Oscars 2023: ಕೊನೆಗೂ US ಫ್ಲೈಟ್ ಹತ್ತಿದ RRR ಸ್ಟಾರ್ ಜೂ.ಎನ್ ಟಿ ಆರ್

First Published | Mar 6, 2023, 11:26 AM IST

ಆರ್ ಆರ್ ಆರ್ ಸ್ಟಾರ್ ಜೂ. ಎನ್ ಟಿ ಆರ್ ಕೊನೆಗೂ ಯು ಎಸ್ ಹೊರಟರು. ಆಸ್ಕರ್ ಪ್ರಶಸ್ತಿ ಸಮಾರಂಭಕ್ಕಾಗಿ ಜೂ.ಎನ್ ಟಿ ಆರ್ ಯುಎಸ್ ಹೋಗಿದ್ದಾರೆ. 

ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾತಂಡ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಎದುರು ನೋಡುತ್ತಿದೆ. ಇಡೀ ಭಾರತಕ್ಕೆ ಈ ಬಾರಿಯ ಆಸ್ಕರ್ ಸಮಾರಂಭ ವಿಶೇಷವಾಗಿದೆ.  ಮಾರ್ಚ್ 12 ರಂದು ಲಾಸ್ ಏಂಜಲೀಸ್‌ನಲ್ಲಿ ಆಸ್ಕರ್ ಸಮಾರಂಭ ನಡೆಯುತ್ತಿದೆ. ಅಕಾಡೆಮಿ ಅವಾರ್ಡ್ ಸಮಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ.

ಈಗಾಗಲೇ ಆರ್ ಆರ್ ಆರ್ ಸಿನಿಮಾತಂಡ ಯು ಎಸ್ ಪ್ರವಾಸಕ್ಕೆ ತೆರಳಿದ್ದರು. ಆದರೆ ಜೂ.ಎನ್ ಟಿ ಆರ್ ಮಾತ್ರ ಇನ್ನೂ ಹೊಗಿರಲಿಲ್ಲ. ಜೂ.ಎನ್ ಟಿ ಆರ್ ಯಾಕೆ ಹೋಗಿಲ್ಲ, ಹೋಗಲ್ವಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆರ್ ಆರ್ ಆರ್ ತಂಡಕ್ಕೆ ಕೇಳುತ್ತಿದ್ದರು. 

Tap to resize

ಇದೀಗ ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೂ.ಎನ್ ಟಿ ಆರ್ ಯು ಎಸ್ ಫ್ಲೈಟ್ ಹತ್ತಿದ್ದಾರೆ. ಹೈದರಾಬಾದ್ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡಿರು ಜೂ.ಎನ್ ಟಿ ಆರ್ ಆಸ್ಕರ್ ಸಮಾರಂಭಕ್ಕೆ ಹೊರಟರು. 

ಏರ್ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಜೂ.ಎನ್ ಟಿ ಆರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೆ ರಾಮ್ ಚರಣ್ ಯು ಎಸ್‌ಗೆ ಬರಿಗಾಲಿನಲ್ಲೇ ಹೊರಟಿದ್ದರು. ರಾಮ್ ಚರಣ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಜೂ.ಎನ್ ಟಿ ಆರ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ ತಡವಾಗಿ ಯು ಎಸ್ ಹೋಗುತ್ತಿದ್ದಾರೆ. ಈಗಾಗಲೇ ಯುಎಸ್ ನಲ್ಲಿ ಆರ್ ಆರ್ ಆರ್ ಸಿನಿಮಾದ ಸ್ಕ್ರೀನಿಂಗ್ ಆಗಿದೆ.  ಸ್ಕ್ರೀನಿಂಗ್ ವೇಳೆ ನಿರ್ದೇಶಕ ರಾಜಮೌಳಿ, ನಟ ರಾಮ್ ಚರಣ್ ಮತ್ತು ಕೀರವಾಣಿ ಭಾಗಿಯಾಗಿದ್ದರು. 

ಇದೀಗ ಜೂ ಎನ್ ಟಿ ಆರ್, ಆರ್ ಆರ್ ಆರ್ ತಂಡ ಸೇರಿಕೊಳ್ಳುತ್ತಾರೆ. ಈಗಾಗಲೇ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಗೆದ್ದು ಬೀಗಿರುವ ಆರ್ ಆರ್ ಆರ್ ಇದೀಗ ಪ್ರತಿಷ್ಠಿತ ಆಸ್ಕರ್‌ಗೆ ಎದುರು ನೋಡುತ್ತಿದೆ. ಅಂದಹಾಗೆ ನಟಿ ದೀಪಿಕಾ ಪಡುಕೋಣೆ ಕೊಡ ಆಸ್ಕರ್ ವೇದಿಕೆಯಲ್ಲಿ ಕಾಣಿಸಿಕೊಳ್ಳಳಿದ್ದಾರೆ. ಆಸ್ಕರ್ ನ ನಿರೂಪಕರಲ್ಲಿ ದೀಪಿಕಾ ಕೊಡ ಒಬ್ಬರಾಗಿದ್ದಾರೆ. ಹಾಗಾಗಿ ಈಗಾಗಲೇ ದೀಪಿಕಾ ಯು ಎಸ್ ಹೊರಟಿದ್ದಾರೆ.   

Latest Videos

click me!