FIFA world cup 2022: ಖುಷಿಗೆ ಡಿಪ್ಪಿ ಹಗ್ ಮಾಡಿದ ರಣವೀರ್ ಫೋಟೋ ವೈರಲ್!

First Published | Dec 19, 2022, 4:06 PM IST

ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಫಿಫಾ ವಿಶ್ವಕಪ್  (FIFA world cup 2022) ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಮ್ಯಾಜಿಕ್‌ಗೆ ಸಾಕ್ಷಿಯಾಗಲು ಕತಾರ್‌ನ ಸ್ಟೇಡಿಯಂನಲ್ಲಿ ಹಲವು ಭಾರತೀಯ ಸೆಲೆಬ್ರಿಟಿಗಳು ಹಾಜರಾಗಿದ್ದರು. ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್‌ ಪಂದ್ಯವನ್ನು ನೇರವಾಗಿ ವಿಕ್ಷೀಸಿದವರಲ್ಲಿ  ದೀಪಿಕಾ ಪಡುಕೋಣೆ (Deepika Padukone), ರಣವೀರ್ ಸಿಂಗ್ (Ranveer Singh), ಕಾರ್ತಿಕ್ ಆರ್ಯನ್ (Kartik Aryan) ಮತ್ತು ಮೋಹನ್‌ಲಾಲ್ (Mohanlal) ಮುಂತಾದವರು ಸೇರಿದ್ದಾರೆ
.

ಕತಾರ್‌ನ ಲುಸೈಲ್‌ನಲ್ಲಿರುವ ಲುಸೇಲ್ ಐಕಾನಿಕ್ ಸ್ಟೇಡಿಯಂ ಎಂದೂ ಕರೆಯಲ್ಪಡುವ ಲುಸೈಲ್ ಕ್ರೀಡಾಂಗಣದಲ್ಲಿ ಡಿಸೆಂಬರ್ 18, ಭಾನುವಾರದಂದು ಅರ್ಜೆಂಟೀನಾ ಪೆನಾಲ್ಟಿಯಲ್ಲಿ ಫ್ರಾನ್ಸ್ ಅನ್ನು 4-2 ಅಂತರದಿಂದ ಸೋಲಿಸಿ ವಿಶ್ವಕಪ್ ಗೆದ್ದಿತು.  

ಫಿಪಾ ವರ್ಲ್ಡ್‌ ಕಪ್‌ ಫೈನಲ್‌ ಮ್ಯಾಚ್‌ ನಡೆದ ಕತಾರ್‌ನ ಲುಸೈಲ್ ಕ್ರೀಡಾಂಗಣದಲ್ಲಿ ಭಾರತೀಯ ಚಿತ್ರರಂಗದ ಹಲವು ಸ್ಟಾರ್ಸ್‌ ಹಾಜರಿದ್ದರು. ಈ ಪಟ್ಟಿಯಲ್ಲಿ ಮೊದಲ ಹೆಸರು ದೀಪಿಕಾ ಪಡುಕೋಣೆ ಅವರದ್ದು.
 

Tap to resize

Image credit: PTI

ದೀಪಿಕಾ ಪಡುಕೋಣೆ ಫಿಫಾ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೂಪರ್‌ಸ್ಟಾರ್ ಮತ್ತು ಭಾರತದ ಪ್ರಮುಖ ಜಾಗತಿಕ ರಾಯಭಾರಿ ದೀಪಿಕಾ ಫಿಫಾ ವಿಶ್ವಕಪ್ ಟ್ರೋಫಿಯನ್ನು ಲುಸೇಲ್ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಿದರು.

ಬಾಲಿವುಡ್‌ನ ಇನ್ನೊಬ್ಬ ನಟಿ ನೋರಾ ಫತೇಹಿ ಸಹಾ ಈ ಇವೆಂಟ್‌ನ ಭಾಗವಾದರು. ನೋರಾ  ಫಿಫಾ 2022 ವಿಶ್ವಕಪ್ ಮುಕ್ತಾಯ ಸಮಾರಂಭದಲ್ಲಿ ಪ್ರದರ್ಶನ ನೀಡಿದರು. ನೋರಾ ಈ ಹಿಂದೆ ದೋಹಾದ ಅಲ್ ಬಿದ್ದಾ ಪಾರ್ಕ್‌ನಲ್ಲಿ ನಡೆದ ಫಿಫಾ ವಿಶ್ವಕಪ್ 2022 ಅಭಿಮಾನಿಗಳ ಉತ್ಸವದಲ್ಲೂ ಪ್ರದರ್ಶನ ನೀಡಿದ್ದಾರೆ
 

