ಬಾಲಿವುಡ್ ನಟಿ ಜಾನ್ವಿ ಕಪೂರ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಸಿನಿಮಾ, ಜಿಮ್, ಯೋಗ, ಫಿಟ್ನೆಸ್ ಅಂತ ಸದ್ದು ಮಾಡುತ್ತಿದ್ದ ಜಾನ್ವಿ ಇದೀಗ ಬಾಯ್‌ಫ್ರೆಂಡ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಜಾನ್ವಿ ಲವ್ ಲೈಫ್ ವೈರಲ್ ಆಗಿದೆ. ಜಾನ್ವಿ ಮಾಜಿ ಬಾಯ್‌ಫ್ರೆಂಡ್ ಜೊತೆ ಓಡಾಡುತ್ತಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.
ಇತ್ತೀಚಿಗಷ್ಟೆ ಮಾಲ್ಡೀವ್ಸ್‌ಗೆ ಹಾರಿದ್ದ ಜಾನ್ವಿ ಮಾಜಿ ಬಾಯ್ ಫ್ರೆಂಡ್ ಜೊತೆ ಹೋಗಿದ್ದರು ಎನ್ನಲಾಗಿತ್ತು. ಇಬ್ಬರೂ ಶೇರ್ ಮಾಡಿದ್ದ ಫೋಟೋಗಳು ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿತ್ತು. ಅಂದಹಾಗೆ ಜಾನ್ವಿ ಮಾಜಿ ಬಾಯ್ ಫ್ರೆಂಡ್ ಮಾತ್ಯಾರು ಅಲ್ಲ ಶಿಖರ್ ಪಹಾರಿಯಾ.
ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ. ಈ ಮೊದಲು ಜಾನ್ವಿ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಬಳಿಕ ಬ್ರೇಕಪ್ ಮಾಡಿಕೊಂಡು ದೂರ ಆಗಿದ್ದರು ಎನ್ನಲಾಗಿತ್ತು. ಇದೀಗ ಮತ್ತೆ ಒಂದಾಗಿದ್ದು ಒಟ್ಟಿಗೆ ಓಡಾಡುತ್ತಿದ್ದಾರೆ. ಮಾಲ್ಡೀವ್ಸ್ ಬಳಿಕ ಇಬ್ಬರೂ ಮುಬೈ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಜಾನ್ವಿ ಮತ್ತು ಶಿಖರ್ ಇಬ್ಬರೂ ಒಟ್ಟಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದು ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 'ಇದು ಕೇವಲ ಟೈಂ ಪಾಸ್, ಮದುವೆ ಆಗೋಗೆ ಮಾತ್ರ ದೊಡ್ಡ ಸ್ಟಾರ್ ಅಥವಾ ದೊಡ್ಡ ವ್ಯಕ್ತಿ ಬೇಕು' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ ಕಳೆದ ವಾರ ಜಾನ್ವಿ ಈ ವ್ಯಕ್ತಿ ಜೊತೆ ಮಾಲ್ಡೀವ್ಸ್ ನಲ್ಲಿ ಇದ್ದರು ಎಂದು ಹೇಳಿದ್ದಾರೆ.
ಮಲ್ಡೀವ್ಸ್‌ಗೆ ಹಾರಿದ್ದ ಜಾನ್ವಿ ಸಿಕ್ಕಾಪಟ್ಟೆ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದರು. ಜಾನ್ವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜಾನ್ವಿ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅಂದಹಾಗೆ ಜಾನ್ವಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಮಿಲಿ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಈ ಸಿನಿಮಾ ಮಲಯಾಳಂನ ಹೆಲನ್ ಸಿನಿಮಾದ ರಿಮೇಕ್ ಆಗಿತ್ತು.
2018ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಜಾನ್ವಿ ದೊಡ್ಡ ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದಾರೆ. ಈಗಾಗಲೇ ಐದಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಜಾನ್ವಿಗೆ ಹೇಳಿಕೊಳ್ಳುವಷ್ಟು ಮಟ್ಟದ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ಸದ್ಯ ಜಾನ್ವಿ ಬವಾಲ್ ಮತ್ತು Mr.& Mrs. Mahi ಸಿನಿಮಾದಲ್ಲಿ ನಟಿಸುತ್ತಿದ್ದಾರೆ.