Lara Dutta: ಕೋಟಿ ಸಂಪಾದಿಸೋ ನಟಿಗೆ ಮೊಬೈಲ್ ಕವರ್ ತೆಗಿಯೋಕೆ ದುಡ್ಡಿಲ್ವಾ?

Published : Nov 21, 2021, 08:42 AM ISTUpdated : Nov 21, 2021, 08:49 AM IST

ಎಲ್ಲರೂ ಮೊಬೈಲ್ ಕವರ್‌ಗಳನ್ನು(Mobile Cover) ಆಗಾಗ ಬದಲಾಯಿಸುತ್ತಾರೆ. ಟ್ರೆಂಡಿಯಾಗಿ, ಫ್ಯಾಷನೇಬಲ್ ಆಗಿ ಕವರ್ ಮಾರುಕಟ್ಟೆಗೆ ಬರುತ್ತವೆ. ಆದರೆ ಈ ನಟಿಯ ಮೊಬೈಲ್ ಕವರ್ ಮಾತ್ರ ಭಾರೀ ಹಳೆಯದು. ಇಷ್ಟೊಂದು ದುಡಿಯುವಾಗ ಮೊಬೈಲ್ ಕವರ್ ಕೊಳ್ಳಲು ಹಣವಿಲ್ಲವಾ ?

PREV
17
Lara Dutta: ಕೋಟಿ ಸಂಪಾದಿಸೋ ನಟಿಗೆ ಮೊಬೈಲ್ ಕವರ್ ತೆಗಿಯೋಕೆ ದುಡ್ಡಿಲ್ವಾ?

ಲಾರಾ ದತ್ತಾ ಅವರು ತಮ್ಮ ಮುಂಬರುವ ಲಯನ್ಸ್‌ಗೇಟ್ ಪ್ಲೇ ಸಿರೀಸ್ ಹಿಕಪ್ಸ್ & ಹುಕ್‌ಅಪ್‌ಗೆ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಪತ್ರಕರ್ತರೊಬ್ಬರು ಮಾಧ್ಯಮ ಸಂವಾದಗಳಿಂದ ಅವರೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಒಬ್ಬ ಅಭಿಮಾನಿಯ ಗಮನ ಹೋಗಿದ್ದು ಲಾರಾ ಅವರ ಫೋನ್ ಕವರ್ ಕಡೆಗೆ.

27

ನಾನು ನನ್ನಂತವರು ಮಾತ್ರ ಬಡವರು ಅಂದುಕೊಂಡಿದ್ದೆ. ಆದರೆ ಲಾರಾ ದತ್ತಾ ಅವರು ಬಡವರೇ ? ಲಾರಾ ದತ್ತಾ ಅವರು ಎರಡು ವರ್ಷಗಳಿಂದ ತನ್ನ ಮೊಬೈಲ್ ಕವರ್ ಅನ್ನು ಬದಲಾಯಿಸಿಲ್ಲ ಎಂದು ಅವರ ಕಾಮೆಂಟ್ ಮಾಡಿದ್ದಾರೆ.

37

ವ್ಯಕ್ತಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಲಾರಾ, ಸರಿ. ಏಕೆಂದರೆ ಕೆಲವು ವಿಷಯಗಳು ಭಾವನಾತ್ಮಕ ಮೌಲ್ಯವನ್ನು ಹೊಂದಿವೆ ಎಂದು ಉತ್ತರ ಕೊಟ್ಟಿದ್ದಾರೆ.

47

ಇತ್ತೀಚೆಗೆ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ತನ್ನ ನಕಲಿ ಪ್ರೊಫೈಲ್‌ಗಳ ಬಗ್ಗೆ ಸ್ಪಷ್ಟೀಕರಣವನ್ನು ಹಂಚಿಕೊಳ್ಳಲು ಲಾರಾ Instagram ಪೋಸ್ಟ್ ಶೇರ್ ಮಾಡಿದ್ದರು. ನಿನ್ನೆಯಿಂದ, ನನ್ನ ಫೀಡ್ ಕೆಲವು ಮೀಮ್‌ಗಳು ಮತ್ತು ಕೆಲವು ಸಂದೇಶಗಳಿಂದ ಸಂಪೂರ್ಣವಾಗಿ ತುಂಬಿದೆ. ನಾನು ಯಾವುದೇ ಡೇಟಿಂಗ್ ಅಪ್ಲಿಕೇಶನ್‌ನಲ್ಲಿಲ್ಲಎಂದು ಅವರು ಹೇಳಿದ್ದರು.

57

ಲಾರಾ ಮಾಜಿ ಟೆನಿಸ್ ತಾರೆ ಮಹೇಶ್ ಭೂಪತಿ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಒಬ್ಬಳು ಮಗಳೂ ಇದ್ದಾಳೆ. ಹಿಕಪ್ಸ್ ಮತ್ತು ಹುಕ್‌ಅಪ್ಸ್ ಅನ್ನು ಕುನಾಲ್ ಕೊಹ್ಲಿ ಅವರು ನವೆಂಬರ್ 26 ರಿಂದ ಲಯನ್ಸ್‌ಗೇಟ್ ಪ್ಲೇನಲ್ಲಿ ಸ್ಟ್ರೀಮ್ ಮಾಡಲಿದ್ದಾರೆ. 

67

ಇದರಲ್ಲಿ ಪ್ರತೀಕ್ ಬಬ್ಬರ್, ದಿವ್ಯಾ ಸೇಠ್, ನಾಸರ್ ಅಬ್ದುಲ್ಲಾ, ಖಾಲಿದ್ ಸಿದ್ದಿಕಿ, ಮೇಯಾಂಗ್ ಚಾಂಗ್, ಮೀರಾ ಚೋಪ್ರಾ ಮತ್ತು ಐನ್ ಜೋಯಾ ಕೂಡ ನಟಿಸಿದ್ದಾರೆ.

77

ಲಾರಾ ಕೊನೆಯದಾಗಿ ಅಕ್ಷಯ್ ಕುಮಾರ್ ಜೊತೆ ಬೆಲ್ ಬಾಟಮ್ ನಲ್ಲಿ ಕಾಣಿಸಿಕೊಂಡಿದ್ದರು. ಅವರು ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories