ಕ್ಯಾನ್ಸರ್‌ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೇಕೆಂದೇ ತಾನು ಸಾವನ್ನಪ್ಪಿರುವ ರೀತಿ ಸುದ್ದಿ ಹಬ್ಬಿಸಿದೆವು ಎಂದು ನಟಿ ಹೇಳಿಕೊಂಡಿದ್ದರು.
 

78

ಅಲ್ಲದೇ ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಸೃಷ್ಟಿಸಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ. ಶುಕ್ರವಾರ ಮುಂಜಾನೆ ಪೂನಂ ಕೊನೆಯುಸಿರೆಳೆದಿದ್ದಾರೆಂದು ಅವರ ಮ್ಯಾನೇಜರ್‌, ಪೂನಂ ಅವರದೇ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು.

88

ಇತ್ತ ಪೂನಂ ಪಾಂಡೆ ತಂಡ, ಪಿಆರ್ ಎಜೆನ್ಸಿ ಕೂಡ ಕ್ಷಮೆ ಯಾಚಿಸಿದೆ. ಆದರೆ ಸಂಕಷ್ಟ ಇದೀಗ ಶುರುವಾಗುತ್ತಿದೆ. ದೂರು ದಾಖಲಾಗಿದೆ. ಪುಕ್ಕಟೆ ಪ್ರಚಾರ ಗಿಟ್ಟಿಸಲು ಕಂಪನಿ ಮಾಡಿದ ಪ್ರಯತ್ನಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
 

Read more Photos on
click me!

Recommended Stories