ಶಾರುಖ್ ಖಾನ್ FIFA ವರ್ಲ್ಡ್ ಕಪ್ 2022 ರ ಫಿನಾಲೆಯಲ್ಲಿ ಭಾಗವಹಿಸಿದ್ದರು. ಅವರು ವೇಯ್ನ್ ರೂನಿ ಅವರೊಂದಿಗೆ ಜಿಯೋ ಸ್ಟುಡಿಯೋಸ್‌ನಲ್ಲಿ ಪಂದ್ಯದ ಪೂರ್ವ ಸಂವಾದದಲ್ಲಿ ಪಾಲ್ಗೊಂಡರು.

ಕೋರಿಯೋಗ್ರಾಫರ್‌ ಫರಾ ಖಾನ್ ಲುಸೈಲ್ ಸ್ಟೇಡಿಯಂನಲ್ಲಿ ತನ್ನ ಮತ್ತು ತನ್ನ ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.ಈ ಫೋಟೋದಲ್ಲಿ ಫರಾ ಅರ್ಜೆಂಟೀನಾದ ಜರ್ಸಿ ಧರಿಸಿರುವ ತಮ್ಮ ಮಗನ ಜೊತೆ ಪೋಸ್‌ ನೀಡಿದ್ದಾರೆ.

ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಕೂಡ ಕ್ರೀಡಾಂಗಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಆಟವನ್ನು ವೀಕ್ಷಿಸಿದರು. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲ್ಲಿ ನಟ  ಫೋಟೋವನ್ನು ಹಂಚಿಕೊಂಡಿದ್ದಾರೆ.  

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ FIFA ವಿಶ್ವಕಪ್ 2022ರ ಫಿನಾಲೆ ಚಮತ್ಕಾರವನ್ನು ನೇರವಾಗಿ ನೋಡಲು ಕತಾರ್‌ಗೆ ಪ್ರಯಾಣಿಸಿದ್ದರು. ಕಾರ್ತಿಕ್‌ ವಿಮಾನದಲ್ಲಿರುವ ತಮ್ಮ ಫೋಟೋವನ್ನು ಶೇರ್‌ ಮಾಡಿ .'ಫುಟ್ಬಾಲ್ ಪ್ಯಾಶನ್ #ಫೈನಲ್' ಎಂದು ಶೀರ್ಷಿಕೆ ನೀಡಿದ್ದಾರೆ.

ಫೈನಲ್‌  ಮ್ಯಾಚ್‌ ನೋಡುತ್ತಿರುವ ಕೆಲವು ಫೋಟೋ ಮತ್ತು ವೀಡಿಯೋಗಳನ್ನು ರಣವೀರ್‌ ಸಿಂಗ್ ಇನ್ನಸ್ಟಾಗ್ರಾಮ್‌ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.ಅದರಲ್ಲಿ ಅವರು ದೀಪಿಕಾ ಪಡುಕೋಣೆ ಜೊತೆಗೆ ಅರ್ಜೆಂಟೀನಾ ವಿಜಯವನ್ನು ಸಂಭ್ರಮಿಸುವುದನ್ನು ಕಾಣಬಹುದು

ಮಲಯಾಳಂನ ಮತ್ತೊಬ್ಬ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಆಟ ಪ್ರಾರಂಭವಾಗುವ ಕೆಲವೇ ನಿಮಿಷಗಳ ಮೊದಲು ಕತಾರ್ ಸ್ಟೇಡಿಯಂನ  ಸ್ಟ್ಯಾಂಡ್‌ನಿಂದ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ನಟ ಇಶಾನ್ ಖಟ್ಟರ್ ಅವರು FIFA ವಿಶ್ವಕಪ್ 2022 ರಲ್ಲಿ ಪಾಲ್ಗೊಳ್ಳಲು ಕತಾರ್‌ಗೆ ಪ್ರಯಾಣಿಸುತ್ತಿದ್ದ ಸಮಯದ ಕೆಲವು ಪೋಟೋಗಳನ್ನು Instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

Latest Videos

click me!