ಫಾತಿಮಾ ಸನಾ ಶೇಖ್ ಬಾಲ ಕಲಾವಿದೆಯಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಚಾಚಿ 420, ಒನ್ 2 ಕಾ 4, ಬಡೇ ದಿಲ್ವಾಲಾ ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡರು.
ಆಮೀರ್ ಖಾನ್ ಅವರ ದಂಗಲ್ ಸಿನಿಮಾದಿಂದ ಫಾತಿಮಾ ಅವರಿಗೆ ಮನ್ನಣೆ ಸಿಕ್ಕಿತು. ಈ ಸಿನಿಮಾದ ನಂತರ ಫಾತಿಮಾ ‘ದಂಗಲ್ ಗರ್ಲ್’ ಎಂದೇ ಫೇಮಸ್ ಆಗಿದ್ದಾರೆ. ದಂಗಲ್ ಸಿನಿಮಾದಲ್ಲಿ, ಅವರು ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಅವರ ಮಗಳು ಬಬಿತಾ ಫೋಗಟ್ ಪಾತ್ರವನ್ನು ನಿರ್ವಹಿಸಿದರು.
ಇದರ ನಂತರ ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾದಲ್ಲಿ ಫಾತಿಮಾ ಮತ್ತೆ ಆಮೀರ್ ಜೊತೆ ಕಾಣಿಸಿಕೊಂಡರು. ಆ ಸಮಯದಲ್ಲಿ, ಗಾಸಿಪ್‌ಗಳ ಕಾಲಂನಲ್ಲಿ ಪ್ರಾರಂಭವಾದ ಆಮೀರ್ ಮತ್ತು ಫಾತಿಮಾ ನಡುವೆ ಅನೈತಿಕ ಸಂಬಂಧದ ವರದಿಗಳೂ ಇನ್ನೂ ನಡೆಯುತ್ತಿದೆ.
ಕಿರಣ್ ರಾವ್‌ನಿಂದ ಆಮೀರ್ ಖಾನ್ ವಿಚ್ಛೇದನ ಪಡೆಯಲು ಫಾತಿಮಾ ಕಾರಣ ಎನ್ನಲಾಗಿದೆ ಮತ್ತು ಆಮೀರ್ ಖಾನ್ ಜೊತೆ ರಹಸ್ಯವಾಗಿ ಮುದವೆಯಾಗಿದ್ದಾರೆ ಎಂಬ ವದಂತಿಗಳು ಸಹ ಕೇಳಿಬರುತ್ತಿವೆ. ಆದರೆ ನಟಿಗೆ ಮದುವೆಯಲ್ಲಿ ನಂಬಿಕೆ ಇಲ್ಲ ಹಾಗೂ ಅವರು ಎಂದಿಗೂ ಮದುವೆಯಾಗಲು ಬಯಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
'ನನಗೆ ಮದುವೆಯಲ್ಲಿ ನಂಬಿಕೆ ಇಲ್ಲ. ನೀವು ಯಾರೊಂದಿಗಾದರೂ ಬದುಕಲು ಬಯಸಿದರೆ, ನೀವು ಯಾವುದೇ ದಾಖಲೆಯ ಮೂಲಕ ಮದುವೆಯನ್ನು ದೃಢೀಕರಿಸುವ ಅಗತ್ಯವಿಲ್ಲ ಎಂದು ನಾನು ನಂಬುತ್ತೇನೆ.ಮದುವೆಯನ್ನು ದಾಖಲಿಸಲಾಗುತ್ತದೆ. ಅಂದರೆ ನೀವು ನಿಜವಾಗಿಯೂ ಆ ವ್ಯಕ್ತಿಯನ್ನು ಪ್ರೀತಿಸುತ್ತೀರಿ ಎಂದು ಅರ್ಥವಲ್ಲ. ಈ ವಿಷಯದಲ್ಲಿ ನಾನು ಮುಕ್ತ ಮನಸ್ಸಿನವಳಾಗಿದ್ದೇನೆ' ಎಂದು ಹೇಳಿದ್ದಾರೆ.
ಚಲನಚಿತ್ರಗಳಿಗೆ ಸೇರುವ ಮೊದಲು, ಫಾತಿಮಾ ಟಿವಿಯಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಬೆಸ್ಟ್ ಆಫ್ ಲಕ್ ನಿಕ್ಕಿ, ಲೇಡೀಸ್ ಸ್ಪೆಷಲ್ ಮತ್ತು ಆಗ್ಲೇ ಜನಮ್ ಮೋಹೆ ಬಿತಿಯಾ ಹಿ ಕಿಜೋದಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಫಾತಿಮಾ ಸೌತ್‌ನ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಫಾತಿಮಾ ಅವರ 'ಲುಡೋ' ಮತ್ತು 'ಸೂರಜ್ ಪೆ ಮಂಗಲ್ ಭಾರಿ' ಸಿನಿಮಾಗಳು 2020 ರಲ್ಲಿ ಬಿಡುಗಡೆಯಾದವು. ಇದರಲ್ಲಿನ ಅಭಿನಯವು ಭಾರೀ ಮೆಚ್ಚುಗೆ ಗಳಿಸಿದೆ.ಪ್ರಸ್ತುತ ಫಾತಿಮಾ ಮೇಘನಾ ಗುಲ್ಜಾರ್ ಅವರ ನಿರ್ದೇಶನದ ಸ್ಯಾಮ್ ಬಹದ್ದೂರ್ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಎದುರು ಕಾಣಿಸಿಕೊಳ್ಳಲಿದ್ದಾರೆ.