ಶಾರುಖ್ ಖಾನ್ ಜೊತೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿಯರು!

Published : Oct 28, 2023, 05:24 PM IST

ಕಿಂಗ್‌ ಖಾನ್‌ ಶಾರುಖ್‌ ಖಾನ್‌ (Shah Rukh Khan) ಅವರ ಜೊತೆ ಕೆಲಸ ಮಾಡುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಅವರ ಸಿನಿಮಾದ ಮೂಲಕ ಮಬಾಲಿವುಡ್‌ಗೆ ಪಾದಾರ್ಪಣೆ ಮಾಡುವುದನ್ನು ಯಾವ ನಟಿ ಬಯಸುವುದ್ದಿಲ್ಲ ಹೇಳಿ? ಈ ಆ ರೀತಿ ಶಾರುಖ್ ಖಾನ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿಯರು ಇಲ್ಲಿದ್ದಾರೆ.  

PREV
19
ಶಾರುಖ್ ಖಾನ್ ಜೊತೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿಯರು!

ನಯನತಾರಾ:
ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿನ ತನ್ನ ಕೆಲಸಕ್ಕಾಗಿ ಲೇಡಿ ಸೂಪರ್‌ಸ್ಟಾರ್ ಎಂಬ ಬಿರುದನ್ನು ಗಳಿಸಿದ  ನಯನತಾರಾ ಅವರು ಶಾರುಖ್‌ ಖಾನ್‌ ಅವರ ಸೂಪರ್‌ ಹಿಟ್‌ ಸಿನಿಮಾ ಜವಾನ್‌ ಮೂಲಕ ಹಿಂದಿ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು.

29

ದೀಪಿಕಾ ಪಡುಕೋಣೆ:
ನಿರ್ದೇಶಕಿ ಫರಾ ಖಾನ್ ಅವರ ಓಂ ಶಾಂತಿ ಓಂ(2007) ಚಿತ್ರದಲ್ಲಿ ಶಾರುಖ್ ಖಾನ್ ಎದುರು ದೀಪಿಕಾ ಪಡುಕೋಣೆ ಬಾಲಿವುಡ್‌ಗೆ ಎಂಟ್ರಿ ನೀಡಿದರು. ಶಾರುಖ್ ಅವರ ನಾಯಕಿ ಯಾಗಿ ದೀಪಿಕಾ ತನ್ನ ಮೊದಲ ಹಿಂದಿ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಂತರ ಈ ಜೋಡಿಯು ಚೆನ್ನೈ ಎಕ್ಸ್‌ಪ್ರೆಸ್ (2013), ಹ್ಯಾಪಿ ನ್ಯೂ ಇಯರ್ (2014) ಮತ್ತು ಪಠಾಣ್‌ (2023) ಚಿತ್ರಗಳಲ್ಲಿ ಯಶಸ್ವಿ ಜೋಡಿಯಾಗಿದೆ. ಎಸ್‌ಆರ್‌ಕೆ ಅವರ ಇತ್ತೀಚಿನ ಜವಾನ್‌ನಲ್ಲಿ ಪಡುಕೋಣೆ ಕೂಡ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

 
 

39
Preity Zinta

ಪ್ರೀತಿ ಜಿಂಟಾ:
ಪ್ರೀತಿ ಜಿಂಟಾ ಅವರು ತಮ್ಮ ಚೊಚ್ಚಲ ಚಿತ್ರ ದಿಲ್ ಸೆನಲ್ಲಿ ಶಾರುಖ್‌ ಖಾನ್‌ ಜೊತೆ ನಟಿಸಿದ್ದಾರೆ. ಈ ಚಿತ್ರವನ್ನು ಮಣಿರತ್ನಂ ಅವರು  ನಿರ್ದೇಶನ ಮಾಡಿದ್ದಾರೆ.
 

