'ಬಹು ನಿರೀಕ್ಷಿತ ಚಿತ್ರ ಭೋಲಾ ಶಂಕರ್‌ನ ಫಸ್ಟ್ ಲುಕ್ ಅನ್ನು ಬೆಳಿಗ್ಗೆ 9:05 ಕ್ಕೆ ಬಿಡುಗಡೆ ಮಾಡಲಾಗಿದೆ. ಆ್ಯಕ್ಷನ್ ಡ್ರಾಮಾದಲ್ಲಿ ಶಂಕರ್ ಮುಖ್ಯ ಪಾತ್ರದಲ್ಲಿ ಚಿರಂಜೀವಿ ಕಾಣಿಸಿಕೊಳ್ಳಲಿದ್ದಾರೆ. ಶಂಕರ್ ಎಂಬುದು ಶಿವನಿಗೆ ಮತ್ತೊಂದು ಹೆಸರು ಮತ್ತು ಮಹಾಶಿವರಾತ್ರಿಗಿಂತ ಉತ್ತಮವಾದ ದಿನ ಯಾವುದು' ಎಂದು ಮಾಹಿತಿಯನ್ನು ಹಂಚಿಕೊಂಡು ಚಿತ್ರ ನಿರ್ಮಾಪಕರು ಹೇಳಿದ್ದರು.
ಮೆಹರ್ ರಮೇಶ್ ನಿರ್ದೇಶನದ ತೆಲುಗು ಚಿತ್ರ 'ಭೋಲಾ ಶಂಕರ್' ಫಸ್ಟ್ ಲುಕ್ ಬಿಡುಗಡೆಯಾಗಿದೆ. ಮಹಾ ಶಿವರಾತ್ರಿಯ ಸಂದರ್ಭವನ್ನು ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೆ ಆಯ್ಕೆ ಮಾಡಲಾಗಿದೆ ಏಕೆಂದರೆ ಶೀರ್ಷಿಕೆಯು ಶಿವನನ್ನು ಸೂಚಿಸುತ್ತದೆ.
ಭೋಲಾ ಶಂಕರ್ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲಿ ಚಿರಂಜೀವಿ ಅವರು ಜೀಪಿನ ಬಂಪರ್ ಮೇಲೆ ಸ್ಟೈಲ್ ಆಗಿ ಕುಳಿತಿರುವುದು ಕಂಡು ಬರುತ್ತದೆ. ಸರಪಳಿಯನ್ನು ಶಿವನ ತ್ರಿಶೂಲದ ಸಂಕೇತದೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಇದರ ಫಸ್ಟ್ ಲುಕ್ ಚಿರಂಜೀವಿ ಅವರ 'ಖೈದಿ ನಂ. 150' ಅನ್ನು ನೆನಪಿಸುತ್ತದೆ. ಚಿರಂಜೀವಿ ಜೊತೆಗೆ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಚಿರು ಅವರ ಸಹೋದರಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ತಮನ್ನಾ ಭಾಟಿಯಾ ಅವರು ನಟನ ಲೇಡಿಲವ್ ಆಗಿ ನಟಿಸಲಿದ್ದಾರೆ.
ಚಿತ್ರವು ಈಗಾಗಲೇ ಮೂರು ಶೆಡ್ಯೂಲ್‌ಗಳನ್ನು ಪೂರ್ಣಗೊಳಿಸಿದೆ. ಶೀಘ್ರವೇ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬಹುದು. ಸದ್ಯ, ಚಿತ್ರದ ಕೊನೆಯ ಶೆಡ್ಯೂಲ್‌ನ ಚಿತ್ರೀಕರಣ ಹೈದರಾಬಾದ್‌ನಲ್ಲಿ (Hyderabad) ನಡೆಯುತ್ತಿದೆ. ಭೋಲಾ ಶಂಕರ್ ಸಿನಿಮಾಕ್ಕೆ ಸಂಗೀತವನ್ನು ಮಹತಿ ಸ್ವರ ಸಾಗರ್ ನೀಡಿದರೆ, ದಡ್ಲಿ ಛಾಯಾಗ್ರಹಣವಿದೆ. ಸತ್ಯಾನಂದ್ ಸಹ ಬರಹಗಾರರಾಗಿದ್ದರೆ, ಮಾರ್ತಾಂಡ್ ಕೆ ವೆಂಕಟೇಶ್, ಎಎಸ್ ಪ್ರಕಾಶ್ ಮತ್ತು ಇತರರು ಚಿತ್ರದೊಂದಿಗೆ ಸಂಬಂಧ ಹೊಂದಿದ್ದಾರೆ. ಚಿತ್ರದ ಸಂಭಾಷಣೆ ತಿರುಪತಿ ಮಾಮಿದಾಳ ಅವರದ್ದು.
ಈ ಚಿತ್ರವಲ್ಲದೆ ಚಿರಂಜೀವಿ ಗಾಡ್ ಫಾದರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಟೀಸರ್ ಬಿಡುಗಡೆಯಾಗಿದೆ.
ಆಚಾರ್ಯ ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ.ಚಿರಂಜೀವಿ ತಮ್ಮ ಮಗ ರಾಮ್ ಚರಣ್ ಜೊತೆ ಆಚಾರ್ಯ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.