ಫಹಾದ್ ಫಾಸಿಲ್ ಅವರ ಆಸ್ತಿ ಸುಮಾರು 50 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಲಯಾಳಂನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಅವರು, ಒಂದು ಚಿತ್ರಕ್ಕೆ 3.5 ಕೋಟಿಯಿಂದ 6 ಕೋಟಿ ರೂಪಾಯಿವರೆಗೆ ಪಡೆಯುತ್ತಾರೆ ಎನ್ನಲಾಗಿದೆ. ಫಾಸಿಲ್‌ಗೆ ಐಷಾರಾಮಿ ಕಾರುಗಳೆಂದರೆ ಪ್ರೀತಿ. ಅವರ ಬಳಿ ಪೋರ್ಷೆ 911 ಕೆರೆರಾ ಎಸ್, ಮರ್ಸಿಡಿಸ್ ಬೆಂಜ್ ಇ-ಕ್ಲಾಸ್, ರೇಂಜ್ ರೋವರ್ ವೋಗ್ ನಂತಹ ಕಾರುಗಳಿವೆ. ಪ್ರಸಿದ್ಧ ವಾಸ್ತುಶಿಲ್ಪಿ ಅಮಲ್ ಸುಫಿಯಾ ವಿನ್ಯಾಸಗೊಳಿಸಿದ ಕೊಚ್ಚಿಯಲ್ಲಿರುವ ಐಷಾರಾಮಿ ಮನೆಯೂ ಅವರದ್ದೇ.