49

ಸುಚಿತ್ರಾ ಕೃಷ್ಣಮೂರ್ತಿ:
ರೂಪದರ್ಶಿ ಮತ್ತು ನಟಿ ಸುಚಿತ್ರಾ ಕೃಷ್ಣಮೂರ್ತಿ 1994 ರಲ್ಲಿ,  ಕಭಿ ಹಾನ್ ಕಭಿ ನಾದಲ್ಲಿ   ಎಸ್‌ಆರ್‌ಕೆ ಜೊತೆ ಮೊದಲ ಹಿಂದಿ ಚಲನಚಿತ್ರದಲ್ಲಿ ಕೆಲಸ ಮಾಡಿದರು.

59

ಗಾಯತ್ರಿ ಜೋಶಿ:
ಗಾಯತ್ರಿ ಜೋಶಿ ಅವರು  ಅಶುತೋಷ್ ಗೋವಾರಿಕರ್ ಅವರ ಸ್ವದೇಸ್ (2004) ನಲ್ಲಿ ಶಾರುಖ್‌ ಖಾನ್ ಅವರೊಂದಿಗೆ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಆದರೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿ ಈ ನಟಿ ಮತ್ತೆ ಚಿತ್ರಗಳಲ್ಲಿ ನಟಿಸಲೇ ಇಲ್ಲ. ಇತ್ತೀಚೆಗೆ ಇಟಲಿಯಲ್ಲಿ ಇವರ ಕಾರು ಅಪಘಾತವಾಗಿ, ಸುದ್ದಿಯಾಗಿದ್ದರು.

69

ಮಹಿಮಾ ಚೌಧರಿ:
ನಿರ್ದೇಶಕ ಸುಭಾಷ್ ಘಾಯ್ ಅವರ 1997 ರ ಪರ್ದೇಸ್‌ನಲ್ಲಿ  ಮಹಿಮಾ ಚೌಧರಿ ಬಾಲಿವುಡ್‌ಗೆ ಎಂಟ್ರಿ ನೀಡಿದರು. ಶಾರುಖ್‌ ಖಾನ್‌ ಜೊತೆ ನಟಿಸಿ ಈ ಚಿತ್ರ ಆ ವರ್ಷದ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು.

79

ಶಿಲ್ಪಾ ಶೆಟ್ಟಿ:
ಅಬ್ಬಾಸ್-ಮುಸ್ತಾನ್‌ರ ಥ್ರಿಲ್ಲರ್ ಬಾಜಿಗರ್ (1993) ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದರು ಮತ್ತು ಅದು ಕೂಡ ಶಾರುಖ್ ಖಾನ್ ಎದುರು.  ಚಿತ್ರವು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು ಮತ್ತು ಶೆಟ್ಟಿ ಕೂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

89

ಮಹಿರಾ ಖಾನ್‌:
ಪಾಕಿಸ್ತಾನದಲ್ಲಿ  ಮನೆಮಾತಾಗಿದ್ದ ನಟಿ ಮಹಿರಾ ಖಾನ್ 2017 ರಲ್ಲಿ  ಶಾರುಖ್‌ ಖಾನ್‌ ಅವರ ಜೊತೆ ರಯೀಸ್ ಸಿನಿಮಾದ ಮೂಲಕ  ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 

99

ಅನುಷ್ಕಾ ಶರ್ಮಾ:
ಅನುಷ್ಕಾ ಶರ್ಮಾ ರಬ್ ನೆ ಬನಾ ದಿ ಜೋಡಿ (2008) ನಲ್ಲಿ ಶಾರುಖ್ ಖಾನ್ ಎದುರು ಬಾಲಿವುಡ್‌ನಲ್ಲಿ ಕನಸಿನ ಚೊಚ್ಚಲ ಪ್ರವೇಶ ಮಾಡಿದರು. ಆದರ ನಂತರ ಅನುಷ್ಕಾ ಅವರು  ಜಬ್ ತಕ್ ಹೈ ಜಾನ್ (2012), ವೆನ್ ಹ್ಯಾರಿ ಮೆಟ್ ಸೆಜಲ್ (2017) ಮತ್ತು ಝೀರೋ (2018) ನಲ್ಲಿ ಶಾರುಖ್‌ಗೆ ಜೋಡಿಯಾಗಿದ್ದಾರೆ

Read more Photos on
click me!

Recommended Stories