ಎನ್.ಟಿ.ಆರ್ ಗೆ ಇಷ್ಟು ಖ್ಯಾತಿ ತಂದುಕೊಟ್ಟ ರಾಜಮೌಳಿ ಒಂದು ಸಂದರ್ಭದಲ್ಲಿ ಅವರ ಮರ್ಯಾದೆಗೆ ಧಕ್ಕೆ ತಂದರು. 'ಆರ್.ಆರ್.ಆರ್' ಪ್ರಚಾರದ ಭಾಗವಾಗಿ ಎನ್.ಟಿ.ಆರ್, ರಾಜಮೌಳಿ, ರಾಮ್ ಚರಣ್ ಒಂದು ರಾಷ್ಟ್ರೀಯ ಮಾಧ್ಯಮ ವಾಹಿನಿಗೆ ಸಂದರ್ಶನ ನೀಡಿದರು. ನಿರೂಪಕರು, "ಪ್ರೇಕ್ಷಕರ ಮನಸ್ಸಿನಿಂದ ಯಾವ ಸಿನಿಮಾವನ್ನು ತೆಗೆದುಹಾಕಬೇಕು?" ಎಂದು ಕೇಳಿದರು. ರಾಜಮೌಳಿ ಯೋಚಿಸದೆ 'ಸ್ಟೂಡೆಂಟ್ ನಂಬರ್ 1' ಎಂದರು.