ಸಿಲ್ಕ್ ಸ್ಮಿತಾ ಬಗ್ಗೆ ನಿಮಗೆ ತಿಳಿದಿಲ್ಲದ ಸಂಗತಿಗಳು!

First Published | Aug 11, 2020, 5:47 PM IST

ನಟಿ ಸಿಲ್ಕ್ ಸ್ಮಿತಾ ಸೌತ್‌ ಸಿನಿಮಾದ ಫೇಮಸ್‌ ನಟಿ. ಪಡ್ಡೆ ಹುಡುಗರ ನಿದ್ರೆ ಕೆಡಸುತ್ತಿದ್ದ ಸಿಲ್ಕ್‌ ಕನ್ನಡ ಸೇರಿದಂತೆ ತಮಿಳು,ತೆಲಗು, ಮಲೆಯಾಳಂ ಜೊತೆಗೆ ಬಾಲಿವುಡ್‌ನ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ನಟಿಯ  ಸಾವಿನ ಹಿಂದಿನ ಕಾರಣ ಇನ್ನೂ ನಿಗೂಢವಾಗಿ ಉಳಿದಿದೆ. ಖಿನ್ನತೆಯಿಂದಾಗಿ ಆಕೆ  ತನ್ನ ಜೀವವನ್ನು ತೆಗೆದುಕೊಂಡಳು ಎಂದು ಕೆಲವರು ನಂಬುತ್ತಾರೆ. ನಟಿ ಸಿಲ್ಕ್ ಸ್ಮಿತಾ ಬಗ್ಗೆ ನಿಮಗೆ  ತಿಳಿದಿಲ್ಲದ  ಸಂಗತಿಗಳು ಇಲ್ಲಿವೆ.

ಡಿಸೆಂಬರ್ 2, 1960 ರಂದು ಆಂಧ್ರಪ್ರದೇಶದಲ್ಲಿ ಜನಿಸಿದ ಸಿಲ್ಕ್ ಸ್ಮಿತಾ ನಿಜವಾದ ಹೆಸರು ವಿಜಯಲಕ್ಷ್ಮಿ ವಡ್ಲಪಟ್ಲ.
ವಿಜಯಲಕ್ಷ್ಮಿ ವಡ್ಲಪಟ್ಲಾ ಅವರ ಸ್ಟೇಜ್‌ ನೇಮ್‌ ಸಿಲ್ಕ್ ಸ್ಮಿತಾ.
Tap to resize

1979 ರ ತಮಿಳು ಸಿನಿಮಾ 'ವಂಡಿಚಕ್ಕರಂ'ನಲ್ಲಿ' ಸಿಲ್ಕ್ 'ಪಾತ್ರದಿಂದ ಮೊದಲು ಬಾರಿಗೆ ಗಮನ ಸೆಳೆದರು ವಿಜಯಲಕ್ಷ್ಮಿ ಉರ್ಫ್‌ ಸಿಲ್ಕ್‌.
ನಟಿ ತಮಿಳು, ಮಲೆಯಾಳಂ, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 450 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತನ್ನ 17 ನೇ ವಯಸ್ಸಿನಲ್ಲಿ ಎತ್ತಿನ ಬಂಡಿ ಚಾಲಕನನ್ನು ವಿವಾಹವಾಗಿದ ನಟಿ ವೈಯಕ್ತಿಕ ಕಾರಣಗಳಿಂದಾಗಿ ತನ್ನ ಗಂಡನ ಮನೆಯಿಂದ ಓಡಿಹೋದಳು.
ತುಂಬಾ ರೆಸ್ಪಾಸಿಬಲ್‌ ಹಾಗೂ ಮಹತ್ವಾಕಾಂಕ್ಷೆಯ ವ್ಯಕ್ತಿಯಾಗಿದ್ದ ಸಿಲ್ಕ್‌ ಸ್ಮಿತಾ ಅತಿ ಕಡಿಮೆ ಶಿಕ್ಷಣದ ಹೊರತಾಗಿಯೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಲು ಕಲಿತಿದ್ದರು.
ಅಂತರ್ಮುಖಿಯಾಗಿದ್ದ ಸಿಲ್ಕ್ ಸ್ಮಿತಾ ತುಂಬಾ ಕಡಿಮೆ ಆಪ್ತರನ್ನು ಹೊಂದಿದ್ದರು. ಯಾರೊಂದಿಗೂ ಬೇಗ ಸ್ನೇಹಿತೆಯಾಗುತ್ತಿರಲಿಲ್ಲ.
ಶಾರ್ಟ್‌ ಟೆಂಪರ್‌, ಇಚ್ಛಾಶಕ್ತಿ ಮತ್ತು ನೇರ ನುಡಿಗೆ ಹೆಸರುವಾಸಿಯಾಗಿದ್ದರು ಸಿಲ್ಕ್‌ ಸ್ಮಿತಾ.
ಶೂಟಿಂಗ್ ಪ್ರಾರಂಭವಾಗುವ ಮೊದಲೇ ಚಲನಚಿತ್ರ ಸೆಟ್‌ಗಳಿಗೆ ಹಾಜಾರಾಗುತ್ತಿದ್ದ ಇವರ ಟೈಮ್ ಸೆನ್ಸ್ ಚೆನ್ನಾಗಿತ್ತು.
ಅವಳ ಸ್ನೇಹಿತರು ಮತ್ತು ಅಭಿಮಾನಿಗಳು "ಮೃದು" ಮತ್ತು "ಮಗುವಿನಂತಹ" ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ನಟಿಯ ಬಗ್ಗೆ ವಿವರಿಸಿದ್ದಾರೆ.
ಮೇಕಪ್‌ನಲ್ಲಿ ಪರಿಣತಿಯನ್ನು ಹೊಂದಿದ್ದ ಇವರು ಉದ್ಯಮಕ್ಕೆ ಪ್ರವೇಶಿಸುವ ಮೊದಲು ಅದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು.
ನಟಿ ಸೆಪ್ಟೆಂಬರ್ 23,1996 ರಂದು ಆತ್ಮಹತ್ಯೆ ಮಾಡಿಕೊಂಡರು.
ಚೆನ್ನೈನ ತನ್ನ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಸಿಲ್ಕ್‌ ಸಾವಿನ ಹಿಂದಿನ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

Latest Videos

click me!