ಪುಷ್ಪ 2 ಚಿತ್ರದಲ್ಲಿ ಫಹಾದ್ ಫಾಸಿಲ್ ಸಂಭಾವನೆ ಎಷ್ಟು ಗೊತ್ತಾ? ನೀವು ಬೆಚ್ಚಿ ಬೀಳ್ತೀರಿ!

Published : Nov 20, 2024, 05:41 PM IST

ಇಡೀ ಭಾರತವೇ ಕಾತುರದಿಂದ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದಾಗಿರುವ ಪುಷ್ಪ-2 ಚಿತ್ರ ಇದೇ ಡಿ.5ಕ್ಕೆ ಬಿಡುಗಡೆ ಆಗಲಿದೆ. ಆದರೆ, ಈ ಸಿನಿಮಾದಲ್ಲಿ ನಾಯಕ ನಾಯಕಿಯರ ಸಂಭಾವನೆ ಕುತೂಹಲಕಾರಿಯಾಗಿದೆ. ಈ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಫಹಾದ್ ಫಾಸಿಲ್ ಅವರ ಸಂಭಾವನೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ.  

PREV
15
ಪುಷ್ಪ 2 ಚಿತ್ರದಲ್ಲಿ ಫಹಾದ್ ಫಾಸಿಲ್ ಸಂಭಾವನೆ ಎಷ್ಟು ಗೊತ್ತಾ? ನೀವು ಬೆಚ್ಚಿ ಬೀಳ್ತೀರಿ!
ಫಹಾದ್ ಫಾಸಿಲ್

ಪುಷ್ಪ 2 ಸಿನಿಮಾ ಬಗ್ಗೆ ಈಗ ಎಲ್ಲೆಡೆ ಚರ್ಚೆ. ಟ್ರೈಲರ್ ಬಿಡುಗಡೆಯಾಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಪ್ರಚಾರ ಕಾರ್ಯಕ್ರಮಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಪ್ರಮುಖ ನಗರಗಳಲ್ಲಿ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಆದರೆ, ಈ ಸಿನಿಮಾದ ನಟರ ಸಂಭಾವನೆ ಬಗ್ಗೆಯೂ ಭಾರಿ ಚರ್ಚೆ ಆಗುತ್ತಿದೆ.

25

ಪುಷ್ಪ-2 ಸಿನಿಮಾದ ಚಿತ್ರದ ಬಜೆಟ್, ಕಲಾವಿದರ ಸಂಭಾವನೆಗಳು ಭಾರೀ ಚರ್ಚೆಯ ವಿಷಯವಾಗಿದೆ. ಅದರಲ್ಲಿಯೂ ನಟ ಅಲ್ಲು ಅರ್ಜುನ್ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ಕಲಾವಿದರ ಸಂಭಾವನೆ ಕೂಡ ಕುತೂಹಲ ಮೂಡಿಸಿದೆ.

35

ಇದರಲ್ಲಿ ಖಳನಾಯಕ ಫಹಾದ್ ಫಾಸಿಲ್ ಸಂಭಾವನೆ ಸೋರಿಕೆಯಾಗಿದೆ. ಪುಷ್ಪ ಚಿತ್ರಕ್ಕೆ ಅವರಿಗೆ 3.5 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು. ಆದರೆ, ಅದೇ ಸಿನಿಮಾದ ಮುಂದುವರಿದ ಭಾಗ ಪುಷ್ಪ-2 ಸಿನಿಮಾಗೆ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ ನಾಯಕನಿಗೆ 200 ಕೋಟಿ ರೂ. ಕೊಡಲಾಗಿದೆ ಎನ್ನಲಾಗುತ್ತಿದೆ.

45

ಪುಷ್ಪ-2 ಸಿನಿಮಾದ ಖಡಕ್ ಖಳನಾಯಕ ಫಹಾದ್ ಫಾಸಿಲ್ 8 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಈ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣಗಿಂದ ಕಡಿಮೆ ಸಂಭಾವನೆ ಪಡೆದಿರುವುದು ಅಚ್ಚರಿ ಮೂಡಿಸಿದೆ. ಇದೇ ಚಿತ್ರದಕ್ಕೆ ರಶ್ಮಿಕಾ ಮಂದಣ್ಣ ಅವರಿಗೆ 10 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆಯಂತೆ.

55

ಇನ್ನು ಮಲಯಾಳಂ ಸಿನಿಮಾದಲ್ಲಿ ನಾಯಕ, ಖಳನಾಯಕರಿಗೆ ಸಂಭಾವನೆ ಕಡಿಮೆ. ಹೀಗಾಗಿ, ಬಿಗ್ ಬಜೆಟ್ ಸಿನಿಮಾ ಪುಷ್ಪ-2 ದೊಡ್ಡ ಹಿಟ್ ಆದರೂ ಫಹಾದ್ ಫಾಸಿಲ್‌ಗೆ ಕಡಿಮೆ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಫಹಾದ್ ಫಾಸಿಲ್ ನಟನೆ ಪುಷ್ಪ-2ನಲ್ಲಿ ಜನರಿಗೆ ಇಷ್ಟವಾದರೆ ತೆಲುಗಿನಲ್ಲಿ ಬ್ಯುಸಿ ನಟ ಆಗಲಿದ್ದಾರೆ. ಫಹಾದ್ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Read more Photos on
click me!

Recommended Stories